Englishবাংলাગુજરાતીहिन्दीമലയാളംதமிழ்తెలుగు

'ಅಭಿಮನ್ಯು' ಹಿಂದಿ ಚಿತ್ರದಲ್ಲಿ ಪೂಜಾಗಾಂಧಿ!

Published: Wednesday, July 29, 2009, 12:16 [IST]
 

'ಮುಂಗಾರು ಮಳೆ' ಚಿತ್ರ ಹಿಂದಿ ಭಾಷೆಗೆ ರೀಮೇಕ್ ಆಗಲಿರುವ ಸುದ್ದಿ ಜಗಜ್ಜಾಹೀರಾಗಿದೆ. ಈಗ ಆ ಚಿತ್ರದ ನಾಯಕಿ ಪೂಜಾಗಾಂಧಿ ಅವರನ್ನು ಹಿಂದಿಯಲ್ಲಿ ನಟಿಸುವ ಅವಕಾಶ ಅರಸಿಕೊಂಡು ಬಂದಿದೆ. ಪೂಜಾ ನಟಿಸಲಿರುವ ಹಿಂದಿ ಚಿತ್ರದ ಹೆಸರು 'ಅಭಿಮನ್ಯು'. ಈ ಚಿತ್ರವನ್ನು 'ಮೈ ಬ್ರದರ್ ನಿಖಿಲ್' ಖ್ಯಾತಿಯ ಓನಿರ್ ನಿರ್ದೇಶಿಸಲಿದ್ದಾರೆ. ಮಕ್ಕಳ ಶೋಷಣೆ ಕುರಿತ ಕಥಾ ಹಂದರವನ್ನು ಅಭಿಮನ್ಯು ಚಿತ್ರ ಒಳಗೊಂಡಿದೆಯಂತೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೂಜಾಗಾಂಧಿ, ಚಿತ್ರದಲ್ಲಿ ನನ್ನುದು ಸಣ್ಣ ಪಾತ್ರ. ಪಾತ್ರ ಚಿಕ್ಕದಾದರೂ ಗಮನಾರ್ಹವಾಗಿದೆ. ಚಿತ್ರದ ಬಹುತೇಕ ಭಾಗವನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗುತ್ತದೆ. ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಈ ಕಾರಣಕ್ಕಾಗಿಯೇ ನಾನು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಎನ್ನುತ್ತಾರೆ.

ಅಂದಹಾಗೆ ಇದೊಂದು ಲಘು ಚಿತ್ರವಾಗಿದೆ. ಇದುವರೆಗೂ ಮಕ್ಕಳ ಶೋಷಣೆ ಕುರಿತು ಬಾಲಿವುಡ್ ನಲ್ಲಿ ಐದು ಲಘು ಚಿತ್ರಗಳು ತೆರೆಕಂಡಿವೆ. ಅಭಿಮನ್ಯು ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದೆ. ಸಂಜಯ್ ಸೂರಿ, ರಾಧಿಕಾ ಆಪ್ಟೆ, ಶೆರ್ನಾಜ್ ಪಟೇಲ್ ಮತ್ತು ರಾಹುಲ್ ಬೋಸ್ ಚಿತ್ರದಲ್ಲಿನ ಇತರೆ ನಟರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons