•  

‘ಸಿಲ್ಲಿ ಲಲ್ಲಿ’ ಕಾಂಪೌಂಡರ್‌ ಈಗ ಕೆಎಎಸ್‌ ಆಫೀಸರ್‌!

Sangameshಬೆಂಗಳೂರು : ಈ ಟೀವಿಯ ಜನಪ್ರಿಯ ಧಾರಾವಾಹಿ ಸಿಲ್ಲಿಲಲ್ಲಿಯಲ್ಲಿ , ಕೌಂಪೌಂಡರ್‌ ಗೋವಿಂದನಾಗಿ ಖ್ಯಾತವಾಗಿರುವ ಸಂಗಮೇಶ ಉಪಾಸೆ ಕೆಎಎಸ್‌ ಮೊದಲ ಶ್ರೇಣಿ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

1998ರಲ್ಲಿ ನಡೆಸಿದ ಕೆಎಎಸ್‌ ಪರೀಕ್ಷೆ ಫಲಿತಾಂಶದ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಮಂಗಳವಾರವಷ್ಟೆ ಪ್ರಕಟಿಸಿದೆ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಾಂದಿಗೆ ಆಯ್ಕೆಯಾಗಿರುವ ಉಪಾಸೆ, ಅಸಿಸ್ಟಂಟ್‌ ಕಂಟ್ರೋಲರ್‌ ಹುದ್ದೆ ತನ್ನದಾಗಿಸಿಕೊಂಡಿದ್ದಾರೆ.

ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅವರು, ಆಕಾಶವಾಣಿ ಬಿ ಗ್ರೇಡ್‌ ಕಲಾವಿದ. ನಾಟಕ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಪತ್ರಿಕೆಯಾಂದರ ಉಪಸಂಪಾದಕರಾಗಿದ್ದ ಅವರು ಪ್ರಕಾಶನ ಕ್ಷೇತ್ರದಲ್ಲೂ ಕೆಲಸಮಾಡಿದ್ದಾರೆ.

ವೃತ್ತಿಯಿಂದ ಕನ್ನಡ ಉಪನ್ಯಾಸಕರಾಗಿರುವ ಸಂಗಮೇಶ್‌, ಪ್ರವೃತ್ತಿಯಿಂದ ಕಲಾವಿದ. ಈ ಟೀವಿಯಲ್ಲಿ ಪ್ರಸಾರವಾಗುವ ಸಿಲ್ಲಿಲಲ್ಲಿಯ ಕಾಂಪೌಂಡರ್‌ ಗೋವಿಂದನ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಇದೀಗ ಆಡಳಿತ ಕ್ಷೇತ್ರಕ್ಕೆ ಅಡಿ ಇಡುತ್ತಿರುವ ಅವರು, ಯಶಸ್ವೀ ಆಡಳಿತಗಾರ ಎನಿಸಿಕೊಳ್ಳಲಿ ಎಂದು ದಟ್ಸ್‌ಕನ್ನಡ ಹಾರೈಸುತ್ತದೆ.

(ದಟ್ಸ್‌ ಕನ್ನಡ ವಾರ್ತೆ)

ಪೂರಕ ಓದಿಗೆ :
'ನನ್ನ ಹೆಸರು ಉಪಾಸೆ ಕಣ್ರೀ...ಗೋವಿಂದ ಅಲ್ರೀ..."

ಜನವರಿ 29, 2003 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌

ಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ.....
User Comments
ಮಾಣಿಕರಾವ್ ಮುಲಗಿ 01 Jun 2010 03:51 pm
ಇದು ದೊಡ್ಡ ಸಾಧನೆ ದೇವರು ಒಳ್ಳೆಯದು ಮಾಡಲಿ ಒಬ್ಬ ಒಳ್ಳೆ ಆಫೀಸೆರ್ ಆಗಿ ಕೆಲಸ ನಿರ್ವಹಿಸಲಿ
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article