Englishবাংলাગુજરાતીहिन्दीമലയാളംதமிழ்తెలుగు

ಪೊಲೀಸ್ ಕ್ವಾಟ್ರಸ್ ಗೆ ರೀರೆಕಾರ್ಡಿಂಗ್ ಪೂರ್ಣ

Published: Tuesday, September 15, 2009, 18:37 [IST]
 

'ಸೈನೈಡ್ ಚಿತ್ರವನ್ನು ನಿರ್ದೇಶಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದ ಎ.ಎಂ.ಆರ್.ರಮೇಶ್ ನಿರ್ದೇಶನದ ಮತ್ತೊಂದು ಚಿತ್ರ 'ಪೊಲೀಸ್ ಕ್ವಾಟ್ರಸ್. ಪ್ರಸ್ತುತ ಚಿತ್ರಕ್ಕೆ ಅಶ್ವಿನಿ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಸಂಗೀತ ನಿರ್ದೇಶಕ ಜೇಮ್ಸ್ ವಸಂತನ್ ಅವರ ಸಾರಥ್ಯದಲ್ಲಿ ರೀರೆಕಾರ್ಡಿಂಗ್ ಮುಕ್ತಾಯವಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ಪೂರೈಸಿರುವ ಈ ಚಿತ್ರ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ 'ಪೊಲೀಸ್ ಕ್ವಾಟ್ರಸ್ ಹಾಗೂ ತಮಿಳಿನಲ್ಲಿ 'ಕಾವಲರ್ ಕುಡಿಯಿರುಪ್ಪು ಎಂಬ ಶೀರ್ಷಿಕೆಯಿಂದ ಹೊರಹೊಮ್ಮುತ್ತಿದೆ.

ವಸಿಷ್ಠ ಪಿಕ್ಚರ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ದೇಶಕರು ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ದ್ವಾರಕನಾಥ್ ಕ್ಯಾಮೆರಾ, ಆಂಟೋನಿ ಸಂಕಲನ, ಜೇಮ್ಸ್ ವಸಂತನ್ ಸಂಗೀತ, ತವಸಿರಾಜ್ ಸಾಹಸವಿರುವ ಈ ಚಿತ್ರದ ತಾರಾಬಳಗದಲ್ಲಿ ಅನೀಷ್, ಸೋನು, ಅವಿನಾಶ್, ಶರಣ್ಯ, ದಿಲೀಪ್‌ರಾಜ್, ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons