ಹೇಳಿಕೊಳ್ಳೋಕೆ ಇಬ್ಬರೂ ನಮ್ಮೂರಿನ ಹುಡುಗ ಹುಡ್ಗಿ ಕಣ್ರಿ, ಏನೋ ಹೊಟ್ಟೆಪಾಡು ಪಕ್ಕದಮನೆಯಲ್ಲಿ ಬೆಳೆಯುತ್ತಾ ಇದ್ದಾರೆ. ಕರ್ನಾಟಕ ಮೂಲದ ಲಕ್ಷ್ಮಿ ರೈ ಹಾಗೂ ವಿನಯ್ ರೈ ಈಗ ತಮಿಳು ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ಹೆಸರು ಮಾಡಿರುವ ನಟ, ನಟಿ. ವಿನಯ್ ರೈ ಇನ್ನೂ ಬೆಳೆಯುತ್ತಿರುವ ಪ್ರತಿಭೆ. ಲಕ್ಷ್ಮಿ ರೈ ಈಗಾಗಲೇ ದೊಡ್ಡ ಸ್ಟಾರ್ ಗಳ ಜೊತೆ ಕುಣಿದಾಡಿರುವ ಬೆಡಗಿ ಅದರೆ, ಇತ್ತೀಚೆಗೆ ಇವರಿಬ್ಬರ ನಡುವೆ ಏನೋ ಗುಸು ಗುಸು ಪಿಸುಪಿಸು ನಡೆಯುತ್ತಿದೆ ಎಂದು ಗುಲ್ಲೋ ಗುಲ್ಲು.
ಇಬ್ಬರು 'ಒನ್ಬಧುಲೆ ಗುರು' ಎಂಬ ತಮಿಳು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಆದರೆ, ಶೂಟಿಂಗ್ ನಲ್ಲಾಗಲಿ, ವಿರಾಮದಲ್ಲಾಗಲಿ ಇವರಿಬ್ಬರ ಸರಸ ಹಲವರ ಕಣ್ಣು ಕುಕ್ಕಿದೆ. ಇಬ್ಬರು ಜೊತೆ ಜೊತೆಯಲ್ಲಿ ಎಂದು ಹಾಡಿ ಕುಣಿಯುವುದನ್ನು ಕಂಡು ಕೆಲವರು ಕೇಳಿದ್ದಾರೆ. ಏನ್ರಪ್ಪಾ ಇದೆಲ್ಲ ಅಂತಾ? ಅದಕ್ಕೆ ಇಬ್ಬರು ಒಂದೇ ಊರು ಕಷ್ಟ ಸುಖ ಮಾತಾಡಿಕೊಳ್ಳುತ್ತಿದ್ದೇವೆ ಅಷ್ಟೇ ಎಂದಿದ್ದಾರೆ.
ತಮಿಳು ಚಿತ್ರದ ಶೂಟಿಂಗ್ ನಲ್ಲಿ ಇಬ್ಬರು ಒಟ್ಟಿಗೆ ಸೇರಿದಾಗ ತಮಿಳು ಬಿಟ್ಟು ಕನ್ನಡ, ತುಳು, ಇಂಗ್ಲೀಷ್ ನಲ್ಲಿ ಹರಟೆ ಹೊಡೆಯುವುದು ಅಲ್ಲಿದ್ದವರಿಗೆ ಸ್ವಲ್ಪ ಇರಸು ಮುರುಸು ತಂದಿದೆಯಂತೆ. ಆದ್ರೆ, ಆನ್ ಸ್ಕ್ರೀನ್ ರೋಮಾನ್ಸ್ ನ ರೂಮ್ ತನಕ ಕರೆದೊಯ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಲಕ್ಷ್ಮಿ ರೈ ಹಿಂದೆ ಬಿದ್ದವರು ಅನೇಕ ಮಂದಿ ಹೌದೇ ನಿಜವೇ ವಿನಯ್ ರೈ ಜೊತೆ ಲಕ್ಷ್ಮಿ ರೂಮ್ ಶೇರ್ ಮಾಡಿಕೊಂಡಿದ್ಲಾ ಎಂದು ಪ್ರಶ್ನಿಸಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿದೆ.


































