Englishবাংলাગુજરાતીहिन्दीമലയാളംதமிழ்తెలుగు

ಕನ್ನಡಕ್ಕೆ 'ಕಂಠೀರ'ವನಾಗಿ ತೆಲುಗಿನ 'ಸಿಂಹಾದ್ರಿ'

Posted by:
Published: Wednesday, January 27, 2010, 17:55 [IST]
 

'ದುನಿಯಾ' ವಿಜಯ್ ಗೆ ಮತ್ತೊಂದು ಬಂಪರ್ ಆಫರ್ ಹುಡುಕಿಕೊಂಡು ಬಂದಿದೆ. ಕೋಟಿ ನಿರ್ಮಾಪಕ ರಾಮು ನಿರ್ಮಾಣದಲ್ಲಿ 'ಕಂಠೀರವ' ಚಿತ್ರ ಸೆಟ್ಟೇರಲು ಸಿದ್ಧತೆ ನಡೆಸಿದೆ. ತೆಲುಗಿನಲ್ಲಿ ದಾಖಲೆ ನಿರ್ಮಿಸಿದ್ದ 'ಸಿಂಹಾದ್ರಿ' ಚಿತ್ರದ ರೀಮೇಕ್ ಇದಾಗಿದೆ. ಆಕ್ಷನ್, ಕಟ್ ಹೇಳಲಿರುವುದು ತುಷರ್ ರಂಗನಾಥ್.

ಸದ್ಯಕ್ಕೆ ರಾಮು ಎರಡು ಚಿತ್ರಗಳ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಮಾಲಾಶ್ರೀ ಮುಖ್ಯಭೂಮಿಕೆಯಲ್ಲಿರುವ 'ವೀರ' ಹಾಗೂ ಚಿರಂಜೀವಿ ಸರ್ಜಾ ನಾಯಕನಾಗಿ 'ಗಂಡೆದೆ' ಚಿತ್ರಗಳು ಮುಗಿದ ಬಳಿಕವಷ್ಟೇ 'ಕಂಠೀರವ' ಸೆಟ್ಟೇರಲಿದೆ. ತೆಲುಗಿನ ಸಿಂಹಾದ್ರಿ ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ನಾಯಕ ನಟನಾಗಿ ಅಭಿನಯಿಸಿದ್ದರು.

ವಿಜಯ್ ಸಹ ಹಲವಾರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಎಸ್ ಮಹೇಂದರ್ ನಿರ್ದೇಶನದ 'ವೀರ ಬಾಹು' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶಂಕರ್ ಐಪಿಎಸ್ ಹಾಗೂ ಕರಿ ಚಿರತೆ ಚಿತ್ರಗಳು ಬಿಡುಗಡೆ ಸಿದ್ಧವಾಗಿವೆ.

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons