ಐಶ್ವರ್ಯ ರೈ ತನ್ನ ಮಾಡೆಲಿಂಗ್ ದಿನಗಳಿಂದಲೂ ತನ್ನ ಅಂಗ ಸೌಷ್ಟವ ಕಾಯ್ದುಕೊಂಡಿದ್ದಲ್ಲದೆ, ಉತ್ತಮ ಫೋಟೋಜೆನಿಕ್ ರೂಪದರ್ಶಿಯಾಗಿ ಬೆಳದವರು. ಸೌಂದರ್ಯಕ್ಕೆ ಅನ್ವರ್ಥ ನಾಮದಂತಿರುವ ಐಶ್ವರ್ಯಾಗೆ ಬೆಕ್ಕಿನ ಕಣ್ಣುಗಳು ಇನ್ನಷ್ಟು ಸೊಗಸು ಹೆಚ್ಚಿಸಿದೆ.
2010ರಲ್ಲಿ ಗುಜಾರಿಶ್ ಚಿತ್ರದ ನಂತರ ಆಕೆ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ತಾಯ್ತನದ ಸುಖ ಅನುಭವಿಸಲು ಅವಶ್ಯವಾದ ಬ್ರೇಕ್ ಪಡೆದಿದ್ದಾಳೆ. ಆದರೆ, ಐಶ್ ಸ್ಟಾರ್ ಗಿರಿ ಕಮ್ಮಿಯಾಗಿಲ್ಲ. ಜ್ಯುವೆಲ್ಲರಿ ಕಂಪನಿಗಳಿಗೆ ಈಗಲೂ ಐಶ್ ಫೇವರೀಟ್. ಖ್ಯಾತ ಛಾಯಾಗ್ರಹಕರಿಗೆ ಐಶ್ ಫೋಟೋ ತೆಗೆಯುವುದೇ ಆನಂದ.
ಐಶ್ವರ್ಯಾ ರೈಗೆ ಕಪ್ಪು ಬಣ್ಣದ ದಿರಿಸು ಇಷ್ಟವೋ ಅಥವಾ ಆಕೆಗೆ ಅದು ಅಷ್ಟು ಚೆನ್ನಾಗಿ ಒಪ್ಪುತ್ತದೆ ಎಂದು ಎಲ್ಲರೂ ಇಷ್ಟಪಡುತ್ತಾರೋ ಗೊತ್ತಿಲ್ಲ. ಆದರೆ, ಐಶ್ ಕಪ್ಪು ದಿರಿಸಿನಲ್ಲಿ ಕಾಣುವಷ್ಟು ಸುಂದರವಾಗಿ ಮತ್ತೊಂದು ಬಣ್ಣದ ವಸ್ತ್ರದಲ್ಲಿ ಕಾಣಿಸುವುದಿಲ್ಲ ಎಂದು ಖ್ಯಾತ ವಸ್ತ್ರ ವಿನ್ಯಾಸಗಾರರು ಹೇಳುತ್ತಾರೆ.
ಕಪ್ಪು ಬಣ್ಣದ ದಿರಿಸಿನಲ್ಲಿ ಕರ್ನಾಟಕದ ಕರಾವಳಿಯ ಶ್ವೇತ ಸುಂದರಿ ಐಶ್ವರ್ಯಾ ರೈ ಮಿಂಚಿದ ಚಿತ್ರಗಳನ್ನು ಒಟ್ಟು ಮಾಡಿ ಆಕೆ ಅಭಿಮಾನಿಗಳಿಗೆ ತಲುಪಿಸುವ ಕೆಲಸ ನಮ್ಮದು.. ಚಿತ್ರ ಸರಣಿಯಲ್ಲಿ ಐಶ್ ಸುಂದರ ಚಿತ್ರಗಳ ಜೊತೆ ಕೆಲ ಸಂಗತಿಗಳು ನಿಮ್ಮ ಮುಂದೆ...













































