Thought for the day
Your page will load in ...
Close Ad X
Advertisement
English ગુજરાતી हिन्दी മലയാളം தமிழ் తెలుగు
 
Share This Story

ಪರಮಾತ್ಮ ಹಾಡು ಕೇಳಿ ರೆಹಮಾನ್ ಏನಂದ್ರು ?

Posted by:
Published: Friday, September 16, 2011, 16:09 [IST]

16 Musician Ar Rahman Praises Paramathma Movie Audio Aid0189

ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪುನೀತ್ ರಾಜಕುಮಾರ್ ಅಭಿನಯದ ಪರಮಾತ್ಮ ಹಾಡು ಕೇಳಿ ಖುಷ್ ಆಗಿದ್ದಾರೆ. ಈ ವಿಷಯವನ್ನು ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಫುಲ್ ಖುಷ್ ಖುಷ್ ಆಗಿ ಹೇಳಿದ್ದಾರೆ.

ಪರಮಾತ್ಮ ಚಿತ್ರದ ಆಲ್ಬಮ್ ಫೈನಲ್ ಮಾಸ್ಟರ್ ಕಂಪೊಷಿಶನ್ ಕೆಲಸಕ್ಕೆ ಭಟ್ರು ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಚೆನ್ನೈಗೆ ತೆರಳಿದ್ದರು, ಹಾಗೇ.. ರೆಹಮಾನ್ ಭೇಟಿ ಮಾಡಲು ನಿರ್ಧರಿಸಿದ್ದರು. ಆದರೆ ಅವರಿಗೆ ರೆಹಮಾನ್ ಭೇಟಿ ಸಾಧ್ಯವಾಗಿಲ್ಲ. ಸ್ಟುಡಿಯೋ ದಲ್ಲಿ ಈ ವಿಷಯವನ್ನು ರೆಹಮಾನ್ ಗೆ ತಿಳಿಸಿದಾಗ ಉತ್ಸುಕತೆಯಿಂದ ಹಾಡನ್ನು ಆಲಿಸಿದ್ದಾರೆ. ಆದರೆ ಆವಾಗ ಭಟ್ರು ಮತ್ತು ಹರಿ ಅಲ್ಲಿಂದ ಹೊರಟು ಹೋಗಿದ್ದರು.

ತಕ್ಷಣ ಯೋಗರಾಜ್ ಭಟ್ ಅವರಿಗೆ ಮೆಸೇಜ್ ಮಾಡಿದ ರೆಹಮಾನ್ " Songs composition & Lyrics just fantastic, good work. Convey my message to Hari also" ಎಂದು ಎಸ್ಎಂಎಸ್ ಮೂಲಕ ಅಭಿನಂದಿಸಿದರು ಎಂದು ಆಡಿಯೋ ರಿಲೀಸ್ ಸಂದರ್ಭದಲ್ಲಿ ಭಟ್ರು ಹೇಳಿಕೆ ನೀಡಿದ್ದಾರೆ.

ಅಂದ ಹಾಗೆ ರೆಹಮಾನ್ ಉಪೇಂದ್ರ ಮುಖ್ಯ ಭೂಮಿಕೆಯ ಗಾಡ್ ಫಾದರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರದ ಟ್ಯೂನ್ ಹೆಚ್ಚುಕಮ್ಮಿ ರೆಹಮಾನ್ ಕಂಪ್ಲೀಟ್ ಮಾಡಿದ್ದಾರೆಂದು ಗಾಡ್ ಫಾದರ್ ಚಿತ್ರದ ನಿರ್ಮಾಪಕ ಕೊಬ್ಬರಿ ಮಂಜು ತಿಳಿಸಿದ್ದಾರೆ.

English summary
Music maestro AR Rahman has praised Musician Harikrishna's work in Actor Puneeth's Paramathma Movie. Paramathama directed by Yograj Bhat with Puneeth Rajkumar in the lead role.
ಅಭಿಪ್ರಾಯ ಬರೆಯಿರಿ
Click here to type in Kannada
Subscribe Newsletter
Qualifier 1 , Feroz Shah Kotla, Delhi
Chennai Super Kings won by 48 runs