•  

ರತ್ನಜ ವಿಭಿನ್ನ ಪ್ರಯತ್ನ 'ಪ್ರೇಮಿಸಂ '

ಮಂಗಳವಾರ, ಅಕ್ಟೋಬರ್ 27, 2009, 14:36 [IST]
ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ 'ಪ್ರೇಮಿಸಂ'. ಕನ್ನಡ ಚಿತ್ರೋದ್ಯಮದಲ್ಲಿ ಯಶಸ್ವಿ ಜೋಡಿ ಎಂದೇ ಗುರುತಿಸಿಕೊಂಡಿರುವ ಹಂಸಲೇಖ, ರತ್ನಜ ಮತು ಅಜಯ್ ಗೌಡ ಅವರು ಪ್ರೇಮಿಸಂ ಎಂಬ ಹೊಸ ಅಸ್ತ್ರ ಹಿಡಿದು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

'ಹೊಂಗನಸು' ಚಿತ್ರದಲ್ಲಿ ಅಜಯ್, ಹಂಸ್ ಮತ್ತು ರತ್ನಜ ಎಡವಿದ್ದರು. ಹಾಗಾಗಿ 'ಪ್ರೇಮಿಸಂ' ಚಿತ್ರವನ್ನು ಜಾಗುರೂಕತೆಯಿಂದ ತೆರೆಗೆ ತರುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಸಿಡಿ ಮತ್ತು ಧ್ವನಿಸುರುಳಿಗಳನ್ನು ಬೆಂಗಳೂರಿನ 'ರಸ' ರೆಸ್ಟೋರೆಂಟ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಆನಂದ್ ಆಡಿಯೋ ಹೊರತಂದಿರುವ 'ಪ್ರೇಮಿಸಂ' ಆಡಿಯೋ ಸಿಡಿಯ ಬೆಲೆ ಕೇವಲ ರು.25. ಧ್ವನಿಸುರುಳಿ ಬಿಡುಗಡೆ ಬಳಿಕ ಮಾತನಾಡಿದ ಹಂಸಲೇಖ, ಈ ಚಿತ್ರಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆ. ಪ್ರೇಮಿಸಂ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು.

ಪ್ರೇಮಿಸಂ ಚಿತ್ರದ ಡಬ್ಬಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿರಿವ ನಿರ್ದೇಶಕ ರತ್ನಜ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಕ್ಕೂ ಬಂದಿದ್ದರು. ಯಾವುದೇ ಚಿತ್ರಕ್ಕೆ ಪ್ರಚಾರ ಬಹಳ ಮುಖ್ಯ ಎಂದ ಅವರು ಈ ಚಿತ್ರಕ್ಕಾಗಿ ಸಹಾಯ ಮಾಡಿದ ನಾಲ್ಕು ಮಂದಿ ಗೆಳೆಯರನ್ನು ನೆನೆಸಿಕೊಂಡರು.

ಈ ಹಿಂದೆ ಬಂದ ತಮ್ಮ ಎರಡು ಚಿತ್ರಗಳಿಗೆ ಹೋಲಿಸಿದರೆ ಪ್ರೇಮಿಸಂ ಚಿತ್ರ ವಿಭಿನ್ನವಾಗಿದೆ. ಕ್ಲೈಮ್ಯಾಕ್ಸ್ ಹಾಡಂತೂ ಅದ್ಭುತವಾಗಿದೆ. ಗುಲಾಬಿ ಕೆನ್ನೆ...ಎಂಬ ಹಾಡನ್ನು ಚೀನಾದ ಸುಂದರ ತಾಣಗಳಲ್ಲಿ ಚಿತ್ರೀಕರಿಸಿದ್ದಾರೆ ಎಂದು ಚಿತ್ರದ ನಾಯಕಿ ಅಮೂಲ್ಯ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)
User Comments
ಡಬ್ಬ 27 Oct 2009 03:57 pm
ಕಚಡ ಸಿನೆಮಾದೋರಿಗೆ ಎರಡೇ ಇಸ್ಯ ಗೊತ್ತಿರೋದು ಒಂದು ಮಚ್ಚು ಲಾಂಗು, (ಈ ಇಸ್ಯದ ಸಿನೆಮಾ ತೋಪ್ ಆದರೆ ಗೊತ್ತೇ ಇದ್ಯಲ್ಲಾ ಅಣ್ಣಾ ತಂಗಿ ಇಲ್ಲಾ ಅಮ್ಮ ಮಗ ಸೆಂಟಿ ಕತೆ) ಇಲ್ಲಾ ಮರ ಸುತ್ತೋ ದರಿದ್ರ ಪ್ರೇಮಿಗಳ ಕಥೆ, ಈ ಪ್ರೇಕ್ಷಕರು ಎಲ್ಲೀ ತನಕ ನೋಡಿದ್ದೇ ಈ ಹಳಸಿದ ಕತೆಗಳನ್ನ ನೋಡ್ತಾ ಇರ್ತಾರೋ ಅಲ್ಲೀವರೆಗು ಈ ಡಬ್ಭಾ ಮುಂಡೇವು ಇಂಥಾದಾನ್ನ ತೆಗೆಯದೇ ಇರೋಲ್ಲ. ಹೇ ದೇವ ಪ್ರಳಯ ಅನ್ನೋದೇನಾದ್ರೂ ಅಗೋದಾದ್ರೆ ಮೊದಲು ಈ ಸಿನೆಮಾ ಇಂಡಸ್ಟ್ರಿಯಿಂದಾನೇ ಶುರು ಮಾಡು!!!.
jaya 27 Oct 2009 03:06 pm
waiting for this movie to get released. After manasaare one of the movie to be watched
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 24 / 2, 5.3 Overs
1st Test , Lord's Cricket Ground, St John's Wood
West Indies: 21 / 1, 12.3 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article