•  

ಯೋಗರಾಜ ಭಟ್ಟರ ಹಾಡುಗಳಿಗೆ ಸಖತ್ ಬೇಡಿಕೆ

ಮಂಗಳವಾರ, ಮಾರ್ಚ್ 10, 2009, 17:54 [IST]
Yograj Bhat
'ಮೊಗ್ಗಿನ ಮನಸು' ಖ್ಯಾತಿಯ ನಿರ್ದೇಶಕ ಶಶಾಂಕ್ ನಿರ್ದೇಶಿಸಲಿರುವ ಮುಂದಿನ ಚಿತ್ರಕ್ಕೆ ಯೋಗರಾಜ ಭಟ್ಟರು ಹಾಡೊಂದನ್ನು ಬರೆದುಕೊಟ್ಟಿದ್ದಾರಂತೆ. ಈ ಸಂಭ್ರಮವನ್ನು ಶಶಾಂಕ್ ತಮ್ಮ ಅನೇಕ ಗೆಳೆಯರಿಗೆ ಎಸ್ ಎಂ ಎಸ್ ಕಳುಹಿಸುವ ಮೂಲಕ ಹಂಚಿಕೊಂಡಿದ್ದಾರೆ.

ಜಂಗ್ಲಿ ಚಿತ್ರಕ್ಕೆ ಹಳೆ ಪಾತ್ರೆ, ಹಳೆ ಕಬ್ಬಿಣ...ಎಂದು ಬರೆದು ತಮ್ಮ ಲೇಖನಿಯ ಹರಿತವನ್ನು ಗಾಂಧಿನಗರಕ್ಕೆ ಈಗಾಗಲೇ ತೋರಿಸಿದ್ದಾರೆ. ಈಗ ಯೋಗರಾಜ್ ಭಟ್ಟರ ಹಾಡುಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಯೋಗರಾಜ್ ಭಟ್ಟರ ಚಿತ್ರಸಾಹಿತ್ಯಕ್ಕೆ ಇರುವ ಬೇಡಿಕೆ ನೋಡಿದರೆ, ಅವರು ಪೂರ್ಣ ಪ್ರಮಾಣದ ಚಿತ್ರ ಸಾಹಿತಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ!

ಆದರೆ, ಜಂಗ್ಲಿ ಚಿತ್ರದ ಹಳೆ ಪಾತ್ರೆ...ಹಳೆ ಕಬ್ಬಿಣ...ಇದೂ ಒಂದು ಸಾಹಿತ್ಯವೇ? ಎಂದು ಆ ಹಾಡಿನ ಸಾಹಿತ್ಯದ ಬಗ್ಗೆ ಕಲಾತಪಸ್ವಿ ರಾಜೇಶ್ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಚಿತ್ರಗಳಿಗೆ ಜನ ತಕ್ಕ ಪಾಠ ಕಲಿಸಬೇಕಾಗಿದೆ. ಸಮಾಜದಲ್ಲಿ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ. ಈ ರೀತಿಯ ಚಿತ್ರಗಳನ್ನು ನಾವ್ಯಾಕೆ ನೋಡಬೇಕು ಎಂದು ಅವರು ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

&13;ಅಪ್ಪನಾಗಿ ಬಡ್ತಿ ಪಡೆದ ಯೋಗರಾಜ್ ಭಟ್!
ಕೆಟ್ಟ ಚಿತ್ರಗಳಿಗೆ ಕಲ್ಲೆಸೆದು ಪಾಠ ಕಲಿಸಿ: ರಾಜೇಶ್
User Comments
ಪುನೀತ್ 27 Jan 2010 09:12 am
ಭಟ್ರು ಹಾಡು ಅಂದ್ರೆ ಸೂಪರ್ .......ಒಳ್ಳೆ ಎನ್ಜೋಯಮೆಂಟ್ ಇರುತ್ತೆ ....ಕೀಪ್ ಇಟ್ ಅಪ್....ಸ್ವಲ್ಪ ಸೌಂಡು ಜಾಸ್ತಿ ಮಾಡು ತುಂಬ ಒಳ್ಳೆ ಸಾಂಗಿದು.... .....
ಪುಟ್ಟ 11 Mar 2009 11:25 am
ಭಟ್ಟರ ಪ್ರತಿಭೆಗೆ ಈ ಹಾಡುಗಳೇ ಸಾಕ್ಷಿ ೧. ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ೨. ಒಂದೇ ಸಮನೆ ನಿಟ್ಟುಸಿರು ಪಿಸ್ಗುಡುವ ತೀರ ಮೌನ ೩. ನಧೀಮ್ ಧೀಂ ತನ ೪. ಪಿಸುಗುಡಲೇ ಸವಿ ಮಾತೊಂದಾ - ಸರ್ಕಸ್ ೫. ಸಾವಿರ ನದಿಗಲಿಗೆಲ್ಲ ಒಂದೇನೆ ಸಾಗರ - ಮಣಿ ಒಳ್ಳೊಳ್ಳೆ ಸಾಹಿತ್ಯವನ್ನು ಕೊಟ್ಟ ಭಟ್ಟರು ಈಗ ಹಳೆ ಪಾತ್ರೆ ಹಳೆ ಕಬ್ಬಿಣ ಹಾಡು ಕೊಟ್ಟಿದಾರೆ :) ಎಲ್ಲ ರೀತಿಯ ಹಾಡುಗಳನ್ನು ಬರೆಯಲು ಅವರು ಸೈ ಅಲ್ವೇ ?
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Kings XI Punjab: 119 / 4, 15.5 Overs
1st Test , Lord's Cricket Ground, St John's Wood
West Indies: 105 / 4, 42 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article