•  

'ಜೋಗಯ್ಯ' ಜತೆ ಕುಣಿಯಲಿದ್ದಾರೆ ಪ್ರಿಯಾಂಕ ಚೋಪ್ರಾ

'ಪ್ರೀತಿ ಏಕೆ ಭೂಮಿ ಮೇಲಿದೆ?' ಚಿತ್ರಕ್ಕೆ ಮಲ್ಲಿಕಾ ಶೆರಾವತ್, 'ರಾಜ್ ದ ಶೋ ಮ್ಯಾನ್' ಚಿತ್ರಕ್ಕೆ ಪ್ರಿಯಾಂಕಾ ಕೊಠಾರಿ (ನಿಶಾ ಕೊಠಾರಿ)ಯನ್ನು ಕರೆತಂದಿದ್ದ ನಿರ್ದೇಶಕ ಪ್ರೇಮ್ ಇದೀಗ ಮತ್ತೊಬ್ಬ ಬಾಲಿವುಡ್ ಬೆಡಗಿಯನ್ನು ಕರೆತರುವ ಸಿದ್ಧತೆಯಲ್ಲಿದ್ದಾರೆ. ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾರನ್ನು ತಮ್ಮ 'ಜೋಗಯ್ಯ' ಚಿತ್ರಕ್ಕಾಗಿ ಕರೆತರುವ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 'ಜೋಗಯ್ಯ' ಚಿತ್ರದ ನಾಯಕ ನಟ ಎಂಬುದು ಗೊತ್ತೇ ಇದೆ. ಕನ್ನಡ ಚಿತ್ರೋದ್ಯಮದಲ್ಲಿ ಅದ್ಭುತ ಯಶಸ್ಸು ದಾಖಲಿಸಿದ್ದ 'ಜೋಗಿ' ಚಿತ್ರದ ಮುಂದುವರಿದ ಭಾಗವಾಗಿ 'ಜೋಗಯ್ಯ'ನನ್ನು ತೆರೆಗೆ ತರುತ್ತಿದ್ದಾರೆ ಪ್ರೇಮ್.

ಪ್ರಸ್ತುತ ಡೇಟ್ಸ್ ಹೊಂದಾಣಿಕೆಗಾಗಿ ಪ್ರಿಯಾಂಕಾ ಚೋಪ್ರಾ ಅವರ ಕಾರ್ಯನಿರ್ವಾಹಕರೊಂದಿಗೆ ಮಾತುಕತೆ ನಡೆದಿದೆ. ಚಿತ್ರದ ಹಾಡೊಂದರಲ್ಲಿ ಪ್ರಿಯಾಂಕರನ್ನು ಬಳಸಿಕೊಳ್ಳುತ್ತೇವೆ. ಈ ಸ್ಟೈಲಿಶ್ ಹಾಡಿಗೆ ಪ್ರಿಯಾಂಕ ಒಪ್ಪುತ್ತಾರೆ ಎಂಬ ಕಾರಣಕ್ಕೆ ಆಕೆಯನ್ನು ಆಯ್ಕೆ ಮಾಡಿರುವುದಾಗಿ ಪ್ರೇಮ್ ತಿಳಿಸಿದ್ದಾರೆ.

ಜೋಗಿ ಚಿತ್ರದಲ್ಲಿ ನಟಿಸಿದ್ದ ಜೆನ್ನಿಫರ್ ಕೊತ್ವಾಲ್ ಅವರ ಬದಲಾಗಿ 'ಜೋಗಯ್ಯ' ನಿಗೆ ಹೊಸ ಮುಖ ಹುಡುಕುತ್ತಿರುವುದಾಗಿ ಪ್ರೇಮ್ ತಿಳಿಸಿದ್ದಾರೆ. ಅವರ ಮನಸ್ಸಿನಲ್ಲಿ ವಿದ್ಯಾ ಬಾಲನ್ ರಂತಹ ಸೀಸನ್ಡ್ ನಟಿಯರನ್ನು ಕರೆತರುವ ಯೋಚನೆ ಇದೆಯಂತೆ. ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯನಿಗೆ ಪ್ರೇಮ್ ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಲೇ ಇದ್ದಾರೆ.
ಜನವರಿ 11, 2010 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
England decided to field
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಶಿವರಾಜ್ ಕುಮಾರ್ 101ನೇ ಚಿತ್ರ ಪುಣ್ಯವಂತ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ 'ಜೋಗಯ್ಯ' ಆದರೆ ನೂರೊಂದನೆ ಚಿತ್ರ ಯಾವುದು? ಇದೀಗ ಈ ಪ್ರಶ್ನೆಗೆ 'ಪುಣ್ಯವಂತ' ಎಂಬ ಉತ್ತರ ಸಿಕ್ಕಿದೆ. ಪ್ರೇಮ್ ನಿರ್ದೇಶಿಸಿದ್ದ 'ಜೋಗಿ'ಯ ಮುಂದುವರಿದ ಭಾಗವೇ 'ಜೋಗಯ್ಯ' ಎಂಬ ಸುದ್ದಿ ಈಗಾಗಲೇ ಚಾಲ್ತಿಯಲ್ಲಿದೆ. 'ಪುಣ್ಯವಂತ'ನ ಕತೆ ಒಂಚೂರು ಭಿನ್ನವಾಗಿದೆ. ಶಿವರಾಜ್ ಕುಮಾರ್ ಅವರ 101ನೇ ಚಿತ್ರ ಎಂಬುದು 'ಪುಣ್ಯವಂತ'ನ ಒಂದು.....

ಬೆಳ್ಳಿತೆರೆಗೆ ಮತ್ತೆ ಬರಲಿದ್ದಾರೆ ನಟಿ ರಕ್ಷಿತಾ!

ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾದ ಬಳಿಕ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದ ರಕ್ಷಿತಾ ಇದೀಗ ಮತ್ತೆ ನಟನೆಗೆ ಮರಳುತ್ತಿದ್ದಾರೆ. ಪ್ರೇಮ್ ನಿರ್ದೇಶನ, ನಿರ್ಮಾಣದಲ್ಲಿ ಸೆಟ್ಟೇರಲಿರುವ 'ಜೋಗಯ್ಯ' ಚಿತ್ರದಲ್ಲಿ ರಕ್ಷಿತಾ ಅಭಿನಯಿಸಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ ನೂರನೇ ಚಿತ್ರ ಇದಾಗಿದೆ. ಇಷ್ಟು ದಿನ ಗೃಹಿಣಿಯಾಗಿ ಪಾತ್ರ ನಿರ್ವಹಿಸಿದ ರಕ್ಷಿತಾ ಇದೀಗ ಅತಿಥಿ.....
User Comments
ಹರೀಶ್ 17 Feb 2010 11:48 am
ಒಂದಡಿ ಸ್ಟೂಲ್ ಹಾಕಬೇಕು ಶಿವ್ರಜ್ಕುಮಾರ್ಗೆ
ಪುನೀತ್ 27 Jan 2010 08:47 am
ಬರಿ ಬಿಲ್ಡ್ ಅಪ್ ಕೊಡೋದೇ .....ಫಿಲಂ ಅಲ್ಲಿ ಸ್ವಲ್ಪ ಹೊಸದು ತೋರ್ಸೋಕೆ ಆಗಲ್ವ ರೌಡಿಸಂ ಬಿಟ್ಟು.......ರೌಡಿಸಂ ಆದರು ಜೋಗಿ ಚೆನ್ನಾಗಿತು.....
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article