ಕಾಮಿಡಿ ಸ್ಟಾರ್ ಕೋಮಲ್ ಕುಮಾರ್ ಅಭಿನಯದ 'ಗೋವಿಂದಾಯ ನಮಃ' ಚಿತ್ರದ ಹಾಡೊಂದು ಯೂಟ್ಯೂಬ್‌ನಲ್ಲಿ ಚಂಕಾಯ್ಸಿ ಚಿಂದಿ ಉಡಾಯಿಸಿದೆ. "ಪ್ಯಾರ್‌ಗೆ ಆಗ್ಬಿಟ್ಟೈತೆ ನಮ್ಬೂಕೆ ಜಾನ್‌ಗೆ ಹೋಗ್ಬಿಟ್ಟೈತೆ..." ಎಂಬ ಉರ್ದು ಮಿಶ್ರಿತ ಕನ್ನಡ ಹಾಡು ಎಲ್ಲರ ನಾಲಿಗೆ ಮೇಲೂ ನುಲಿದು ನಲಿದಾಡುತ್ತಿದೆ.
ಜನಪ್ರಿಯ ಸಾಮಾಜಿಕ ತಾಣ ಯೂಟ್ಯೂಬ್‌ಗೆ ಈ ಹಾಡು ಹಾಕಿದ ಮೂರೇ ದಿನಕ್ಕೆ 65,000ಕ್ಕೂ ಹೆಚ್ಚು ಹಿಟ್‌ಗಳನ್ನು ದಾಖಲಿಸಿದೆ. ಕನ್ನಡದ ಹಾಡೊಂದಕ್ಕೆ ಈ ರೀತಿಯ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿರುವ ಬಗ್ಗೆ ಕೋಮಲ್ ಆಶ್ಚರ್ಯಚಕಿತರಾಗಿದ್ದಾರೆ.
ಮುಂದೊಂದು ದಿನ "ಪ್ಯಾರ್‌ಗೆ ಆಗ್ಬಿಟ್ಟೈತೆ..." ಹಾಡು ಧನುಷ್ ಹಾಡಿರುವ "ಕೊಲವೆರಿ ಡಿ"ಗೆ ಚಮಕ್ ನೀಡಿದರೂ ಅಚ್ಚರಿಯಿಲ್ಲ. ಪ್ಯಾರ್ ಆಗ್ಬಿಟ್ಟೈತೆ ಹಾಡಿಗೆ ಸಾಹಿತ್ಯವನ್ನು ಚಿತ್ರದ ನಿರ್ದೇಶಕ ಪವನ್ ವಡೆಯರ್ ಬರೆದಿದ್ದಾರೆ. ಗಾಯಕರಾದ ಚೇತನ್ ಹಾಗೂ ಇಂದು ನಾಗರಾಜ್ ತಮ್ಮದೇ ಆದ ಶೈಲಿಯಲ್ಲಿ ಹಾಡಿದ್ದಾರೆ. ಹಲವಾರು ದಿನಗಳ ಬಳಿಕ ಸಂಗೀತ ನಿರ್ದೇಶಕ ಗುರುಕಿರಣ್ ಉತ್ತಮ ಸಂಗೀತ ಸಂಯೋಜನೆ ಮಾಡಿದ್ದಾರೆ ಎನ್ನಬಹುದು.
ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿರುವ 'ಗೋವಿಂದಾಯ ನಮಃ' ಚಿತ್ರದ ಈ ಹಾಡು ಇಷ್ಟೊಂದು ಜನಪ್ರಿಯವಾಗುತ್ತಿರುವುದು ಕೋಮಲ್ ಚಿತ್ರತಂಡಕ್ಕೆ ಹೊಸ ಭರವಸೆ ನೀಡಿದೆ. ಬಿಜಾಪುರದ ಕೋಟೆ, ಇಬ್ರಾಹಿಂ ರೋಜಾ ಸುತ್ತಮುತ್ತ ಚಿತ್ರೀಕರಿಸಿರುವ ಈ ಹಾಡು ಕನ್ನಡದ ಟಾಪ್ ಹಾಡುಗಳಲ್ಲಿ ಸ್ಥಾನ ಪಡೆಯುವತ್ತ ದಾಪುಗಾಲು ಹಾಕಿದೆ. (ಏಜೆನ್ಸೀಸ್)