•  

ಕನ್ನಡದಲ್ಲಿ ನಾನು ನಟಿಸುತ್ತಿಲ್ಲ ಎಂದ ಸಮೀರಾ ರೆಡ್ಡಿ

ಬುಧವಾರ, ಫೆಬ್ರವರಿ 15, 2012, 17:54 [IST]
ಅರ್ಧ ಕನ್ನಡತಿ ಇನ್ನರ್ಧ ತೆಲುಗು ಭಾಮಾ ಸಮೀರಾ ರೆಡ್ಡಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಗೋತಾ ಹೊಡೆದಿದೆ. ತಾವು ಯಾವುದೇ ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದು ಸ್ವತಃ ಸಮೀರಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇದು ಯಾರೋ ಹಾರಿಸಿದ ಗಾಳಿಪಟ ಎಂಬುದು ಆಕೆಯ ಉತ್ತರ.

ಕನ್ನಡ ಚಿತ್ರವೊಂದರಲ್ಲಿ ನಟಿಸಲು ನನಗೆ ಆಫರ್ ಬಂದಿತ್ತು. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿರುವ ಕೆಲವರು ಕನ್ನಡಕ್ಕೆ ಸಹಿ ಹಾಕಿದ್ದಾಗಿ ಪ್ರಕಟಿಸಿದ್ದಾರೆ. ಆದರೆ ನಾನು ಯಾವುದೇ ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದಿದ್ದಾರೆ.

ಈ ಹಿಂದೊಮ್ಮೆ ಸಮೀರಾ ರೆಡ್ಡಿ ಕನ್ನಡದಲ್ಲಿ ಅಭಿನಯಿಸಬೇಕೆಂಬ ತಮ್ಮ ತೀರದ ಬಯಕೆಯನ್ನು ತೋಡಿಕೊಂಡಿದ್ದರು. ಆದರೆ ಇತ್ತೀಚೆಗೆ ಮಾಧವನ್ ಜೊತೆಗಿನ ತಮಿಳು ಚಿತ್ರ ಬಾಕ್ಸಾಫೀಸಲ್ಲಿ ಝಣ ಝಣ ಸದ್ದು ಮಾಡಿದೆ. ಇನ್ನು ಕನ್ನಡಕ್ಕೆ ಬರುವ ಮಾತೆಲ್ಲಿ ಎಂಬುದು ಆಕೆಯ ಮಾತಿನ ಸಾರಾಂಶ. (ಏಜೆನ್ಸೀಸ್)
User Comments
Kannadiga 16 Feb 2012 11:31 am
ಯಾರಿಗೆ ಬೇಕು ಅವ್ಳು ಕನ್ನಡದಲ್ಲಿ ಫಿಲಂ ಮಾಡೋದು... ಈ ಥರ ಡಬ್ಬ ಅಚ್ತ್ರೆಸ್ಸ್ ಮಾಡ್ಲಿಲ್ಲ ಅಂದ್ರೆ ಒಳ್ಳೇದು :)
[ ಅಭಿಪ್ರಾಯ ಬರೆಯಿರಿ ]
   
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article