twitter
    For Quick Alerts
    ALLOW NOTIFICATIONS  
    For Daily Alerts

    ಅಮೀರ್ ಖಾನ್ ಮಿ. ಪರ್ಫೆಕ್ಟ್ ಆಲ್ಲ, ಕಾಪಿ ಕ್ಯಾಟ್?

    By * ಜೇಮ್ಸ್ ಮಾರ್ಟಿನ್
    |

    ಬಾಲಿವುಡ್ ನ ಪ್ರತಿಭಾವಂತ ನಟ ಅಮೀರ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ PK(peekay) ಫಸ್ಟ್ ಲುಕ್ ಪೋಸ್ಟರ್ ಇನ್ನೂ ಗದ್ದಲ, ಚರ್ಚೆ, ಟೀಕೆ, ಹಾಸ್ಯದ ಮೊನಚಿನ ಪ್ರತಿಕ್ರಿಯೆಯಿಂದ ಹೊರ ಬಂದಿಲ್ಲ. ಇದರಿಂದ ಚಿತ್ರಕ್ಕೆ ಬಿಟ್ಟಿ ಪ್ರಚಾರವೇನೋ ಸಿಗಬಹುದು. ಅದರೆ, ಚಿತ್ರದ ಪೋಸ್ಟರ್ ಅಸಲಿಯಲ್ಲ, ಅಮೀರ್ ಖಾನ್ ರಂಥ ಮಿ. ಪರ್ಫೆಕ್ಷನಿಸ್ಟ್ ಯಾಕೋ ಮಿ.ಕಾಪಿ ಕ್ಯಾಟ್ ಆಗುತ್ತಿದ್ದಾರೆ ಎಂಬ ಗುಲ್ಲೆದ್ದಿದೆ. ಇದು ನಿಜ ಎಂದು ನಂಬಲು ಅವರ ಅಭಿಮಾನಿಗಳು ತಯಾರಿಲ್ಲ.

    ರಾಜಕುಮಾರ್ ಹಿರಾನಿ ನಿರ್ದೇಶನದ ಚಿತ್ರ ಪಿಕೆ ಪೋಸ್ಟರ್ ನಲ್ಲಿ ಅಮೀರ್ ಖಾನ್ ಸಂಪೂರ್ಣ ಬೆತ್ತಲಾಗಿ ಆಯಕಟ್ಟಿನ ಜಾಗದಲ್ಲಿ ಹಳೆಕಾಲದ ರೇಡಿಯೋ ಇಟ್ಟುಕೊಂಡು ಮಾನ ಮುಚ್ಚಿಕೊಂಡಿದ್ದರು. ಆದರೆ, ಪೋಸ್ಟರ್ ನಲ್ಲಿ ಉಳಿದ ಮಾನ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹರಾಜಾಗಿತ್ತು. ಆದರೆ, ಕೆಲವರು ಇಂಥ ಬೋಲ್ಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲು ಅಮೀರ್ ರಿಂದ ಮಾತ್ರ ಸಾಧ್ಯ. ಇದು ಸೃಜನಶೀಲತೆಗೆ ಸಾಕ್ಷಿ ಎಂದು ಹಾಡಿಹೊಗಳಿದ್ದರು.[ಟ್ವಿಟ್ಟರ್ ನಲ್ಲಿ ಅಮೀರ್ ಖಾನ್ ಮಾನ ಹರಾಜು]

    ಆದರೆ, ಅಮೀರ್ ಅವರ ಬೆತ್ತಲೆ ಚಿತ್ರದ ರಹಸ್ಯ ಬಹಿರಂಗವಾಗಿದ್ದು, ಪಿಕೆ ಚಿತ್ರದ ಪೋಸ್ಟರ್ ಅಸಲಿಯಲ್ಲ 1973ರ ಪೋರ್ಚುಗೀಸ್ ಸಂಗೀತಗಾರ ಕಾಣಿಸಿಕೊಂಡಿದ್ದ ಪೋಸ್ಟರ್ ನ ಹಿಂದಿ ವರ್ಷನ್ ಅಷ್ಟೇ ಎಂದು ಮುಂಬೈನ ಗಲ್ಲಿ ಗಲ್ಲಿಯಲ್ಲಿ ಸುದ್ದಿ ಹಬ್ಬಿದೆ.

    ಚಿತ್ರದ ಪೋಸ್ಟರ್ ಗೂ ನಾಯಕ ಅಮೀರ್ ಗೂ ಏನು ಸಂಬಂಧ ಎಂದು ಪ್ರಶ್ನಿಸಬಹುದು. ಆದರೆ, ಚಿತ್ರದ ಎಲ್ಲಾ ವಿಭಾಗಗಳ ಬಗ್ಗೆ ಕಾಳಜಿವಹಿಸುವ ಅಮೀರ್ ಅವರು ಈ ರೀತಿ ಪ್ರಮಾದವನ್ನು ಗಮನಿಸುತ್ತಿಲ್ಲವೇ? ಅಥವಾ ಇದು ಜಾಣ ಕುರುಡೇ? ಸಾಲು ಸಾಲು ಅನೇಕ ಚಿತ್ರಗಳಲ್ಲಿ ಈ ರೀತಿ ಕದ್ದ ಪ್ರಚಾರ ಮಾಲು ಬಳಕೆ ಏಕೆ? ಉತ್ತರ ನಮಗೂ ಗೊತ್ತಿಲ್ಲ. ಸದ್ಯಕ್ಕೆ ಅಮೀರ್ ಅವರ ಪೋಸ್ಟರ್ ಕಾಪಿಗಳನ್ನು ಮುಂದೆ ನೋಡಿ....

    ಟ್ವಿಟ್ಟರ್ ನಲ್ಲಿ ಅಮೀರ್ ಖಾನ್ ಮಾನ ಹರಾಜು

    ಟ್ವಿಟ್ಟರ್ ನಲ್ಲಿ ಅಮೀರ್ ಖಾನ್ ಮಾನ ಹರಾಜು

    ರಾಜಕುಮಾರ್ ಹಿರಾನಿ ನಿರ್ದೇಶನದ ಚಿತ್ರ ಪಿಕೆ ಪೋಸ್ಟರ್ ನಲ್ಲಿ ಅಮೀರ್ ಖಾನ್ ಸಂಪೂರ್ಣ ಬೆತ್ತಲಾಗಿ ಆಯಕಟ್ಟಿನ ಜಾಗದಲ್ಲಿ ಹಳೆಕಾಲದ ರೇಡಿಯೋ ಇಟ್ಟುಕೊಂಡು ಮಾನ ಮುಚ್ಚಿಕೊಂಡಿದ್ದರು. ಆದರೆ, ಪೋಸ್ಟರ್ ನಲ್ಲಿ ಉಳಿದ ಮಾನ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹರಾಜಾಗಿತ್ತು. [ಹೆಚ್ಚಿನ ಓದಿಗೆ ಕ್ಲಿಕ್ಕಿಸಿ]

    ಪಿಕೆ ಚಿತ್ರದ ಪೋಸ್ಟರ್ ಕೂಡಾ ಕಾಪಿ

    ಪಿಕೆ ಚಿತ್ರದ ಪೋಸ್ಟರ್ ಕೂಡಾ ಕಾಪಿ

    1973ರ ಪೋರ್ಚುಗೀಸ್ ಸಂಗೀತಗಾರ ಕ್ವಿಮ್ ಬಾರೆರೊಸ್(Quim Barreiros) ಅವರ ಪೋಸ್ಟರ್ ಹಾಗೂ ಪಿಕೆ ಪೋಸ್ಟರ್ ಗೆ ಸಾಮ್ಯತೆಯಿದೆ. ಮಾನ ಮುಚ್ಚಲು ಬಳಸಿರುವ ಸಾಧನಗಳು ಬದಲಾಗಿವೆ ಅಷ್ಟೇ.

    ಧೂಮ್ 3 ಚಿತ್ರದ ಪೋಸ್ಟರ್ ನಕಲು

    ಧೂಮ್ 3 ಚಿತ್ರದ ಪೋಸ್ಟರ್ ನಕಲು

    ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಹಾಲಿವುಡ್ ಚಿತ್ರ ದಿ ಡಾರ್ಕ್ ನೈಟ್ ನ ಬ್ಯಾಟ್ ಮನ್ ನಿಂತ ಮಾದರಿಯಲ್ಲೇ ಅಮೀರ್ ಖಾನ್ ಅವರು ಧೂಮ್ 3 ಚಿತ್ರದಲ್ಲಿ ನಿಂತು ಪೋಸ್ ನೀಡಿದ್ದರು.

    ರಿಮೇಕ್ ಚಿತ್ರದ ಪೋಸ್ಟರ್ ಕೂಡಾ ಕಾಪಿ

    ರಿಮೇಕ್ ಚಿತ್ರದ ಪೋಸ್ಟರ್ ಕೂಡಾ ಕಾಪಿ

    ತಮಿಳಿನಿಂದ ರಿಮೇಕ್ ಆದ ಘಜನಿ ಚಿತ್ರದ ಕಥೆಯಷ್ಟೇ ಅಲ್ಲ, ಚಿತ್ರದ ಪೋಸ್ಟರ್ ಕೂಡಾ 200೦ರಲ್ಲಿ ತೆರೆ ಕಂಡ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ ಮೆಮೆಂಟೋದ ನಕಲಾಗಿತ್ತು. ಇದು ಕೂಡಾ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಚಿತ್ರ ಎಂಬುದು ಗಮನಾರ್ಹ.

    ತಲಾಶ್ ಚಿತ್ರದ ಪೋಸ್ಟರ್ ನಕಲು

    ತಲಾಶ್ ಚಿತ್ರದ ಪೋಸ್ಟರ್ ನಕಲು

    2011ರಲ್ಲಿ ತೆರೆ ಕಂಡ ಟಾಮ್ ಕ್ರೂಸ್ ಅಭಿನಯದ ಮಿಷನ್ ಇಂಪಾಸಿಬಲ್ ಗೋಸ್ಟ್ ಪ್ರೋಟಕಲ್ ಚಿತ್ರದ ಪೋಸ್ಟರ್ ಹಾಗೂ ಅಮೀರ್ ಖಾನ್ ಅವರ ತಲಾಶ್ ಚಿತ್ರದ ಪೋಸ್ಟರ್ ನಲ್ಲಿ ಭಾರಿ ಸಾಮ್ಯತೆ ಇದೆ.

    English summary
    Recently released poster of Aamir Khan's PK created a lot of buzz as for the first time Mr Perfectionist Aamir Khan posed nude in the poster.Well, is Aamir Khan losing his own creativity and the Mr Perfectionist of Bollywood turning the new copy-cat of Bollywood?
    Tuesday, August 5, 2014, 17:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X