•  

ಪುನೀತ್, ಪ್ರಿಯಾಮಣಿಯ 'ರಾಮ್'ಸಿದ್ಧ

ಆದಿತ್ಯ ಆರ್ಟ್ಸ್ ಎಮ್.ಸಿ.ಎಲ್ ಲಾಂಛನದಲ್ಲಿ ಆದಿತ್ಯಬಾಬು ನಿರ್ಮಿಸಿರುವ `ರಾಮ್' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕಳೆದ ವಾರ ಗಣೇಶ್ ಅವರ ಮಳೆಯಲಿ ಜೊತೆಯಲಿ ಚಿತ್ರದ ಜೊತೆ ಬಿಡುಗಡೆಯಾಗುಲು ಸಿದ್ಧವಾಗಿದ್ದ ರಾಮ್ ಚಿತ್ರವನ್ನು ದಿಢೀರ್ ಎಂದು ಮುಂದೂಡಲಾಗಿತ್ತು. ಆದರೆ, ಇದು 'ಮಳೆಯಲಿ..'ಚಿತ್ರದ ಕಾರಣಕ್ಕೆ ಅಲ್ಲ ಎಂಬುದು ರಾಮ್ ತಂಡದ ವಾದ. ಅದೇನೇ ಇರಲಿ, ಪುನೀತ್ ಅಭಿನಯನದ ಮತ್ತೊಂದು ರಿಮೇಕ್ ಚಿತ್ರ ಅವರ ಅಭಿಮಾನಿಗಳಿಗೆ ಸಿಗಲಿದೆ.

ಅಪಾರ ವೆಚ್ಚದಲ್ಲಿ, ಅದ್ದೂರಿ ತಾರಾಗಣದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರವನ್ನು ಕೆ.ಮಾದೇಶ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಚಿತ್ರಕಥೆಯನ್ನೂ ಇವರೇ ಬರೆದಿದ್ದಾರೆ. ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ಚಿತ್ರದ ನಾಯಕನಾದರೆ, ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ `ರಾಮ್` ನ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಪ್ರಿಯಾಮಣಿ ನಟಿಸಿರುವ ಪ್ರಥಮ ಕನ್ನಡ ಚಿತ್ರ ಕೂಡ.

ವಿವಿಧ ಸಾಹಿತಿಗಳು ರಚಿಸಿರುವ ಚಿತ್ರದ ಗೀತೆಗಳಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಧ್ವನಿಸುರುಳಿಗಳು ಕೇಳುಗರ ಮನ ಗೆದ್ದಿದೆ. ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನವಿದೆ. ಪಳನಿರಾಜ್, ರವಿವರ್ಮ ಸಾಹಸ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಪುನೀತ್‌ರಾಜಕುಮಾರ್, ಪ್ರಿಯಾಮಣಿ, ರಂಗಾಯಣ ರಘು, ಸಾಧುಕೋಕಿಲಾ, ಶ್ರೀನಾಥ್, ಸಂಗೀತಾ, ಚಿತ್ರಾಶೆಣೈ, ಜ್ಯೋತಿ,ದೊಡ್ಡಣ್ಣ, ಪದ್ಮಾವಾಸಂತಿ ಮುಂತಾದವರಿದ್ದಾರೆ.
ಡಿಸೆಂಬರ್ 21, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
England decided to field
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಬಾಕ್ಸಾಫೀಸ್ ಘರ್ಷಣೆ ತಪ್ಪಿಸಿದ ಪುನೀತ್ 'ರಾಮ್'

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರ ಈ ಶುಕ್ರವಾರ(ಡಿ.18) ಬಿಡುಗಡೆಯಾಗುತ್ತಿಲ್ಲ. ರಾಮ್ ಚಿತ್ರದ ಬಿಡುಗಡೆಯನ್ನು ಡಿ.25ಕ್ಕೆ ಮುಂದೂಡಲಾಗಿದೆ. ಎರಡು ಚಿತ್ರಗಳ ನಡುವಿನ ಘರ್ಷಣೆಯನ್ನು ತಪ್ಪಿಸುವ ಸಲುವಾಗಿ ರಾಮ್ ಚಿತ್ರದ ಬಿಡುಗಡೆಯನ್ನು ಒಂದು ವಾರ ಮುಂದೂಡಲಾಗಿದೆ ಎನ್ನುತ್ತವೆ ಮೂಲಗಳು.ಕಳೆದ ವಾರ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರಕ್ಕೆ ಬಾಕ್ಸಾಫೀಸಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ......

ಪುನೀತ್ ರ ರಾಮ್ ಚಿತ್ರದಲ್ಲಿ ಅತಿಥಿ ಯಾಗಿ ಚೇತನ್!

'ಆ ದಿನಗಳು' ಖ್ಯಾತಿಯ ನಟ ಚೇತನ್ ರನ್ನು ಅತಿಥಿ ಪಾತ್ರವೊಂದು ಹುಡುಕಿಕೊಂಡು ಬಂದಿದೆ! ಅದೂ ಪುನೀತ್ ರಾಜ್ ಕುಮಾರ್ ಚಿತ್ರದಲ್ಲಿ ನಟಿಸುವ ಅವಕಾಶ. ಅಷ್ಟೇ ಅಲ್ಲ ಚೇತನ್ ಬಾಲ್ಯದಿಂದಲೂ ಪುನೀತ್ ರ ಕಟ್ಟಾ ಅಭಿಮಾನಿ. ಹಾಗಾಗಿ ಹಿಂದೆ ಮುಂದೆ ಆಲೋಚಿಸದೆ ಪುನೀತ್ ಚಿತ್ರದಲ್ಲಿ ನಟಿಸಲು ಚೇತನ್ ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಪುನೀತ್ 'ರಾಮ್' ಚಿತ್ರದಲ್ಲಿ ನಟಿಸುತ್ತಿರುವುದು.....

ರಾಮ್ ಚಿತ್ರದ ನಾಯಕಿಯಾಗಿ ಅದಿತಿ ಶರ್ಮಾ

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರಕ್ಕೆ ಬಾಲಿವುಡ್ ನಟಿ ಅದಿತಿ ಶರ್ಮಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಮ್ ಚಿತ್ರದ ನಾಯಕಿ ಪಾತ್ರಕ್ಕೆ ಜೆನಿಲಿಯಾ, ತಮನ್ನಾ ಮುಂತಾದ ಹೆಸರುಗಳು ಕೇಳಿಬಂದಿದ್ದವು. ಅಂತೂ ನಿರ್ಮಾಪಕ ಆದಿತ್ಯ ಬಾಬು ಅವರಿಗೆ ರಾಮ್ ಚಿತ್ರೀಕರಣ ಆರಂಭವಾದ ನಂತರ ನಾಯಕಿ ಸಿಕ್ಕಿದ್ದಾಳೆ. ಅದಿತಿ ಶರ್ಮಾ ಮೂಲತಃ ಪಂಜಾಬಿನವರು. ಪ್ರಸ್ತುತ ಅದಿತಿ ಮುಂಬೈನಲ್ಲಿ ವಾಸವಾಗಿದ್ದಾರೆ. ಪೋಷಕರು ಲಕ್ನೊದಲ್ಲಿದ್ದಾರೆ. ಈಗಾಗಲೇ ಹಿಂದಿಯಲ್ಲಿ ಎರಡು,.....
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article