Englishবাংলাગુજરાતીहिन्दीമലയാളംதமிழ்తెలుగు

ಕನ್ನಡಕ್ಕೆ 'ಹರ'ನಾಗಿ ಬಂದ ತೆಲುಗಿನ ಚಿನ್ನೋಡು!

Published: Thursday, July 2, 2009, 16:30 [IST]
 

ಗಣೇಶ್ ಅಭಿನಯದ 'ಉಲ್ಲಾಸ ಉತ್ಸಾಹ' ನಿರ್ದೇಶಿಸಿರುವ ದೇವರಾಜ್ ಪಾಲನ್ ಆ ಚಿತ್ರದ ಬಿಡುಗಡೆಗೆ ಮುನ್ನವೇ ಹರನನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಮುಹೂರ್ತ ಪೂಜೆ ನಡೆದು 2 ದಿನ ಚಿತ್ರೀಕರಣ ಕೂಡ ಮಾಡಲಾಗಿದೆ. ಆಷಾಢದ ನಂತರ ಜುಲೈ 8ರಿಂದ ಬೆಂಗಳೂರಿನ ಸುತ್ತಮುತ್ತ ನಿರಂತರ ಚಿತ್ರೀಕರಣ ಪ್ರಾರಂಭವಾಗಲಿದೆ.

ತೆಲುಗಿನ 'ಚಿನ್ನೋಡು' ಚಿತ್ರದ ಕಥೆಯನ್ನು ನಮ್ಮ ನೇಟಿವಿಟಿಗೆ ತಕ್ಕಂತೆ ಅರ್ಧಕ್ಕಿಂತಲೂ ಹೆಚ್ಚು ಬದಲಾಯಿಸಿಕೊಂಡು ಚಿತ್ರಕಥೆ ಮಾಡಿದ್ದಾರೆ ನಿರ್ದೇಶಕ ದೇವರಾಜ್ ಪಾಲನ್. ಚಿತ್ರದ ಕೇಂದ್ರಬಿಂದು ಆದ ಜೈಲರ್ ಪಾತ್ರವನ್ನು ನಟ ಅವಿನಾಶ್ ಮಾಡುತ್ತಿದ್ದಾರೆ. ಅಲ್ಲದೆ, 2ನೇ ಹಂತದಲ್ಲಿ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ 20-25 ದಿನಗಳ ಕಾಲ ಚಿತ್ರೀಕರಣ ಮಾಡಲಾಗುವುದು.

ಬಿ.ಜೆ.ಪಿ. ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿರುವ ಮುನಿಹನುಮಪ್ಪ ತುಳಸೀರಾಮ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಯಕ ವಸಂತ್ ಮೂಲತಃ ರಂಗಭೂಮಿ ಕಲಾವಿದ. ಕನ್ನಡದಲ್ಲಿ ಗ್ಲಾಮರ್ ನಟಿ ಎಂದೇ ಗುರುತಿಸಿಕೊಳ್ಳುತ್ತಿರುವ ಪ್ರಜ್ಞಾ ನಾಯಕಿ. ಇದು ಪ್ರಜ್ಞಾ ಅಭಿನಯದ 7ನೇ ಚಿತ್ರ. ಯಥಾಪ್ರಕಾರ ಬೋಲ್ಡ್ ಪಾತ್ರ.

ರೇಣುಕುಮಾರ್ ಅವರ ಸಂಗೀತ ಸಂಯೋಜನೆ, ಕೆ.ಎಂ. ವಿಷ್ಣುವರ್ಧನ್‌ರ ಛಾಯಾಗ್ರಹಣ, ರುದ್ರೇಶ್ ಅವರ ಸಂಭಾಷಣೆ, ರಾಮ್‌ನಾರಾಯಣ್‌ಅವರ ಸಾಹಿತ್ಯ, ರವಿವರ್ಮರ ಸಾಹಸ-ಸಂಯೋಜನೆ, ಚಿನ್ನಿ ಪ್ರಕಾಶ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವಿನಯಾಪ್ರಕಾಶ್, ಧರ್ಮ, ರಾಹುಲ್ ದೇವ್, ಚಂದ್ರಶೇಖರ್, ಶರಣ್, ಸಾಧು ಕೋಕಿಲಾ, ಲೋಕನಾಥ್, ಸತ್ಯಜಿತ್, ಟೆನ್ನಿಸ್ ಕೃಷ್ಣ ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons