twitter
    For Quick Alerts
    ALLOW NOTIFICATIONS  
    For Daily Alerts

    ಜಯಾ ದರ್ಬಾರಿನಲ್ಲಿ ಲೀಲಾವತಿಗೆ ಅಪಮಾನ

    By Mahesh
    |

    ಭಾರತೀಯ ಚಿತ್ರರಂಗ ಶತಮಾನೋತ್ಸವದ ಶುಭ ಸಂದರ್ಭದಲ್ಲಿ ಚೆನ್ನೈನಲ್ಲಿ ಸೆಪ್ಟೆಂಬರ್ 21ರಿಂದ 24ರ ನಾಲ್ಕು ದಿನಗಳ ಕಾಲ ನಡೆದ ಜಯಲಲಿತಾ ದರ್ಬಾರ್ ಸಮಾರೋಪಗೊಂಡಿದೆ. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ತಂತ್ರಜ್ಞರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗಿದೆ. ಆದರೆ, ಹಿರಿಯ ಕಲಾವಿದರಾದ ಲೀಲಾವತಿ, ಜಯಮಾಲಾ ಅವರಿಗೆ ಅಪಮಾನ ಆಗಿರುವ ಘಟನೆ ಕೂಡಾ ವರದಿಯಾಗಿದೆ.

    ಚೆನ್ನೈನಲ್ಲಿಮುಕ್ತಾಯಗೊಂಡ ಚಿತ್ರರಂಗದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ನಟಿಯರಾದ ಲೀಲಾವತಿ ಹಾಗೂ ಜಯಮಾಲಾರಿಗೆ ಅಪಮಾನ ಮಾಡಿರುವ ಹೊಣೆಯನ್ನು ಯಾರು ಹೊರಬೇಕು? ಸಾಂಸ್ಕೃತಿಕ ಕಾರ್ಯಕ್ರಮದ ಹೊಣೆ ಹೊತ್ತಿದ್ದ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಮೇಲೆ ಎಲ್ಲರೂ ಗೂಬೆ ಕೂರಿಸುತ್ತಿದ್ದಾರೆ. ನಟಿ ಲೀಲಾವತಿ ಹಾಗೂ ಜಯಮಾಲಾರನ್ನು ಆಹ್ವಾನಿಸಿ ಸನ್ಮಾನ ಮಾಡದೇ ಅವಮಾನ ಮಾಡಲಾಗಿರುವುದನ್ನು ಮಾತ್ರ ಎಲ್ಲರೂ ಖಂಡಿಸುತ್ತಿದ್ದಾರೆ.

    ಲೀಲಾವತಿ ಕೋರಗೇನು?: ಲೀಲಾವತಿ ಅವರಿಗೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಟೇಡಿಯಂ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಕಾರ್ಯಕ್ರಮದ ನಾಲ್ಕನೇ ದಿನವಾದ ನಿನ್ನೆ ಹಿರಿಯ ಕಲಾವಿದರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯಿಂದ ಸನ್ಮಾನ ಮಾಡುವ ಕಾರ್ಯಕ್ರಮ ಇತ್ತು.

    ಕನ್ನಡ ಚಿತ್ರರಂಗದ ಕಲಾವಿದರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಖುದ್ದಾಗಿ ಆಹ್ವಾನ ಪತ್ರ ನೀಡಿ ಆಹ್ವಾನಿಸಿತ್ತು. ಆದರೆ ಚೆನ್ನೈಗೆ ಹೋಗಲು ಲೀಲಾವತಿಯವರಿಗೆ ಮಂಡಳಿ ಯಾವುದೇ ಸಾರಿಗೆ ವ್ಯವಸ್ಥೆ ಮಾಡಿರಲಿಲ್ಲ. ತಮ್ಮದೇ ವಾಹನದಲ್ಲಿ ನಟ ವಿನೋದ್ ರಾಜ್ ಅಮ್ಮ ಲೀಲಾವತಿಯವರನ್ನು ಕರೆದೊಯ್ದಿದ್ದರು.

    ಹಿರಿಯ ನಟಿ ಲೀಲಾವತಿಯವರಿಗೆ ಸನ್ಮಾನ ಮಾಡದೇ ಅಪಮಾನ ಮಾಡಲಾಗಿದೆ. ಲೀಲಾವತಿ ಹಾಗೂ ಅವರ ಮಗ ನಟ ವಿನೋದ್ ರಾಜ್ ಗೆ ತಮಿಳುನಾಡು ಪೊಲೀಸರು ಕಾರ್ಯಕ್ರಮ ನಡೆದ ಜವಹರಲಾಲ್ ನೆಹರೂ ಸ್ಟೇಡಿಯಂನೊಳಕ್ಕೆ ಪ್ರವೇಶಿಸಲು ಬಿಟ್ಟಿಲ್ಲ. ಕನಿಷ್ಠ ಸೌಜನ್ಯವನ್ನೂ ತೋರದೇ ಅವಮಾನ ಮಾಡಿದ್ದಾರೆ. ಇದರಿಂದ ಕನ್ನಡದ ಹಿರಿಯ ನಟಿ ತೀವ್ರವಾಗಿ ನೊಂದುಕೊಂಡಿದ್ದಾರೆ. ಜಯಮಾಲಾಗೂ ಅಪಮಾನ, ಜಗ್ಗೇಶ್ ಕಾರ್ಯಕ್ರಮಕ್ಕೆ ಹೋಗುವುದನ್ನು ಸ್ವಯಂ ನಿಷೇಧ ಹೇರಿಕೊಂಡಿದ್ದು ಇನ್ನಷ್ಟು ಸುದ್ದಿ ಮುಂದೆ ಓದಿ...

    ಲೀಲಾವತಿ ಹೇಳಿಕೆ

    ಲೀಲಾವತಿ ಹೇಳಿಕೆ

    ‘ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಂದ ಸನ್ಮಾನ ಸ್ವೀಕರಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನನಗೆ ಆಹ್ವಾನ ನೀಡಿತ್ತು. ಮಂಗಳವಾರದ ಸಮಾರೋಪ ಸಮಾರಂಭಕ್ಕೆ ತಡವಾಗಿ ಬರಲು ಹೇಳ­ಲಾಗಿತ್ತು.

    ಅದರಂತೆ ಸಂಜೆ ನಾಲ್ಕು ಗಂಟೆಗೆ ಸ್ಥಳಕ್ಕೆ ತೆರಳಿದಾಗ ಪೊಲೀಸರು ಒಳಗೆ ಬಿಡಲಿಲ್ಲ. ನಮ್ಮ ಚಿತ್ರರಂಗಕ್ಕೆ ಸಂಬಂಧಿಸಿದವರಿಗೆ ಕರೆ ಮಾಡಿದರೇ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಇದು ತುಂಬಾ ನೋವುಂಟು ಮಾಡಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕೈಲಿ ಹಣ ಇರಲಿಲ್ಲ

    ಕೈಲಿ ಹಣ ಇರಲಿಲ್ಲ

    ನಾವು ಬೆಳೆದ ತರಕಾರಿ, ತೆಂಗಿನ ಕಾಯಿ ಮಾರಿ ಹಣ ಹೊಂದಿಸಿಕೊಂಡು ಚೆನ್ನೈಗೆ ತೆರಳಿದೆವು. 22ನೇ ತಾರೀಖು ವಾಪಸ್ ಹೋಗುವಂತೆ ಕೆಎಫ್ ಸಿಸಿ ಅಧಿಕಾರಿ ವಿಜಯ್ ಕುಮಾರ್ ಹೇಳಿದರು. 24ಕ್ಕೆ ಸನ್ಮಾನ ಎಂದರು ಎಲ್ಲವೂ ಗೊಂದಲಮಯವಾಗಿ ಕಣ್ಣೀರಿಡುವಂತಾಯಿತು.

    OMR ರಸ್ತೆಯಲ್ಲಿ ಬರುವಾಗ ಕಣ್ಣೀರಿಡುತ್ತಲೇ ಬಂದೆ. ಚೆನೈ ನನಗೇನು ಹೊಸದಲ್ಲ. ಇಲ್ಲೇ ಇದ್ದವಳು. ಆದರೆ, ಕರೆಸಿಕೊಂಡು ಬರಿಗೈಯಲ್ಲಿ ಹೋಗಿ ಎಂದಾಗ ಸಹಿಸಲು ಸಾಧ್ಯವಾಗಲಿಲ್ಲ.

    ರಾತ್ರಿ ಡಿನ್ನರ್ ಗೆ ಪಾಸ್ ನೀಡುವಾಗಲೂ ನಮನ್ನು ಕಡೆಗಣಿಸಲಾಯಿತು. ವಿಜಯ್ ಕುಮಾರ್ ಅವರು 22ನೇ ತಾರೀಖು 10 ಸಾವಿರ ರು ಕೊಟ್ಟು ವಾಪಸ್ ಹೋಗಿ ಎಂದಿದ್ದರು ಎಂದು ಲೀಲಾವತಿ ಹೇಳಿದ್ದಾರೆ.

    ನಟಿ ಜಯಮಾಲಾಗೂ ಅಪಮಾನ

    ನಟಿ ಜಯಮಾಲಾಗೂ ಅಪಮಾನ

    ಡಾ.ಜಯಮಾಲಾರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನ ಮಾಡದೇ ಅಪಮಾನ ಮಾಡಲಾಗಿದೆ. ಈ ಮುಂಚೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಆಂಧ್ರಪ್ರದೇಶ ಸಿಎಂ ಕಿರಣ್ ಕುಮಾರ್ ರೆಡ್ಡಿಯವರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಕಾರ್ಯಕ್ರಮ ವಿವಾದದಿಂದಲೇ ಆರಂಭವಾಗಿತ್ತು. ಇದೀಗ ಶತಮಾನೋತ್ಸವಕ್ಕೆ ಹಿರಿಯ ಕಲಾವಿದರನ್ನು ಕರೆಸಿ ಸನ್ಮಾನ ಮಾಡದೇ ವಿವಾದದಿಂದಲೇ ಮುಕ್ತಾಯ ಕಂಡಿದೆ. ಸುಮಾರು 60ಕ್ಕೂ ಅಧಿಕ ಗಣ್ಯರಿಗೆ ರಾಷ್ಟ್ರಪತಿಗಳಿಂದ ಪದಕ ಹಾಗೂ ಸನ್ಮಾನ ಏರ್ಪಡಿಸಲಾಗಿತ್ತು

    ಯಾರಿಗೆ ಸನ್ಮಾನ

    ಯಾರಿಗೆ ಸನ್ಮಾನ

    ನಟ ರೆಬಲ್ ಸ್ಟಾರ್ ಅಂಬರೀಶ್, ಪಾರ್ವತಮ್ಮ ರಾಜ್ ಕುಮಾರ್, ವಿ ರವಿಚಂದ್ರನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಉಪೇಂದ್ರ, ದ್ವಾರಕೀಶ್, ಡಾ.ಜಯಮಾಲಾ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರಿಗೆ ಆಹ್ವಾನ ಕಳಿಸಲಾಗಿತ್ತು.

    ಜಗ್ಗೇಶ್ ಗೆ ಆಹ್ವಾನ ಸಿಗದ ಕಾರಣ ಸನ್ಮಾನವೂ ಬೇಡ ಅವಮಾನವೂ ಬೇಡ ಎಂದು ಕಾರ್ಯಕ್ರಮಕ್ಕೆ ಹೋಗಿರಲಿಲ್ಲ

    ಜಗ್ಗೇಶ್ ಟ್ವೀಟ್

    ಕನ್ನಡ ಚಿತ್ರರಂಗ ಬೆಳೆಯಬೇಕಾದರೆ ಏನು ಮಾಡಬೇಕು ಎಂಬುದಕ್ಕೆ ನವರಸ ನಾಯಕನ ಉತ್ತರ

    ಸಿಕ್ಕಿಂದ್ರೆ ಸಿರುಂಡೆ

    ಸಿಕ್ಕಿಂದ್ರೆ ಸಿರುಂಡೆ

    ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ದೇಶದ ಬಹುತೇಕ ಹಿರಿಯ ಕಲಾವಿದರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಜಯಲಲಿತಾ ಹಾಗೂ ರಾಜ್ಯಪಾಲ ರೋಶಯ್ಯ ಉಪಸ್ಥಿತರಿದ್ದರು.

    ವೇದಿಕೆ ಮೇಲೆ ಬಂದ ಕಲಾವಿದರಿಗೆ ಮಾತ್ರ ಸನ್ಮಾನ ಸಮಯಕ್ಕೆ ಬಂದರೆ ಮಾತ್ರ ಆದ್ಯತೆ ಎಂಬ ಅಲಿಖಿತ ನಿಯಮ ಇತ್ತು ಬಹುಶಃ ಇದೇ ಲೀಲಾವತಿ ಅವರಿಗೆ ಮುಳುವಾಗಿರುವ ಸಾಧ್ಯತೆ ಯಿದೆ. ಸನ್ಮಾನಿತ ಪಟ್ಟಿ ನಾನು ಆಯ್ಕೆ ಮಾಡಿಲ್ಲ ಎಂದು ಎಸ್ ನಾರಾಯಣ್ ಘೋಷಿಸಿದ್ದಾರೆ.

    ಜಗ್ಗೇಶ್ ಸ್ವಯಂ ಬಹಿಷ್ಕಾರ

    ಸಿನಿಮಾ 100 ಕಾರ್ಯಕ್ರಮಕ್ಕೆ ಸರಿಯಾಗಿ ಆಹ್ವಾನ ಸಿಗದ ಕಾರಣ ಬೇಸರಗೊಂಡು ಟ್ವೀಟ್ ಮಾಡಿದ್ದ ಜಗ್ಗೇಶ್ ಅವರು ಬುಧವಾರ ಕೂಡಾ ಅದೇ ಮಾತುಗಳನ್ನು ಟಿವಿ 9 ಕನ್ನಡ ವಾಹಿನಿ ಜತೆ ಆಡಿದರು.

    ನಮ್ಮ ತಾಯಾಣೆ ಹೇಳುತ್ತಿದ್ದೇನೆ ಇನ್ಮುಂದೆ ಯಾವುದೇ ಸಿನಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ವಯಂ ಬಹಿಷ್ಕಾರ ಹಾಕಿಕೊಂಡಿದ್ದಾರೆ.

    ರವಿಚಂದ್ರನ್ ಗೆ ಸನ್ಮಾನ

    ರವಿಚಂದ್ರನ್ ಗೆ ಸನ್ಮಾನ

    ಚೆನ್ನೈನಲ್ಲಿಮುಕ್ತಾಯಗೊಂಡ ಚಿತ್ರರಂಗದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರವಿಚಂದ್ರನ್ ಗೆ ಸನ್ಮಾನ

    English summary
    100 Years of Indian Cinema Celebration Ceremony ended with utter Chaos as senior artist Leelavathi faced humiliation. Leevalathi and KFCC former president actor Jayamala were not felicitated at the mega event in Chennai. Everybody is pointing finger towards S. Narayan, who had taken the leadership for Kannada film industry.
    Wednesday, September 25, 2013, 19:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X