Englishবাংলাગુજરાતીहिन्दीമലയാളംதமிழ்తెలుగు
 
Share This Story

ಅಂತರ್ಜಾಲದಲ್ಲಿ ಪ್ರೀತಿಗಾಗಿ ರಮೇಶ್ ತಡಕಾಟ!

Published: Friday, January 8, 2010, 17:30 [IST]

ಈಗ ಕಂಪ್ಯೂಟರ್ ಯುಗ. ಗಣಕಯಂತ್ರ ಬಿಟ್ಟು ಜೀವನವೇ ನಡೆಸಲಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರೀತಿಗೂ ಕೂಡ ಈ ಪೆಟ್ಟಿಗೆ ಸಹಾಯಕವಾಗಿದೆ. ಅಂತರ್ಜಾಲದ ಮೂಲಕ ಪ್ರೀತಿಯನ್ನು ಹುಡುಕುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಅದೇ 'ಪ್ರೀತಿಯಿಂದ ರಮೇಶ್'.

ಶಾಂತಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ರವಿಕುಮಾರ್ ನಿರ್ಮಿಸುತ್ತಿರುವ 'ಪ್ರೀತಿಯಿಂದ ರಮೇಶ್' ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ನೀಡಲಾಗುತ್ತಿದೆ. ಹಿಂದೆ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿರುವ ಗುಣಕುಮಾರ್ ಈ ಚಿತ್ರದ ನಿರ್ದೇಶಕರು. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ಎ.ಟಿ.ರವೀಶ್ ಸಂಗೀತ, ಎ.ಸಿ.ಮಹೇಂದರ್ ಛಾಯಾಗ್ರಹಣ, ವಿಜಯಾಪ್ರಸಾದ್ ಸಂಭಾಷಣೆ, ರವಿ ಸಂಕಲನ, ಕೆ.ಕಲ್ಯಾಣ್ ಮತ್ತು ವಿ.ನಾಗೇಂದ್ರಪ್ರಸಾದ್ ಗೀತರಚನೆಯಿರುವ ಚಿತ್ರದ ತಾರಾಗಣದಲ್ಲಿ ರಮೇಶ್, ರಮನಿತೋ ಚೌಧರಿ, ಕಿರಣ್(ಹಾಗೆಸುಮ್ಮನೆ), ಅನಂತನಾಗ್, ಸುಮಗುವಾ ಮುಂತಾದವರಿದ್ದಾರೆ.

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons