•  

ಸಲ್ಲು ಜೊತೆ ಮಲ್ಲು ಬೆಡಗಿ ಅಸಿನ್ ರಹಸ್ಯ ಮದುವೆ

ಗುರುವಾರ, ಡಿಸೆಂಬರ್ 23, 2010, 14:30 [IST]
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮತ್ತು ಮಲ್ಲು ಬೆಡಗಿ ಅಸಿನ್ ಮದುವೆ ಸದ್ದಿಲ್ಲದೆ ನಡೆದು ಹೋಗಿದೆ. ಗುಟ್ಟಾಗಿ ನಡೆದಿರುವ ಸಲ್ಲು ಮತ್ತು ಅಸಿನ್ ಮದುವೆಗೆ ಕೇವಲ ಬೆರಳೆಣಿಯಷ್ಟು ಗೆಳೆಯರು ಸಾಕ್ಷಿಯಾಗಿದ್ದರು ಎಂಬ ಸುದ್ದಿ ಬಾಲಿವುಡ್‌ನಲ್ಲಿ ಗುಲ್ಲೆಬ್ಬಿಸಿದೆ! ಶಾಕ್ ಆಗದೆ ಮುಂದೆ ಓದಿ...

ಅಸಿನ್ ಅವರ ತಂದೆ ತಾಯಿಗೂ ತಿಳಿಯದಂತೆ ಈ ಮದುವೆ ನಡೆದುಹೋಗಿದೆ. ಮದುವೆ ನಿಲ್ಲಿಸಲು ಅಸಿನ್ ತಂದೆ ತಾಯಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲವಂತೆ. ಹಾಗಂತೆ ಹೀಗಂತೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಸಖತ್ ಸುದ್ದಿಯಾಗಿದೆ. ಆದರೆ ಈ ಸುದ್ದಿಯನ್ನು ಸಲ್ಲು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
  Read:  In English 
"ಸಲ್ಮಾನ್ ಮತ್ತು ನಾನು ಕಡೆಗೂ ಮದುವೆಯಾಗಿದ್ದೇವೆ. ನಮ್ಮಿಬ್ಬರಿಗೂ ಇದು ಮೊದಲ ಮದುವೆ" ಹಾಗೆಂದು ಚಿತ್ರವೊಂದರ ಬಗ್ಗೆ ಅಸಿನ್ ಹೇಳಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಅನೀಸ್ ಬಜ್ಮೀಸ್ ಅವರ ಮುಂದಿನ ಚಿತ್ರಕ್ಕಾಗಿ ಮದುವೆ ಸನ್ನಿವೇಶವನ್ನು ಚಿತ್ರೀಕರಿಸಲಾಗಿತ್ತಂತೆ.

ಈ ಸಿನಿಮೀಯ ಮದುವೆಯನ್ನೇ ನಿಜವಾದ ಮದುವೆ ಎಂದುಕೊಂಡು ಯಾರೋ ಕಾಗೆ ಹಾರಿಸಿದ್ದರು. ಈ ಮದುವೆ ಸುದ್ದಿಯನ್ನು ಅಸಿನ್ ಆಗಲಿ ಸಲ್ಲು ಆಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಇದೆಲ್ಲಾ ಇದ್ದದ್ದೇ ಬಿಡಿ ಎಂದಿದ್ದಾರೆ. "ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಮದುವೆಯಾಗಿದ್ದೇನೆ. ಆದರೆ ಇದು ನನ್ನ ಮೊದಲ ಪಂಜಾಬಿ ಶೈಲಿ ಮದುವೆ" ಎಂದಿದ್ದಾರೆ ಅಸಿನ್.

ಈ ಮದುವೆಯಿಂದ ಹೊಸ ಹುಮ್ಮಸ್ಸಿನಲ್ಲಿರುವ ಇಬ್ಬರೂ ಮುಂದೆ ಪಂಜಾಬಿ ಶೈಲಿಯಲ್ಲೇ ಮದುವೆಯಾಗುವುದಾಗಿ ಹೇಳಿದ್ದಾರೆ. ನನ್ನ ಮದುವೆ ಬಗೆಗಿನ ಜೋಕನ್ನು ನಾನೂ ಎಂಜಾಯ್ ಮಾಡಿದ್ದೇನೆ. "ಮದುವೆ ಗಂಡಿನ ವೇಷಭೂಷಣವನ್ನು ತೆಗೆದಿಟ್ಟು ಒಂದು ವಾರ ಆಗಿದೆ ಇನ್ನೂ ಆ ಗುಂಗಿನಿಂದ ಹೊರಬಂದಿಲ್ಲ" ಎಂದಿದ್ದಾರೆ ಸಲ್ಲು. [ಮದುವೆ]
User Comments
ನಾನ್ನ ಇಚ್ಚರಿಕೆ 26 Dec 2010 10:21 pm
ದತ್ಸ್ ಕಾಣ್ನಾದ ದಲಿ ಇತ್ತೀಚಿಕೆ ಕನ್ನಾಡದ ತಪ್ಪೂ ಜಸ್ತಿಯಗಿದೆ.
ಗಣೇಶ್ ಮಂಡ್ಯ 26 Dec 2010 09:54 pm
ನಮ್ಮ ಕನ್ನಡವನ್ನೇ ಹಾಳು ಮಾಡ್ತಾ ಇದ್ದಾರೆ ಈ ಮೂರ್ಖರು
[ ಅಭಿಪ್ರಾಯ ಬರೆಯಿರಿ ]
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article