•  

'ಡರ್ಟಿ ಪಿಕ್ಚರ್'ಗಿಂತ ಸಖತ್ ಡರ್ಟಿ ಸಿನಿಮಾದಲ್ಲಿ ಪೂನಂ

ಬುಧವಾರ, ಫೆಬ್ರವರಿ 1, 2012, 13:37 [IST]
poonam-pandey-to-debut-bollywood-with-dirty-picture
ತನ್ನ ಬೆತ್ತಲೆ ಪ್ರದರ್ಶನಗಳ ಮೂಲಕ ಈಗಾಗಲೇ ಇಂಚಿಂಚೂ ಪರಿಚಯವಾಗಿರುವ ಪೂನಂ ಪಾಂಡೆ ಎಂಬ ಮಾಡೆಲ್ ಬೆಡಗಿ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾಳೆ ಎಂಬ ಮಾತು ಮೊನ್ನೆ ತೇಲಿಬಂದಿತ್ತು. ಆದರೆ ಅದರಲ್ಲಿ ಆಕೆಯ ಪಾತ್ರ ಎಂತಹುದು ಎಂಬುದು ತಿಳಿದುಬಂದಿರಲಿಲ್ಲ. ಆದರೆ ಇದೀಗ ಬಂದ ಸುದ್ದಿಯಂತೆ ವಿದ್ಯಾ ಬಾಲನ್ ಮಾದರಿಯಲ್ಲೇ ಪೂನಂ ಪಾಂಡೆ 'ಡರ್ಟಿ ಪಿಕ್ಚರ್' ಮಾಡಲಿದ್ದಾಳೆ.

ಅಂದರೆ 'ಅಂದಕಾಲತ್ತಿಲ್ ನಟಿ ಸಿಲ್ಕ್ ಸ್ಮಿತಾ ಅವರ ಜೀವನ್ನಾವಧರಿಸಿ ವಿದ್ಯಾ ಬಾಲನ್ 'ಡರ್ಟಿ ಪಿಕ್ಚರ್' ಮಾಡಿದ್ದಾಯ್ತು. ಅದೇ ಮಾದರಿಯಲ್ಲೇ ಆದರೆ ನನ್ನದೇ ಜೀವನಗಾಥೆಯನ್ನಾಧರಿಸಿ 'ಡರ್ಟಿ ಪಿಕ್ಚರ್' ಗಿಂತ ಸಖತ್ ಡರ್ಟಿ ಪಿಕ್ಚರ್ ಮಾಡುವೆ' ಎಂದು ಪೂನಂ ಪಾಂಡೆ ಘೋಷಿಸಿದ್ದಾಳೆ.

'ಈ ಹಿಂದೆ ನನಗೆ ಬಾಲಿವುಡ್ ನಿಂದ ಅಫರ್ ಗಳು ಬಂದಿದ್ದವು. ಐಟಂ ಸಾಂಗುಗಳಿಗೂ ಬೇಡಿಕೆಯಿತ್ತು. ಆದರೆ ಅದನ್ನೆಲ್ಲ ಜಾಣತನದಿಂದ ನಿರಾಕರಿಸಿದ್ದೆ. ಇದೀಗ ಪೂರ್ಣ ಪ್ರಮಾಣದಲ್ಲಿ ನಾನೇ ಕಾಣಿಸಿಕೊಳ್ಳುವ ಸಿನಿಮಾದಲ್ಲಿ ಅಭಿನಯಿಸುವ ಭಾಗ್ಯ ನನ್ನದಾಗಿದೆ' ಎಂದು ಪೂನಂ ಉಲಿದಿದ್ದಾಳೆ.

'ನನ್ನೀ ಮೊದಲ ಸಿನಿಮಾದಲ್ಲಿ ನನ್ನದು ಸಂಪೂರ್ಣ ಗ್ಲಾಮರಸ್ ಪಾತ್ರ. ಈ ಪಾತ್ರ ನನ್ನ ನಿಜಜೀವನಕ್ಕೆ ಹತ್ತಿರವಾಗಿದೆ. ಖಂಡಿತ, ಇದು ವಿದ್ಯಾ ಬಾಲನ್ ಅವರ 'ಡರ್ಟಿ ಪಿಕ್ಚರ್'ಗಿಂತ ಸಖತ್ ಡರ್ಟಿಯಾಗಿ ಇರುತ್ತದೆ' ಎಂದು ತನ್ನ ಅಭಿಮಾನಿಗಳಿಗೆ ಹಾಟ್ ಹಾಟ್ ಭರವಸೆ ನೀಡಿದ್ದಾಳೆ.

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article