•  

ಬಾಕ್ಸಾಫೀಸಲ್ಲಿ ಪಂಚರಂಗಿ ಪೋಂ ಪೋಂ!

ಯೋಗರಾಜ್ ಭಟ್ ನಿರ್ದೇಶನದ 'ಪಂಚರಂಗಿ' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ಮೂಲಗಳ ಪ್ರಕಾರ ಚಿತ್ರದ ಎರಡು ವಾರದ ಗಳಿಕೆ ರು.3.57 ಕೋಟಿ ಮುಟ್ಟಿದೆ.ಚಿತ್ರದಲ್ಲಿ ಕಥೆಯಿಲ್ಲದಿದ್ದರೂ ಭಟ್ಟರು ಮನರಂಜನೆಗೆ ಮೋಸ ಮಾಡಿಲ್ಲ ಎಂಬ ಪ್ರೇಕ್ಷಕರ ಮಾತುಗಳೇ ಚಿತ್ರಕ್ಕೆ ಶ್ರೀರಕ್ಷೆಯಾಗಿ ನಿಂತಿವೆ. ಮುಂಬರುವ ದಿನಗಳಲ್ಲಿ 'ಪಂಚರಂಗಿ' ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬೆಳೆ ತೆಗೆಯುವ ಎಲ್ಲ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿಬಂದಿವೆ.

ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ ಪಂಚರಂಗಿ ಗಳಿಕೆ ರು.1.58 ಕೋಟಿಯಷ್ಟಿತ್ತು. ಚಿತ್ರ ಎರಡನೆ ವಾರಕ್ಕೆ ಮುನ್ನುಗ್ಗುತ್ತಿದ್ದಂತೆ ಗಳಿಕೆಯ ಪ್ರಮಾಣ ಶೇ.30ರಷ್ಟು ಹೆಚ್ಚಾಗಿದೆ. ಎರಡನೆ ವಾರದಲ್ಲಿ ರು.1.99 ಕೋಟಿ ಎಣಿಸಿದ್ದಾಗಿ ಬಾಕ್ಸಾಫೀಸ್ ಮೂಲಗಳು ಹೇಳಿವೆ. ಮೂರನೆ ವಾರದಲ್ಲಿ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

'ಪಂಚರಂಗಿ' ಚಿತ್ರವನ್ನು ಒಟ್ಟು 45 ಕೇಂದ್ರಗಳಲ್ಲಿ ಬಿಡುಗಡೆ ಮಾಡಬೇಕೆಂದು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ ಹಲವಾರು ಕಾರಣಗಳಿಂದ ಚಿತ್ರ ಎಲ್ಲಾ ಕೇಂದ್ರಗಳಲ್ಲಿ ತೆರೆಕಾಣಲಿಲ್ಲ. ಕೇವಲ 39 ಕೇಂದ್ರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದ ಕರಾವಳಿ ಮತ್ತು ಅತಿವೃಷ್ಟಿಗೆ ಒಳಗಾದ ಬಾಗಲಕೋಟೆ ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗಿಲ್ಲ. ಎಲ್ಲಾ ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದರೆ ಬಾಕ್ಸಾಫೀಸ್ ಕತೆ ಬೇರೆ ಇರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಟ್ಟಿನಲ್ಲಿ ಚಿತ್ರದ ಬಜೆಟ್ ಅನ್ನು ಮೀರಿ 'ಪಂಚರಂಗಿ' ಭಾರಿ ಲಾಭ ಗಳಿಸಿದೆ. 'ಪಂಚರಂಗಿ' ಚಿತ್ರದ ರೀಮೇಕ್ ಹಕ್ಕುಗಳಿಗಾಗಿ ಈಗಾಗಲೆ ತೆಲುಗು, ತಮಿಳು ಮತ್ತು ಹಿಂದಿ ನಿರ್ಮಾಪಕರು ಮುಗಿಬಿದ್ದಿದ್ದಾರೆ. ಈ ವರ್ಷದ ಅತ್ಯಂತ ಯಶಸ್ವಿ ಚಿತ್ರ 'ಆಪ್ತರಕ್ಷಕ' ಚಿತ್ರದ ದಾಖಲೆಯನ್ನು 'ಪಂಚರಂಗಿ' ಅಳಿಸಲಿದೆ ಎಂಬ ಮಾತುಗಳು ಕೇಳಿಬಂದಿದೆ. ಯೋಗರಾಜ್ ಭಟ್ಟರೆ ನೀವೇನಂತೀರಾ? ಅಂದರೆ ಅವರು ತುಟಿಬಿಚ್ಚುತ್ತಿಲ್ಲ.
ಸೆಪ್ಟೆಂಬರ್ 20, 2010 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
IPL, Himachal Pradesh Cricket Association Stadium, Dharmasala
Kings XI Punjab: 81 / 3, 13 Overs
1st Test , Lord's Cricket Ground, St John's Wood
West Indies: 100 / 3, 37.5 Overs
IPL, Feroz Shah Kotla, Delhi
Match starts at 08:00 pm IST  

ಪಂಚರಂಗಿ ಹಾಡುಗಳು ನಕಲುಗಳು

ಇತ್ತೀಚೆಗೆ ಗಾಂಧಿನಗರದಲ್ಲಿ ಹುಟ್ಟಿಕೊಂಡಿರುವ ಹೊಸ ಟ್ರೆಂಡ್ ಯಾವುದು ಗೊತ್ತಾ. ಹೊಸ ಬಾಟಲಿಯಲ್ಲಿಯ ಹೊಸ ಮದ್ಯ ಎಂಬಂತೆ 'ಸಿನಿಮಾ ಎಂದರೆ ಅದು ನಿರ್ದೇಶಕರ ಮಾಧ್ಯಮ" ಎಂಬ ವಾಕ್ಯ ಚಾಲ್ತಿಯಲ್ಲಿದೆ. ಟ್ಯಾಬ್ಲೈಡ್, ಪತ್ರಿಕೆ, ಸಿನಿ ಪತ್ರಕರ್ತರು ಕೂಡಾ ಇದೇ ಮಾತಿಗೆ ಜೋತು ಬಿದ್ದು ತಮ್ಮ ಕಾಲಂಗಳು, ಗಾಸಿಪ್ ಗಳು, ಸಿನಿಮಾ ಸಂಪ್ಲಿಮೆಂಟ್ ಗಳು ವಗೈರೆಗಳು ಎಲ್ಲೆಡೆ ಇದನ್ನೇ ಬಿಂಬಿಸಿದ ಪರಿಣಾಮ.....

ಭಟ್ರ ಕೈಯಲ್ಲಿ ಅರಳಿದ ಪಂಚರ್ ಅಂಗಿ

ಗಾಂಧಿನಗರದಲ್ಲಿ ಸ್ಟಾರ್ ನಿರ್ದೇಶಕ ಎನಿಸಿರುವ ಯೋಗರಾಜ್ ಭಟ್ ಅವರ ಭಾರಿ ನಿರೀಕ್ಷೆ ಮೂಡಿಸಿದ್ದ ಪಂಚರಂಗಿ ಚಿತ್ರ ಬಿಡುಗಡೆಯಾಗಿ ಎರಡು ವಾರ ಮುಗಿದು ಮೂರನೇ ವಾರಕ್ಕೆ ಮುನ್ನುಗ್ಗುವ ಮೂಲಕ ಯಶಸ್ವಿ ಪ್ರದರ್ಶನ ಕಾಣತೊಡಗಿದೆ ? ನಾನು ನನ್ನ ಕನಸು ಚಿತ್ರದ ನಂತರ ತುಂಬಾ ನಿರೀಕ್ಷೆ ಇಟ್ಟುಕೊಂಡು ಚಿತ್ರ ಮಂದಿರಕ್ಕೆ ತೆರಳಿದ್ದರಿಂದ ಭಟ್ಟರ ಪಂಚರಂಗಿ ನಿರಾಶೆ ಮೂಡಿಸಿತು. ಭಟ್ ರ.....

ಗಾಯಕಿಯಾಗಿ 'ಪಂಚರಂಗಿ' ನಿಧಿಸುಬ್ಬಯ್ಯ

ಈಗಾಗಲೆ ತಮ್ಮ ಮಾದಕ ಚೆಲುವಿನಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ನಟಿ ನಿಧಿ ಸುಬ್ಬಯ್ಯ. ತಮ್ಮದೇ ಆದಂತಹ ಅಭಿನಯದ ಮೂಲಕ ಗಮನಸೆಳೆದ ನಟಿ. ಇದೀಗ ತಮ್ಮ ಸುಮಧುರ ಕಂಠದಿಂದ ಪ್ರೇಕ್ಷಕರನ್ನು ಸೆಳೆಯಲು 'ಪಂಚರಂಗಿ' ನಿಧಿ ಸುಬ್ಬಯ್ಯ ಮುಂದಾಗಿದ್ದಾರೆ. ಚಿತ್ರವೊಂದರ ನಿರ್ಮಾಣ ಹಂತದ ವಿಡಿಯೋಗಳನ್ನು (ಮೇಕಿಂಗ್ ವಿಡಿಯೋ) ಮಾಡಿ ಪ್ರೇಕ್ಷಕರನ್ನು ಸೆಳೆಯುವುದು ಹೊಸ ಬೆಳವಣಿಗೆ. ಕನ್ನಡ ಚಿತ್ರರಂಗ ಸಹ ಮೇಕಿಂಗ್ ವಿಡಿಯೋಗಳಿಂದ ಹೊರತಾಗಿಲ್ಲ.ಯಶಸ್ವಿ ನಿರ್ದೇಶಕ ಯೋಗರಾಜಭಟ್ ತಮ್ಮ 'ಪಂಚರಂಗಿ'.....
User Comments
ಸೂಪರ್ 23 Sep 2010 09:16 am
ಪಂಚರಂಗಿ ಚಿತ್ರ ಚೆನ್ನಾಗಿದೆ . ಸೂಪರ್ ಸೂಪರ್
ಓಹೋ 21 Sep 2010 10:43 am
ಪಾಪ ಈ ರವಿಯ ತಲೆ ಕೆಟ್ಟು ಹೋಗಿ ಸೂ**ಮಗ ಆಗಿಬಿಟ್ಟಿದ್ದಾನೆ
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article