•  

ಸಬ್ಸಿಡಿ ಚಿತ್ರಗಳ ಪಟ್ಟಿಯಲ್ಲಿ ಅವ್ವ, ಆ ದಿನಗಳಿಗೆ ಸ್ಥಾನ

ಇಪ್ಪತ್ತಾರು ಕನ್ನಡ ಚಲನಚಿತ್ರಗಳನ್ನು ಸಬ್ಸಿಡಿ ಆಯ್ಕೆ ಸಮಿತಿ ಗುಣಾತ್ಮಕ ಚಲನಚಿತ್ರಗಳೆಂದು ಆಯ್ಕೆ ಮಾಡಿದೆ. ನಿರೀಕ್ಷಿಸಿದಂತೆ ಪಟ್ಟಿಯಲ್ಲಿ ದಾಟು, ಜನಪದ, ಆ ದಿನಗಳು, ಮೀರಾ ಮಾದವ ರಾಘವ, ಅವ್ವ , ಪಲ್ಲಕ್ಕಿ, ಮಿಲನ, ಲಂಚ ಸಾಮ್ರಾಜ್ಯ, ಕರುನಾಡು, ಧೀಮಂತ ಮನುಷ್ಯ, ಕುಸುಮ, ಬಿರ್ಸೆ(ತುಳು), ಯುಗಯುಗಗಳೆಸಾಗಲಿ, ನಿನದೇ ನೆನಪು, ಅಮೃತವಾಣಿ, ಸ್ನೇಹಪರ್ವ, ಸೌಂದರ್ಯ, ಗಂಡನಮನೆ, ಈ ಪ್ರೀತಿ ಒಂಥರಾ, ನಾನು ಗಾಂಧಿ, ಲಡ್ಡು ಮುತ್ಯಾ, ಮಹಾ ಮಹಿಮೆ, ಕೈ ತುತ್ತು, ಬೆಳದಿಂಗಳಾಗಿ ಬಾ, ಶಿವಾನಿ, ಹೊಂಗನಸು ಮತ್ತು ಹನಿ ಹನಿ ಚಿತ್ರಗಳು ಸ್ಥಾನ ಪಡೆದಿವೆ.

ಜೊತೆಗೆ ಮಕ್ಕಳ ಚಲನಚಿತ್ರಗಳಾದ ಚಿಲಿಪಿಲಿ ಹಕ್ಕಿಗಳು, ಏಕಲವ್ಯ ಚಿತ್ರಗಳು ಸಬ್ಸಿಡಿಗೆ ಆಯ್ಕೆಯಾಗಿವೆ. ಐತಿಹಾಸಿಕ ಮತ್ತು ಪರಂಪರೆ ಕಥಾವಸ್ತುವುಳ್ಳ ಚಲನಚಿತ್ರಗಳಾದ ಶ್ರೀ ದಾನಮ್ಮದೇವಿ, ನವಶಕ್ತಿ ವೈಭವ, ರೇಣುಕಾಚಾರ್ಯ ಮಹಾತ್ಮೆ ಆಯ್ಕೆಗೊಂಡಿವೆ.26 ಗುಣಾತ್ಮಕ ಚಲನಚಿತ್ರಗಳಿಗೆ ತಲಾ 10 ಲಕ್ಷ ರೂಪಾಯಿಗಳಂತೆ, ಎರಡು ಮಕ್ಕಳ ಚಲನಚಿತ್ರಗಳಿಗೆ ತಲಾ 25 ಲಕ್ಷ ರೂಪಾಯಿಗಳಂತೆ ಹಾಗೂ ಮೂರು ಐತಿಹಾಸಿಕ ಪರಂಪರೆಯ ಕಥಾವಸ್ತುವುಳ್ಳ ಚಲನಚಿತ್ರಗಳಿಗೆ ತಲಾ 25 ಲಕ್ಷ ರೂಪಾಯಿಗಳಂತೆ ಧನ ಸಹಾಯ ನೀಡಲು ಸರ್ಕಾರವು ಮಂಜೂರಾತಿ ನೀಡಿರುತ್ತದೆ .

2007-08ನೇ ಸಾಲಿನ ಗುಣಾತ್ಮಕ ಚಲನಚಿತ್ರಗಳ ಆಯ್ಕೆ ಸಲಹಾ ಸಮಿತಿಯು ಈ 26 ಗುಣಾತ್ಮಕ ಚಲನಚಿತ್ರಗಳನ್ನು ಹಾಗೂ ಎರಡು ಮಕ್ಕಳ ಚಿತ್ರಗಳು ಮತ್ತು ಮೂರು ಐತಿಹಾಸಿಕ ಮತ್ತು ಪರಂಪರೆಯ ಕಥಾವಸ್ತುವುಳ್ಳ ಚಲನಚಿತ್ರಗಳನ್ನು ಆಯ್ಕೆ ಮಾಡಿದೆ. ಈ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರದಿಂದ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಜುಲೈ 30, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
England decided to field
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಮಳೆ ಬರಲಿ ಮಂಜು ಇರಲಿ ಎನ್ನುತ್ತಿರುವ ಪಾರ್ವತಿ!

ಪುನೀತ್ ರಾಜ್ ಕುಮಾರ್ ಜತೆ ಮಿಲನ ಚಿತ್ರದಲ್ಲಿ ನಟಿಸಿದ್ದ ಪಾರ್ವತಿ ಮೆನನ್ ಮತ್ತೆ ಕನ್ನಡಕ್ಕೆ ಹಿಂದಿರುಗಿದ್ದಾರೆ. ಅವರು ಅಭಿನಯಿಸುತ್ತಿರುವ ಕನ್ನಡದ ಎರಡನೇ ಚಿತ್ರ ಮಳೆ ಬರಲಿ ಮಂಜು ಇರಲಿ. ವಿಜಯ ಲಕ್ಷ್ಮಿ ಸಿಂಗ್ ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ. ಮಳೆ ಬರಲಿ ಮಂಜು ಇರಲಿ ಧ್ವನಿಸುರುಳಿಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಮುಖ್ಯ ಭೂಮಿಕೆಯಲ್ಲಿ ಶ್ರೀನಗರ ಕಿಟ್ಟಿ ಮತ್ತು ನಾಗಕಿರಣ್ ಇದ್ದಾರೆ. ಮಿಲನ ನಂತರ ಪಾರ್ವತಿ.....
User Comments
veeraraghavan 30 Jul 2009 12:03 pm
Couple of bad movies also ran away with the public money.
ಕೆಟ್ಟಾ ಸುಬ್ಬು 30 Jul 2009 11:53 am
ಸಿದ್ದಲಿಂಗಯ್ಯನವರ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಕೆಲವು ಚಿತ್ರಗಳಿಗೆ ಸಹಾಯಧನ ಸಿಗಬಾರದಿತ್ತು. ದುರದೃಷ್ಟಕರ. ಸರಕಾರದ ಕೆಲವು ಅಧಿಕಾರಿಗಳ ಹಸ್ತಕ್ಷೇಪದಿಂದಾಗಿ ಕೆಟ್ಟ ಅತೀ ಕೆಟ್ಟ ಚಿತರಗಳಿಗೆ ಹಣ ಸಿಕ್ಕಿದೆ. ಇದು ಅನ್ಯಾಯ
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article