•  

'ತಮಸ್ಸು' ಚಿತ್ರದಲ್ಲಿ ನಾಸರ್ ಗೆ ಸುದರ್ಶನ್ ಕಂಠದಾನ

'ತಮಸ್ಸು' ಚಿತ್ರದ ಮುಖ್ಯ ಪಾತ್ರಧಾರಿ ನಾಸರ್ ಅವರಿಗೆ ಸುದರ್ಶನ್ ಅವರು ಧ್ವನಿ ನೀಡಿದ್ದಾರೆ. ಸುದರ್ಶನ್ ಕಳೆದ ಕೆಲವು ದಿನಗಳಿಂದ ಯಾರಿಗೂ ಕಂಠದಾನ ಮಾಡಿರಲಿಲ್ಲ. ಆದರೆ ಅಗ್ನಿಶ್ರೀಧರ್ ಅವರು ನಾಸರ್ ಅವರಿಗೆ ಸುದರ್ಶನ್ ಅವರ ಧ್ವನಿಯೇ ಬೇಕು ಎಂದು ಅವರಿಂದಲ್ಲೇ ಡಬ್ಬಿಂಗ್ ಮಾಡಿಸಿದ್ದಾರೆ.

'ಆ ದಿನಗಳು' ಎಂಬ ಯಶಸ್ವಿ ಚಿತ್ರ ಸೇರಿದಂತೆ ಕೆಲವು ಚಿತ್ರಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದ ಪತ್ರಕರ್ತ ಅಗ್ನಿಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಕಥೆಗಾರರಾಗಿರುವ ಅವರು ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಮೇಘ ಮೂವೀಸ್ ಲಾಂಛನದಲ್ಲಿ ಸೈಯದ್ ಅಮಾನ್ ಹಾಗೂ ರವೀಂದ್ರ ಅವರು ನಿರ್ಮಿಸುತ್ತಿರುವ 'ತಮಸ್ಸು' ಚಿತ್ರದ ಡಬ್ಬಿಂಗ್ ಮುಕ್ತಾಯವಾಗಿದೆ.

ವಿಶಿಷ್ಟ ಕಥಾ ಸಾರಾಂಶವುಳ್ಳ ಈ ಚಿತ್ರದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದು, ಪದ್ಮಪ್ರಿಯ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಸರ್, ಹರ್ಷಿಕಾ ಪೂರ್ಣಚ್ಛ, ಆಸೀಫ್, ಸುಧಾ ಬೆಳವಾಡಿ, ಸತ್ಯ ಮುಂತಾದವರ ತಾರಾಬಳಗವೂ ಈ ಚಿತ್ರಕ್ಕಿದೆ.

ಸಂದೀಪ್ ಚೌಟರ ಸಂಗೀತವಿರುವ ಈ ಚಿತ್ರಕ್ಕೆ ಸುಂದರನಾಥ ಸುವರ್ಣ ಅವರ ಛಾಯಾಗ್ರಹಣವಿದೆ. ನಾಗೇಂದ್ರ ಅರಸ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಶಶಿಧರ್ ಅಡಪ ಕಲಾ ನಿರ್ದೇಶನ ಹಾಗೂ ಮಧುಗಿರಿ ಪ್ರಕಾಶ್ ಅವರ ನಿರ್ಮಾಣ ನಿರ್ವಹಣೆ 'ತಮಸ್ಸು ಚಿತ್ರಕ್ಕಿದೆ.
ಫೆಬ್ರವರಿ 3, 2010 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
West Indies: 4 / 0, 0.5 Overs
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಬೆಂಗಳೂರಿನಲ್ಲಿ ಶಿವಣ್ಣನ 'ತಮಸ್ಸು'

ಇದೇ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳುತ್ತಿರುವ ಅಗ್ನಿ ಶ್ರೀಧರ್ ಅವರ 'ತಮಸ್ಸು' ಚಿತ್ರಕ್ಕೆ ಉದ್ಯಾನ ನಗರಿ ಬೆಂಗಳೂರು ಹಾಗೂ ಅದರ ಸುತ್ತಲ್ಲಿನ ಪ್ರದೇಶಗಳಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು ಮೇಘ ಮೂವೀಸ್ ಲಾಂಛನದಲ್ಲಿ ಸೈಯದ್ ಅಮಾನ್ ಹಾಗೂ ರವೀಂದ್ರ ನಿರ್ಮಿಸುತ್ತಿದ್ದಾರೆ.ತಮ್ಮ ಸಂಸ್ಥೆಯ ಮೂಲಕ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ನಿರ್ಮಾಪಕರು ತಮ್ಮ ಸಂಸ್ಥೆಯ.....

ಬೆಂಗಳೂರಿನಲ್ಲಿ ಶಿವಣ್ಣನ 'ತಮಸ್ಸು'

ಇದೇ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳುತ್ತಿರುವ ಅಗ್ನಿ ಶ್ರೀಧರ್ ಅವರ 'ತಮಸ್ಸು' ಚಿತ್ರಕ್ಕೆ ಉದ್ಯಾನ ನಗರಿ ಬೆಂಗಳೂರು ಹಾಗೂ ಅದರ ಸುತ್ತಲ್ಲಿನ ಪ್ರದೇಶಗಳಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು ಮೇಘ ಮೂವೀಸ್ ಲಾಂಛನದಲ್ಲಿ ಸೈಯದ್ ಅಮಾನ್ ಹಾಗೂ ರವೀಂದ್ರ ನಿರ್ಮಿಸುತ್ತಿದ್ದಾರೆ.ತಮ್ಮ ಸಂಸ್ಥೆಯ ಮೂಲಕ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ.....
User Comments
obsever 04 Feb 2010 12:29 pm
ನಟನೆ ಚನ್ನಾಗಿ ಮುಡಿ ಬರುವುದು ಸ್ವಂತ ದ್ವನಿ ಇದಾಗ ಮಾತ್ರ. ನಾಸರ್ ತಮಿಲಿನ್ನಲ್ಲಿ ಅತುತ್ತಮ ನಟ ಎರವಲು ಪಡೆದ ದ್ವನಿಯಿಂದ ನಟನೆ ಹೇಗೆ ಇರುತದ್ದೋ ?
ಯಜ್ಞ ಶೆಟ್ಟಿ 04 Feb 2010 12:54 am
ರೀ ನಾಯಕಿಯ ಹೆಸರು ಪದ್ಮಪ್ರಿಯ ಅಲ್ಲ ಯಜ್ಞ ಶೆಟ್ಟಿ . ತಪ್ಪ-ತಪ್ಪಗೆಲ್ಲ ಬರಿ ಬ್ಯಾಡ್ರಿ ನಂಗೆ ಸಾನೆ ಬೇಜಾರ್ ಆಗ್ತೈತೆ .
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article