Englishবাংলাગુજરાતીहिन्दीമലയാളംதமிழ்తెలుగు
 
Share This Story

'ಬೊಂಬಾಟ್ ಕಾರ್' ಹತ್ತಿದ ರಮ್ಯಾ ಕೃಷ್ಣ

Published: Thursday, December 10, 2009, 12:35 [IST]

ನಟಿ ರಮ್ಯಕೃಷ್ಣ 'ಬೊಂಬಾಟ್ ಕಾರ್' ಹತ್ತಿದ್ದಾರೆ. ದಕ್ಷಿಣದಲ್ಲಿ ರಾಮ ನಾರಾಯಣನ್ ನಿರ್ದೇಶಿಸುತ್ತಿರುವ 120ನೇ ಚಿತ್ರ 'ಬೊಂಬಾಟ್ ಕಾರ್'. ಅಂದುಕೊಂಡ ಸ್ಥಳಗಳಲ್ಲಿ ಈಗಾಗಲೇ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರವನ್ನು ಎನ್ ರಾಧಾ ನಿರ್ಮಿಸುತ್ತಿದ್ದು ಹೊಸದಾಗಿ ಚಿತ್ರತಂಡಕ್ಕೆ ರಮ್ಯ ಕೃಷ್ಣ ಸೇರ್ಪಡೆಯಾಗಿರುವುದು ವಿಶೇಷ.

ಭೈರವಿ, ಶಾಂಭವಿ, ದಾಕ್ಷಾಯಿಣಿ, ಭುವನೇಶ್ವರಿ, ಜಗದೀಶ್ವರಿ, ಜಯಸೂರ್ಯ ಮತ್ತು ಶ್ರೀಕಾಳಿಕಾಂಬ ಚಿತ್ರಗಳನ್ನು ಈಗಾಗಲೇ ರಾಮ ನಾರಾಯಣನ್ ಕನ್ನಡದಲ್ಲಿ ನಿರ್ದೇಶಿಸಿದ್ದಾರೆ. ಹೆಸರಿಗೆ ತಕ್ಕಂತೆ ಈ ಚಿತ್ರಕ್ಕೆ ವಿಭಿನ್ನವಾದ ಕಾರೊಂದನ್ನು ತಯಾರಿಸಲಾಗಿದೆ. ಬಹುತೇಕ ಚಿತ್ರಕತೆ ಈ ಕಾರಿನಲ್ಲೇ ನಡೆಯುತ್ತದೆ. ಮೈನವಿರೇಳಿಸುವ ಒಂದು ಗಂಟೆಯ ಗ್ರಾಫಿಕ್ ಚಿತ್ರದ ಪ್ರಮುಖ ಆಕರ್ಷಣೆ ಎನ್ನುತ್ತಾರೆ ರಾಮ ನಾರಾಯಣನ್.

ದ್ವಾರಕಿ ರಾಘವ್ ಅವರ ಸಾಹಿತ್ಯಕ್ಕೆ ದೇವಾ ಅವರು ಸಂಗೀತ ಸಂಯೋಜಿಸಿದ್ದಾರೆ. ಕೆ ಎಸ್ ಚೆಲುವರಾಜ್ ಮತ್ತು ಕಾಶಿ ವಿಶ್ವ ಛಾಯಾಗ್ರಹಣವಿದೆ. ಕೆ ಸಿತಾರಾ ಅವರ ಸಂಭಾಷಣೆ ಇದ್ದು ತಾರಾಗಣದಲ್ಲಿ ರವಿಶಂಕರ್, ಸಂಗೀತಾ, ರಮ್ಯಕೃಷ್ಣ, ಶರಣ್, ದೊಡ್ಡಣ್ಣ, ರಿಯಾಜ್ ಖಾನ್, ಮಿಥಿಲಾ ನಾಯಕ್, ನಾಸಿರ್ ಹಾಗೂ ಬೇಬಿ ಕೃತಿಕಾ ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಎಲ್ಲ ಪ್ರಮುಖ ಸುದ್ದಿಗಳ ಮೇಲೆ ಒನ್ಇಂಡಿಯಾ ನೋಟ. ನಿರಂತರ ಸುದ್ದಿ ಪಡೆಯಲು Facebook ಮತ್ತು Twitter ಮೇಲೆ ಇರಲಿ ಕಣ್ಣು.
Topics: ಭುವನೇಶ್ವರಿ, ರಮ್ಯಕೃಷ್ಣ, ಬೊಂಬಾಟ್ ಕಾರ್, ಭೈರವಿ, ಶಾಂಭವಿ, ದಾಕ್ಷಾಯಣಿ, bombat car, ramya krishna, rama narayanan, n radha
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada