Englishবাংলাગુજરાતીहिन्दीമലയാളംதமிழ்తెలుగు

ವೀರ ಚಿತ್ರೀಕರಣದಲ್ಲಿ ರಾಧಿಕಾಗಾಂಧಿಗೆ ಗಾಯ

Published: Wednesday, January 13, 2010, 17:29 [IST]
 

'ವೀರ' ಚಿತ್ರದ ಸಾಹಸ ಸನ್ನಿವೇಶಗಳಲ್ಲಿ ಪಾಲ್ಗೊಂಡಿರುವ ರಾಧಿಕಾ ಗಾಂಧಿಗೆ ಸಣ್ಣಪುಟ್ಟ ತರಚು ಗಾಯಗಳಾಗಿವೆ. ಅಂದಹಾಗೆ ರಾಧಿಕಾಗಾಂಧಿ ಚೇಸಿಂಗ್ ಸನ್ನಿವೇಶದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲಸಲವಂತೆ. ಮೈನವಿರೇಳಿಸುವ ಆ ಚೇಸಿಂಗ್ ಸನ್ನಿವೇಶಗಳನ್ನು ನೆನಸಿಕೊಂಡರೆ ಈಗಲೂ ಅವರ ಮೈ ಜುಂ ಎನ್ನುತ್ತದಂತೆ.

ರಾಮು ನಿರ್ಮಿಸುತ್ತಿರುವ ಮತ್ತ್ತೊಂದು ಅದ್ದೂರಿ ಚಿತ್ರ 'ವೀರ'. ಈ ಚಿತ್ರದ ಸಾಹಸ ದೃಶ್ಯಗಳನ್ನು ನಂದಿಬೆಟ್ಟದ ತಪ್ಪಲಿನಲ್ಲಿ ಕಳೆದ ವಾರ ಚಿತ್ರೀಕರಿಸಿಕೊಳ್ಳಲಾಯಿತು. 15 ಸುಮೋ, 1 ಟಾಟಾ ಸಫಾರಿ, 1 ಐಕಾನ್, 1 ಓಫೆರಾ ಅಸ್ಟ್ರ, ಇವುಗಳನ್ನು ಹಿಂಬಾಲಿಸುತ್ತಾ ಪೊಲೀಸ್ ಜೀಪ್...ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದವು.

ಈ ಅದ್ಭುತ ಮೈನವಿರೇಳಿಸುವ ಸನ್ನಿವೇಶದಲ್ಲಿ ಮಾಲಾಶ್ರೀ, ಅವಿನಾಶ್, ಕಿರಣ್, ರಾಧಿಕಾಗಾಂಧಿ, ಶ್ರಾವಣ್, ಸಯ್ಯಾಜಿ ಶಿಂದೆ ಪಾಲ್ಗೊಂಡಿದ್ದರು. ರವಿವರ್ಮ ಸಾಹಸ ನಿರ್ದೇಶನದಲ್ಲಿ ನಾಲ್ಕು ಸೂಪರ್ 35, ಸ್ಟೆಡಿಕ್ಯಾಮ್, ಜಿಮ್ಮಿಜಿಪ್ ಬಳಸಿ 10 ದಿನಗಳ ಕಾಲ ರು.60 ಲಕ್ಷ ವೆಚ್ಚದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಎಂ ಕೆ ಶರ್ಮ ಅವರ ನಿರ್ದೇಶನದಲ್ಲಿ ರಾಹುಲ್ ತಮ್ಮ ಕ್ಯಾಮೆರಾದಲ್ಲಿ ಈ ಸಾಹಸ ಸನ್ನಿವೇಶಗಳನ್ನು ಸೆರೆಹಿಡಿದರು.

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons