Englishবাংলাગુજરાતીहिन्दीമലയാളംதமிழ்తెలుగు

ಕಡಬಗೆರೆಯ ಶಾಲೆಯಲ್ಲಿ ಕಮಲದ ಪ್ರಾರ್ಥನೆ

Published: Wednesday, January 7, 2009, 15:12 [IST]
 

ಇದು ಆಡಳಿತ ಪಕ್ಷದ ಪ್ರಾರ್ಥನಾಗೀತೆಯಲ್ಲ. ಕೆಸರಿನ ಕಮಲದ ಹಾಡು. ಸಿನೆಮಾ ಮನೋರಂಜನ ಕ್ಷೇತ್ರ. ಇದರಿಂದ ತಿಳಿದುಕೊಳ್ಳುವುದು ಏನಿಲ್ಲ ಎನ್ನುವ ಮಂದಿಗೆ 'ಕೆಸರಿನ ಕಮಲ' ಉತ್ತರ ನೀಡಲಿದೆ. ಚಿತ್ರದ 'ನಾಮಧಾತೆ ಶಾರದಮಾತೆ ಲೋಕವಿಧೆಯತೆ ನಿನ್ನಯ ಗೀತೆ' ಎಂಬ ಹಾಡಿನ ಚಿತ್ರೀಕರಣ ಮಾಸ್ಟರ್ ಶ್ರೀನಿವಾಸ್ ಅಭಿನಯದಲ್ಲಿ ಕಡಬಗೆರೆಯ ಪ್ರೌಡಶಾಲೆಯಲ್ಲಿ ಚಿತ್ರೀಕೃತವಾಯಿತು.

ಈ ಗೀತೆಯನ್ನು ಆಲಿಸಿದ ಶಾಲಾ ಮುಖ್ಯೋಪಾದ್ಯಾಯರು ಮೇಲಿನ ಗೀತೆಯನ್ನು ಶಾಲೆಯ ಪ್ರತಿನಿತ್ಯದ ಪ್ರಾರ್ಥನಾಗೀತೆಯಾಗಿಸಿಕೊಂಡಿದ್ದಾರೆ. ಈ ಬೆಳವಣಿಗೆ ನಮಗೆ ಸಂತಸ ತಂದಿದೆ ಎನ್ನುತ್ತಾರೆ ನಿರ್ಮಾಪಕರು. ಸುಂಕದಕಟ್ಟೆ, ಹೆಗ್ಗನಹಳ್ಳಿಕ್ರಾಸ್ ಮುಂತಾದಕಡೆ 20ದಿನಗಳಲ್ಲಿ 'ಕೆಸರಿನ ಕಮಲ'ಕ್ಕೆ ನಿರ್ದೇಶಕ ಸಿದ್ದರಾಜು ಚಿತ್ರೀಕರಣ ನಡೆಸಿದ್ದಾರೆ.

ಶ್ರೀನಿವಾಸ ಎಂಟರ್ ಟೈನರ್ಸ್ ಲಾಂಛನದಲ್ಲಿ ಸಿಂಗಯ್ಯ, ಪಂಚಕಟ್ಟಿಮಠ್ ಹಾಗೂ ರಮೇಶ್‌ಹಿರೇರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಿದ್ದರಾಜು ಕತೆ, ಚಿತ್ರಕತೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಶ್ರೀಹರ್ಷ ಸಂಗೀತ, ಮಂಜು ಛಾಯಾಗ್ರಹಣ, ಚಂದ್ರಕಾಂತ್ ಗೀತರಚನೆ, ಆನಂದಕುಮಾರ್ ಸಂಭಾಷಣೆ, ಸಂಜೀವರೆಡ್ಡಿ ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿಮಾಸ್ಟರ್‌ಶ್ರೀನಿವಾಸ, ಶೋಭರಾಜ್, ರಾಮಕೃಷ್ಣ, ಬ್ಯಾಂಕ್‌ಜನಾರ್ಧನ್, ಕರಿಬಸವಯ್ಯ, ಬಿರಾದರ್ ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಕೆಸರಿನ ಕಮಲ ಒಲ್ಲೆಯೆಂದ ಜಗದೀಶ್ ಶೆಟ್ಟರ್

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons