ಹೈದರಾಬಾದ್, ಸೆ. 20 : ಯೋಗರಾಜ್ ಭಟ್ಟರ ಮನೋರೋಗಿಗಳ ಪ್ರೇಮದ ಕಥೆಯ 'ಮನಸಾರೆ' ಚಿತ್ರ ಸೌತ್ ಸ್ಕೋಪ್ ಸಿನೆ ಪ್ರಶಸ್ತಿ 2010ರಲ್ಲಿ ಪ್ರಶಸ್ತಿಗಳ ಕೊಳ್ಳೆ ಹೊಡೆದಿದೆ.
ಸೆಪ್ಟೆಂಬರ್ 19ರ ರಾತ್ರಿ ಹೈದರಾಬಾದಿನ ನೊವೊಟೆಲ್ ಹೊಟೇಲಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 'ಮನಸಾರೆ' ಚಿತ್ರ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡು ಕನ್ನಡ ಚಿತ್ರ ವಿಭಾಗದಲ್ಲಿ ತೀರ್ಪುಗಾರರ ಮನಸೂರೆ ಮಾಡಿದೆ. ಮನಸಾರೆ ಅತ್ಯುತ್ತಮ ಸಿನೆಮಾ, ಯೋಗರಾಜ್ ಭಟ್ ಅತ್ಯುತ್ತಮ ನಿರ್ದೇಶಕರಾಗಿ ಪ್ರಶಸ್ತಿ ಗಳಿಸಿದರು. ಮನಸಾರೆಗಾಗಿ ಐಂದ್ರಿತಾ ರೇ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದು, ಅದೇ ಚಿತ್ರದ ಎಲ್ಲೋ ಮಳೆಯಾಗಿದೆ ಗೀತ ಸಾಹಿತ್ಯಕ್ಕಾಗಿ ಜಯಂತ್ ಕಾಯ್ಕಿಣಿ ಪ್ರಶಸ್ತಿ ಬಗಿಲಿಗಿಳಿಸಿಕೊಂಡರು.
ರಾಜ್ ದಿ ಶೋ ಮ್ಯಾನ್ ಮತ್ತು ಬಿರುಗಾಳಿ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಪುನೀತ್ ರಾಜ್ ಕುಮಾರ್ ಅವರು 'ರಾಜ್ - ದಿ ಶೋ ಮ್ಯಾನ್' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದೇ ಚಿತ್ರದ ಸಿನೆಮಾಟೋಗ್ರಫಿಗಾಗಿ ಕೃಷ್ಣ ಪ್ರಶಸ್ತಿ ಪಡೆದಿದ್ದಾರೆ. ಬಿರುಗಾಳಿಯಲ್ಲಿ ನೀಡಿದ ಸಂಗೀತಕ್ಕಾಗಿ ಅರ್ಜುನ್ ಅತ್ಯುತ್ತಮ ಸಂಗೀತ ನಿರ್ದೇಶಕ ಸೌತ್ ಸ್ಕೋಪ್ ಪುತ್ಥಳಿಯನ್ನು ಎತ್ತಿಹಿಡಿದರೆ, ಶಮಿತಾ ಮಲ್ನಾಡ್ 'ಮಧುರಾ ಪಿಸುಮಾತಿಗೆ' ಮಾಧುರ್ಯಭರಿತ ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ವಿವರ ಕೆಳಗಿನಂತಿದೆ
ಅತ್ಯುತ್ತಮ ಸಿನೆಮಾ - ಮನಸಾರೆ
ಅತ್ಯುತ್ತಮ ನಿರ್ದೇಶಕ - ಯೋಗರಾಜ್ ಭಟ್, ಮನಸಾರೆ
ಅತ್ಯುತ್ತಮ ನಟ - ಪುನೀತ್ ರಾಜ್ ಕುಮಾರ್, ರಾಜ್ - ದಿ ಶೋ ಮ್ಯಾನ್
ಅತ್ಯುತ್ತಮ ನಟಿ - ಐಂದ್ರಿತಾ ರೇ, ಮನಸಾರೆ
ಅತ್ಯುತ್ತಮ ಪೋಷಕ ನಟ - ದಿಲೀಪ್ ರಾಜ್, ಲವ್ ಗುರು
ಅತ್ಯುತ್ತಮ ಪೋಷಕ ನಟಿ - ಅಂಜನಾ ಸುಖಾನಿ, ಮಳೆಯಲಿ ಜೊತೆಯಲಿ
ಅತ್ಯುತ್ತಮ ಹಾಸ್ಯ ನಟ - ಸಾಧು ಕೋಕಿಲಾ, ರಾಮ್
ಅತ್ಯುತ್ತಮ ಸಂಗೀತ ನಿರ್ದೇಶಕ - ಅರ್ಜುನ್, ಬಿರುಗಾಳಿ
ಅತ್ಯುತ್ತಮ ಹಿನ್ನೆಲೆ ಗಾಯಕ - ಚೇತನ್, ಹಾಡು : ಯಾರೇ ನೀ ದೇವತೆಯಾ, ಅಂಬಾರಿ
ಅತ್ಯುತ್ತಮ ಹಿನ್ನೆಲೆ ಗಾಯಕಿ - ಶಮಿತಾ ಮಲ್ನಾಡ್, ಹಾಡು : ಮಧುರಾ ಪಿಸುಮಾತಿಗೆ, ಬಿರುಗಾಳಿ
ತೀರ್ಪುಗಾರರ ಪ್ರಶಸ್ತಿ - ಜಗ್ಗೇಶ್, ಎದ್ದೇಳು ಮಂಜುನಾಥ
ಅತ್ಯುತ್ತಮ ಸಿನೆಮಾಟೋಗ್ರಫರ್ - ಎಸ್ ಕೃಷ್ಣ, ರಾಜ್ - ದಿ ಶೋ ಮ್ಯಾನ್
ಅತ್ಯುತ್ತಮ ಸಾಹಿತ್ಯ - ಜಯಂತ್ ಕಾಯ್ಕಿಣಿ, ಹಾಡು : ಎಲ್ಲೋ ಮರೆಯಾಗಿದೆ, ಮನಸಾರೆ

Oneindia Login