ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದದ್ದು ಹಳೆಯ ಸುದ್ದಿ. ಆದರೆ ಇದೀಗ ಬಿಡುಗಡೆಗೆಯಾಗುತ್ತಿರುವ ದರ್ಶನ್ ಅವರ ಮತ್ತೊಂದು ಚಿತ್ರ 'ಚಿಂಗಾರಿ' ಆಡಿಯೋ ಕೂಡ ಬಂಪರ್ ಹಿಟ್ ಆಗಿದೆ. ಇದರಿಂದ ದರ್ಶನ್ ಅಭಿಮಾನಿಗಳ ಪುಳಕಗೊಂಡಿದ್ದಾರೆ.
ವಿ ಹರಿಕೃಷ್ಣ ಸಂಗೀತ ಸಂಯೋಜನೆಯ 'ಚಿಂಗಾರಿ' ಆಡಿಯೋ ಭಾರಿ ಸಂಖ್ಯೆಯಲ್ಲಿ ಮಾರಾಟವಾಗಿದೆ. ಕೊರಿಯೋಗ್ರಾಫರ್ ಎ ಹರ್ಷ ನಿರ್ದೇಶನದ ಚಿತ್ರವನ್ನು ಮಹದೇವ್, ಮುನೇಗೌಡ ನಿರ್ಮಿಸಿದ್ದಾರೆ. ಕೊಡಗಿನ ಕಿತ್ತಳೆ ದೀಪಿಕಾ ಕಾಮಯ್ಯ ಚಿತ್ರದ ನಾಯಕಿ.
ಚಿತ್ರದ ಉಳಿದ ಪಾತ್ರವರ್ಗದಲ್ಲಿ ಭಾವನಾ, ರಂಗಾಯಣ ರಘು, ಸೃಜನ್ ಲೋಕೇಶ್ ಮುಂತಾದವರು ಇದ್ದಾರೆ. ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ 'ಚಿಂಗಾರಿ'ಗೆ ಯೋಗಾನಂದ್ ಮುದ್ದಾನ್ ಹಾಗೂ ಸಂತೋಷ್ ಸಂಭಾಷಣೆ ಬರೆದಿದ್ದಾರೆ. (ಏಜೆನ್ಸೀಸ್)