•  

ತೆಲುಗುಖ್ಯಾತ ನಿರ್ದೇಶಕ ಗೀತಾಕೃಷ್ಣರಿಂದ ಕನ್ನಡ ಚಿತ್ರ

Telugu film director Geetha Krishna
ತೆಲುಗು ಚಿತ್ರ ನಿರ್ದೇಶಕ ಎ ಎಸ್ ಗೀತಾಕೃಷ್ಣ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಚಿತ್ರ ತಯಾರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ತೆಲುಗಿನಲ್ಲಿ ಅವರು ನಿರ್ದೇಶಿಸಿದ್ದ'ಕೋಕಿಲ' ಮತ್ತ್ತು 'ಕೀಚುರಾಳ್ಳು' ಎಂಬ ಚಿತ್ರಗಳು ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ್ದವು.

ತೆಲುಗಿನಲ್ಲಿ 'ಕಾಫಿ ಬಾರ್' ಎಂದು ತಮಿಳಿನಲ್ಲಿ 'ನಿಮಿಡಂಗಳ್' ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಕನ್ನಡ ಚಿತ್ರ ಇನ್ನೂ ನಾಮಕರಣಗೊಂಡಿಲ್ಲ. ಏಪ್ರಿಲ್ ಕೊನೆಗೆ ಚಿತ್ರ ಸೆಟ್ಟೇರಲಿದೆ. ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಳ್ಳಲಿರುವ ಚಿತ್ರದ ತಾರಾಬಳಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.ಕತೆ, ಚಿತ್ರಕತೆ, ಸಂಭಾಷಣೆ, ಸಂಗೀತ, ನಿರ್ದೇಶನ ಮತ್ತು ನಿರ್ಮಾಣ ಹೀಗೆ ಸಮಸ್ತ ಜವಾಬ್ದಾರಿಗಳನ್ನು ಗೀತಾಕೃಷ್ಣ ಅವರೇ ನಿಭಾಯಿಸಲಿದ್ದಾರೆ.

ಕನ್ನಡಿಗ ಮುರಳಿ ಮತ್ತು ಎಂ ವಿ ರಘು ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ. ಚಿತ್ರದ ವಿತರಣೆ ಹಕ್ಕುಗಳನ್ನು ಆಡ್ ಲ್ಯಾಬ್ಸ್ ಪಡೆದುಕೊಂಡಿದೆ. ಗಿರೀಶ್ ಕಾರ್ನಾಡ್, ತಾರಾ ನಟಿಸಿದ್ದ 'ಸಂಕೀರ್ತನಾ' ಚಿತ್ರಕ್ಕೆ ಗೀತಾಕೃಷ್ಣ ಅವರು ಆಂಧ್ರಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದಿದ್ದರು.ಅಂದಹಾಗೆ ಈ ಚಿತ್ರಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ರೆಡ್ ಒನ್ ಡಿಜಿಟಲ್ ಕ್ಯಾಮೆರಾವನ್ನು ಬಳಸಲಾಗುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಪ್ರೇಮ್ ಕಹಾನಿ ಹಿಂದಿ ಶೀರ್ಷಿಕೆ ಬಗ್ಗೆ ಆಕ್ಷೇಪ
ಸರೋಜ್ ಖಾನ್‌ಗೆ ಏಕೋ ಮುನಿಸು
ತಾರೆ ಜಮೀನ್ ಪರ್ ಡಬ್ಬಿಂಗ್ ಕೈಬಿಟ್ಟ ಸರ್ಕಾರ
ಸಂಗೀತ ನಿರ್ದೇಶಕರಿಗೆ ಲಹರಿ ವೇಲು ಛೀಮಾರಿ
ಮಾರ್ಚ್ 24, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಆಂಗ್ಲ ಹಾಗೂ ಹಿಂದಿ ಭಾಷೆಯಲ್ಲಿ ಕಾಫಿ ಶಾಪ್

ಬ್ಲೂ ಫಾಕ್ಸ್ ಸಿನಿಮಾ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಕಾಫಿ ಶಾಪ್' ಚಿತ್ರವನ್ನು ಆಂಗ್ಲ ಹಾಗೂ ಹಿಂದಿ ಭಾಷೆಗೆ ಡಬ್ಬಿಂಗ್ ಮಾಡುತ್ತಿರುವುದಾಗಿ ನಿರ್ಮಾಣದೊಂದಿಗೆ ನಿರ್ದೇಶನದ ಉಸ್ತುವಾರಿಯನ್ನು ಹೊತ್ತಿರುವ ಗೀತಾಕೃಷ್ಣ ತಿಳಿಸಿದ್ದಾರೆ. ಕನ್ನಡ, ತಮಿಳು ಹಾಗೂ ತೆಲಗು ಭಾಷೆಯಲ್ಲೂ ನಿರ್ಮಾಣವಾಗುತ್ತಿರುವ 'ಕಾಫಿ ಶಾಪ್'ಚಿತ್ರದ ಚಿತ್ರೀಕರಣೇತರ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ ಎಂದು ತಿಳಿಸಿರುವ ನಿರ್ಮಾಪಕರು ಮೇಲಿನ.....
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article