twitter
    For Quick Alerts
    ALLOW NOTIFICATIONS  
    For Daily Alerts

    ಜಿಂಗ್‌‍ಚಾಕ್ ಹಾಡುಗಳಿಗೆ ಕವಿರಾಜ್ ಗುಡ್ ಬೈ!

    By Rajendra
    |

    ಗೀತ ಸಾಹಿತಿ ಕವಿರಾಜ್ ಅವರಿಗೆ ಕಡೆಗೂ ಜ್ಞಾನೋದಯವಾದಂತಿದೆ. ಅವರು ತಮ್ಮ ಹಳೆಯ ಜಿಂಗ್ ಚಾಕ್ ಶೈಲಿಯ ಹಾಡುಗಳಿಗೆ ಗುಡ್ ಬೈ ಹೇಳಲಿದ್ದಾರೆ. ಈ ದಿಢೀ ಬೆಳವಣಿಗೆಗೆ ಕಾರಣವಾಗಿದ್ದು 'ಸಂಜು ವೆಡ್ಸ್ ಗೀತಾ ಹಾಡುಗಳು'. ಇನ್ನು ಮುಂದೆ ಹೆಚ್ಚಾಗಿ ಸುಮಧುರ ಹಾಡುಗಳನ್ನು ರಚಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

    'ಸಂಜು ವೆಡ್ಸ್ ಗೀತಾ' ಚಿತ್ರಕ್ಕೆ ಕವಿರಾಜ್ ಅವರಲೇಖನಿಯಿಂದ ಎರಡು ಹಾಡುಗಳು ಹೊರಹೊಮ್ಮಿವೆ. ಆ ಹಾಡುಗಳು ಸುಮಧುರ ಗೀತೆಗಳು ಎಂಬುದು ವಿಶೇಷ. ಈ ಹಾಡುಗಳ ಸಾಹಿತ್ಯ ಚೆನ್ನಾಗಿದೆ ಎಂಬ ವಿಮರ್ಶೆ ಕೇಳಿಬಂದಿದ್ದೇ ತಡ ಕವಿರಾಜ್ ತಮ್ಮ ಮಾರ್ಗವನ್ನು ಬದಲಾಯಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

    ನೂರಾರು ಹಾಡುಗಳನ್ನು ಹೆಣೆದಿರುವ ಕವಿರಾಜ್ ಅವುಗಳಲ್ಲಿ ಕಾಳಿಗಿಂತ ಜೊಳ್ಳೇ ಜಾಸ್ತಿ ಎಂಬ ಮಾತನ್ನು ಒಪ್ಪುತ್ತಾರೆ. ಕೆಲವನ್ನು ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ, ಮತ್ತೆ ಕೆಲವನ್ನು ಬೇರೆಯವ ಅಭಿರುಚಿಗೆ ತಕ್ಕಂತೆ ಹೆಣೆದಿದ್ದರಿಂದ ಈ ಎಡವಟ್ಟಾಗಿದೆ ಎನ್ನುತ್ತಾರೆ. ಮುಂದೆ ಜಿಂಕ್ ಜಾಕ್ ಹಾಡುಗಳಿಗಿಂತ ಗುಡ್ ಬೈ ಹೇಳಿ ಸುಮಧುರ ಗೀತೆಗಳನ್ನು ಹೆಣೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    English summary
    Kannada films renowned lyricist Kaviraj has decided to write only melody songs in future. He is saying good bye to offbeat songs. This sudden change happened because of "Sanju Weds Geetha" music album receives good response from audience. He has penned two songs in that album.
    Friday, November 26, 2010, 13:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X