•  

ಕಮಲ್ ಹಾಸನ್ ಜೊತೆ ಕತ್ರಿನಾ ಕೈಫ್ ರೊಮ್ಯಾನ್ಸ್

ಬುಧವಾರ, ಫೆಬ್ರವರಿ 1, 2012, 16:46 [IST]
ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ದಕ್ಷಿಣದ ಕಡೆಗೆ ಕಣ್ಣು ನೆಟ್ಟಿದ್ದಾರೆ. ಸಕಲ ಕಲಾ ವಲ್ಲಭ ಕಮಲ್ ಹಾಸನ್ ಜೊತೆ ರೊಮ್ಯನ್ಸ್ ಮಾಡಲು ಕತ್ರಿನಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಮಲ್ ಮುಖ್ಯಭೂಮಿಕೆಯಲ್ಲಿರುವ 'ತಲೈವನ್ ಇರುಕಿರನ್' ಎಂಬ ಚಿತ್ರದಲ್ಲಿ ಕತ್ರಿನಾ ಆಭಿನಯಿಸಲಿದ್ದಾರೆ.

ಆಸ್ಕರ್ ರವಿಚಂದ್ರನ್ ಈ ಚಿತ್ರದ ನಿರ್ಮಾಪಕ. ಕತ್ರಿನಾ ಕಾಲ್ ಶೀಟ್‌ಗಾಗಿ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೆ ರಜನಿಕಾಂತ್ ಮುಖ್ಯಭೂಮಿಕೆಯಲ್ಲಿರುವ 'ಕೊಚ್ಚಡಯಾನ್' ಚಿತ್ರಕ್ಕೂ ಕತ್ರಿನಾರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಸದ್ಯಕ್ಕೆ ಕತ್ರಿನಾ ಹಿಂದಿಯ 'ಏಕ್ ಥಾ ಟೈಗರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೆಲವು ಸಾಹಸ ಸನ್ನಿವೇಶಗಳಲ್ಲಿ ಕಾಣಿಸಲಿದ್ದಾರೆ. ಇದಕ್ಕಾಗಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಇನ್ನು ಶಾರುಖ್ ಖಾನ್, ಅಮೀರ್ ಖಾನ್ ಚಿತ್ರಗಳು ಕತ್ರಿನಾ ಕೈಯಲ್ಲಿವೆ. (ಏಜೆನ್ಸೀಸ್)
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article