•  

'ಬಸವಿ' ಪದ್ಧತಿ ಮೇಲೆ ಬೆಳಕು ಚೆಲ್ಲುವ 'ಇಜ್ಜೋಡು'

ಖ್ಯಾತ ನಿರ್ದೇಶಕ ಎಂ ಎಸ್ ಸತ್ಯು ಸುದೀರ್ಘ 15 ವರ್ಷಗಳ ಬಳಿಕ 'ಇಜ್ಜೋಡು' ಚಿತ್ರದೊಂದಿಗೆ ಮರಳಿದ್ದಾರೆ. ಸಮಾಜದಲ್ಲಿನ ಕಠೋರ ಆಚಾರ ವಿಚಾರಗಳನ್ನು ಆಧರಿಸಿದ ಕತೆಗಳನ್ನು ನಿರ್ವಹಿಸುವಲ್ಲಿ ಎಂ ಎಸ್ ಸತ್ಯು ಸಿದ್ಧಹಸ್ತರು. ಅವರಲ್ಲಿನ ಸೂಕ್ಷ್ಮ ಸಂವೇದನೆ 'ಇಜ್ಜೋಡು' ಚಿತ್ರದಲ್ಲಿ ಮರುಕಳುಹಿಸಿದೆ.

ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಇಜ್ಜೋಡು' ಚಿತ್ರ ಪ್ರಥಮ ಪ್ರದರ್ಶನ ಕಂಡಿತು. ಕರ್ನಾಟಕದಲ್ಲಿ ಆಚರಣೆಯಲ್ಲಿರುವ 'ಬಸವಿ' ಪದ್ದ್ಧತಿಯಲ್ಲಿ ಬಸವಿಯರು ಅಪಮೌಲ್ಯಕ್ಕೊಳಗಾಗಿ ವೇಶ್ಯೆಯರಾಗಿ ಬದಲಾಗುತ್ತಿರುವ ಕಥಾಹಂದರವನ್ನು 'ಇಜ್ಜೋಡು' ಚಿತ್ರ ಹೊಂದಿದೆ.

ಬಳ್ಳಾರಿ ಜಿಲ್ಲೆಯೊಂದರಲ್ಲಿ 1000 ಬಸವಿಯರನ್ನು ಬಲವಂತವಾಗಿ ವೇಶ್ಯೆಯರನ್ನಾಗಿಸುತ್ತಿರುವ ಅಂಶ ಎರಡು ವರ್ಷಗಳ ಹಿಂದೆ ಬೆಳಕು ಕಂಡಿತು. ಸರ್ಕಾರೇತರ ಸಂಸ್ಥೆಯೊಂದು ನಿರ್ವಹಿಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿತು. ನನಗೆ ದೊರೆತ ಈ ಮಾಹಿತಿ ಇಜ್ಜೋಡು ಚಿತ್ರವನ್ನು ನಿರ್ದೇಶಿಸುವಂತೆ ಮಾಡಿತು ಎಂದು ಚಿತ್ರ ಪ್ರದರ್ಶನದ ಬಳಿಕ ಸತ್ಯ್ಯು ತಿಳಿಸಿದ್ದಾರೆ.

ಕರ್ನಾಟಕದ ಸುಂದರ ಸ್ಥಳಗಳಲ್ಲಿ ಇಜ್ಜೋಡು ಚಿತ್ರ ಚಿತ್ರೀಕರಣಗೊಂಡಿದೆ. ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ನಟಿ ಮೀರಾ ಜಾಸ್ಮಿನ್ ನಟಿಸಿದ್ದಾರೆ. ಅನಿರುದ್ಧ್, ಶ್ರೀವತ್ಸ, ನಾಗಕಿರಣ್, ಅರುಂಧತಿ ಜತ್ಕರ್ ಸಹ ನಟಿಸಿದ್ದಾರೆ. ಬಸವಿ ಪದ್ಧತಿ ಬಗ್ಗೆ ನೇರವಾಗಿ ಪ್ರಸ್ತಾಪಿಸದೆ ನಂಬಿಕೆ ಮತ್ತು ಅಪನಂಬಿಕೆ ಕುರಿತ ಚರ್ಚೆಗೆ ಕಲಾತ್ಮಕ ರೀತಿಯಲ್ಲಿ ಕತೆಗೆ ತಿರುವು ನೀಡಿದ್ದಾರೆ ಸತ್ಯು. ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಿಸಿದ ಮೊದಲ ಕನ್ನಡ ಚಿತ್ರ ಇದಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಜುಲೈ 2, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
England decided to field
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಏ.30ಕ್ಕೆ ಎಂ ಎಸ್ ಸತ್ಯು 'ಇಜ್ಜೋಡು' ತೆರೆಗೆ

ಸುದೀರ್ಘ ಸಮಯದ ಬಳಿಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಎಂ ಎಸ್ ಸತ್ಯು ನಿರ್ದೇಶನದ 'ಇಜ್ಜೋಡು' ಚಿತ್ರ ಏಪ್ರಿಲ್ 30ರಂದು ತೆರೆಕಾಣಲಿದೆ. ರಿಲಯನ್ಸ್ ಬಿಗ್ ಫಿಕ್ಚರ್ಚ್ ನಿರ್ಮಾಣದಲ್ಲಿ ಬಂದ ಚೊಚ್ಚಲ ಕನ್ನಡ ಚಿತ್ರವಿದು. ಈಗಾಗಲೆ ದೇಶದ ನಾಲ್ಕು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ 'ಇಜ್ಜೋಡು' ಪ್ರದರ್ಶನ ಕಂಡಿದೆ.ಸಮಾಜದಲ್ಲಿನ ಕಠೋರ ಆಚಾರ ವಿಚಾರಗಳನ್ನು ಆಧರಿಸಿದ ಕತೆಗಳನ್ನು ನಿರ್ವಹಿಸುವಲ್ಲಿ ಎಂ ಎಸ್ ಸತ್ಯು ಸಿದ್ಧಹಸ್ತರು. ಅವರಲ್ಲಿನ ಸೂಕ್ಷ್ಮ ಸಂವೇದನೆ 'ಇಜ್ಜೋಡು' ಚಿತ್ರದಲ್ಲಿ ಮರುಕಳುಹಿಸಿದೆ.ಕರ್ನಾಟಕದಲ್ಲಿ.....
User Comments
ಹಳ್ಳಿಯವ 03 Jul 2009 08:19 pm
ಈಗಿನ ಕಾಲದ ಹೈಟೆಕ್ ಬಸವಿಯರು ಮತ್ತು ಹೈ ಸೊಸೈಟಿ ಬಸವಿಯರ ಬಗ್ಗೆ ಚಿಂತಿಸಿರಿ. ಯಾವುದೊ ಓಬಿರಾಯನ ಕಾಲದ ಬಗ್ಗೆ ತಿರುಗಾ ಮರುಗಾ ಮಳೆ ಹೊಡಿ ಬ್ಯಾಡಿ
ಅರುಣ್ 03 Jul 2009 05:27 pm
ಉಪ್ಪಿ
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article