Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶುಭಾ, ವಿಜಯ್ ಯಶಸ್ವಿ ಜೋಡಿಯ ತಾಕತ್ತು
ತಾಕತ್ತು ಚಿತ್ರದ ಧ್ವನಿಸುರುಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನಲ್ಲಿ ಜಾನಪದ ಹಾಗೂ ಸಾಂಸ್ಕೃತಿಕ ಟ್ಯೂನ್ ಗಳಿಗೆ ಪ್ರಾಮುಖ್ಯತೆ ನೀಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಶುಭಾ. ಬಸ್ಸಿನಲ್ಲಿ ಚಿತ್ರೀಕರಿಸಿರುವ ಹಾಡು ಕಿವಿಗಳಿಗೆ ಇಂಪಾಗಿದೆ. ಹಾಗೆಯೇ ಚಿತ್ರದಲ್ಲಿ ಒಂದು ಆಧುನಿಕ ಹಾಡೂ ಸಹ ಇದೆ. ಶುಭ ಪುಂಜ ನಟಿಸಿದ 'ಚಂಡ' ಜಯಭೇರಿ ಬಾರಿಸಿತ್ತು. ನಂತರ ಬಂದ ವಿಜಯ್ ರೊಂದಿಗಿನ 'ಅಂಜದಿರು' ಚಿತ್ರ ಬಾಕ್ಸಾಫೀಸಲ್ಲಿ ಸೋತಿತ್ತು.
'ಚಂಡ' ಚಿತ್ರದ ದಾಖಲೆಯನ್ನು ತಾಕತ್ತು ಮುರಿಯಲಿದೆ ಎಂಬ ವಿಶ್ವಾಸವನ್ನು ಶುಭಾ ಪುಂಜ ವ್ಯಕ್ತಪಡಿಸಿದರು. ಗಂಭೀರ ಪಾತ್ರಗಳಿಂದ ಕೊಂಚ ಬಿಡುವು ತೆಗೆದುಕೊಂಡು ಕಾಮಿಡಿ ಪಾತ್ರಗಳ ಕಡೆಗೆ ಶುಭಾ ಒಲವು ತೋರಿಸಿದ್ದಾರೆ. ಗೋಲ್ ಮಾಲ್ ಎಂಬ ಸಂಪೂರ್ಣ ಹಾಸ್ಯ ಪ್ರಧಾನಚಿತ್ರದಲ್ಲಿ ನಟಿಸುತ್ತಿದ್ದು, ಇದು ಹಿಂದಿ ಚಿತ್ರದ ರೀಮೇಕ್ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪ್ರಮೋದ್ ಚಕ್ರವರ್ತಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಸ್ತತ ಕುಶಾಲ ನಗರದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)