•  

ವಿಷ್ಣುವರ್ಧನ್ ಪ್ರಶ್ನೆಗೆ ಜಯಮಾಲಾ ನೇರ ಉತ್ತರ

Jayamala not contesting LS polls
ಎರಡು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ನೇರ ಪ್ರತಿಕ್ರಿಯೆ ನೀಡಿದ್ದಾರೆ. ನಟ ಡಾ.ವಿಷ್ಣುವರ್ಧನ್ ಇತ್ತೀಚೆಗೆ ಮಾತನಾಡುತ್ತಾ, ಟೈಗರ್ ಪ್ರಭಾಕರ್ ಅವರನ್ನು ಅಮೃತ ಮಹೋತ್ಸವದ ಮೊದಲ ದಿನ(ಮಾರ್ಚ್ 1) ಸ್ಮರಿಸಿಕೊಳ್ಳದೆ ಇದ್ದ್ದದ್ದು ದೊಡ್ಡ ದುರಂತ ಎಂದು ದೂರಿದ್ದರು.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಜಯಮಾಲಾ , ವಿಷ್ಣುವರ್ಧನ್ ಅವರು ಕ್ಲಿಪ್ಪಿಂಗ್ ಗಳನ್ನು ಸರಿಯಾಗಿ ನೋಡಿಲ್ಲ. ಅಮೃತ ಮಹೋತ್ಸವದ ಮೊದಲ ದಿನ ಪ್ರದರ್ಶಿಸಿದ ಕ್ಲಿಪ್ಪಿಂಗ್ ಗಳಲ್ಲಿ ನಮ್ಮನ್ನು ಅಗಲಿದ ಕನ್ನಡದ ಎಲ್ಲ ಮಾಹಾನ್ ಕಲಾವಿದರನ್ನು ಸ್ಮರಿಸಿಕೊಳ್ಳಲಾಯಿತು. ಅದರಲ್ಲಿ ಟೈಗರ್ ಪ್ರಭಾಕರ್ ಸಹ ಇದ್ದರು. ಸ್ವತಃ ನಾನೇ ನೋಡಿದ್ದೇನೆ ಎಂದು ಉತ್ತರಿಸಿದ್ದಾರೆ.

ಎರಡನೆಯ ಪ್ರಮುಖ ವಿಷಯವೆಂದರೆ, ಜಯಮಾಲಾ ರಾಜಕೀಯ ಪ್ರವೇಶ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಂದಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ, ಕೆಎಫ್ ಸಿಸಿ ಅಧ್ಯಕ್ಷೆಯಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಂಬಿ ಮತ್ತು ಜಯಮಾಲಾ ಚುನಾವಣೆಗೆ ಸ್ಪರ್ಧೆ?
ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ?
ಕೆಎಫ್ ಸಿಸಿ ನಿರ್ಲಕ್ಷ್ಯ ಧೋರಣೆಗೆ ದರ್ಶನ್ ಬೇಸರ
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?
ಮಾರ್ಚ್ 19, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!

ಕರ್ನಾಟಕ ಫಿಲಂ ಅಕಾಡೆಮಿ ಬಫ್ ಪೇಪರ್ ಮೇಲೆ ಸ್ಥಾಪನೆಯಾಗಿ ಐದು ತಿಂಗಳಾದವು. ಸಿನಿಮಾ ಸಂಸ್ಕೃತಿ ಹಬ್ಬುವ ಈ ಸಂಸ್ಥೆ ಕಾರ್ಯಾರಂಭ ಮಾಡುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಇದು ಏನನ್ನು ಸೂಚಿಸುತ್ತದೆ?* ಎಸ್ಕೆ. ಶಾಮಸುಂದರಚಲನಚಿತ್ರ ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಕರ್ನಾಟಕ ಫಿಲಂ ಅಕಾಡೆಮಿ ಎಂಬ ಸಂಸ್ಥೆ ಸ್ಥಾಪನೆ ಆಗಿತ್ತು, ನೆನಪಿದೆಯಾ? ಆಗ ಹಣಕಾಸು ಸಚಿವ.....
User Comments
ಶಿವರಾಜ ಕೆ ಏನ್ 20 Mar 2009 12:59 am
ತಮ್ಮವರೇ ಆಗಿದ್ದ ಟೈಗರ್ ಪ್ರಭಾಕರ ಅವರನ್ನು ಮರೆಯುವಷ್ಟು ಕೆಟ್ಟವರಲ್ಲ ನಮ್ಮ ಜಯಮಾಲಾ. ಮೊಸರಿನಲ್ಲಿ ಕಲ್ಲು ಹುಡುಕುವ ವಿಷ್ಣು ಅವರದೇ ತಪ್ಪು.
ಉಪೇಂದ್ರ 19 Mar 2009 11:18 pm
ವಿಷ್ಣು ಫಿಟ್ಟಿಂಗ್ ಮಾಸ್ಟರ್. ಇಷ್ಟು ದಿನ ಅಂಬಿಯನ್ನು ಬಳಸಿಕೊಂಡು ಅಂಬಿ ಹೆಸರು ಕೆಡಿಸಿದ್ದಾಯಿತು. ಮೊನ್ನೆ ಕೆ ಮಂಜು.. ಈಗ ಬೇರೆಯವರನ್ನು ಹುಡುಕುತ್ತಿದ್ದಂತೆ ತೋರುತ್ತದೆ.
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article