ಬಾಲಿವುಡ್ ನಟಿ ಐಶ್ವರ್ಯ ರೈ ಕೇವಲ ನಟನೆಗಷ್ಟೆ ಸೀಮಿತವಾಗದೆ ಆಗಾಗ ಸಮಾಜಸೇವೆಗೂ ಸೈ ಅನ್ನುತ್ತಿರುತ್ತಾರೆ. ಈ ಹಿಂದೆ ಐಶು ನಿಧನಾ ನಂತರ ನೇತ್ರಗಳನ್ನು ದಾನ ಮಾಡುವುದಾಗಿ ಸಹಿ ಹಾಕಿದ್ದರು. ಈಗ ಇಬ್ಬರು ಕ್ಯಾನ್ಸರ್ ಪೀಡಿತ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಹಲವಾರು ಸಾಮಾಜಿಕ ಸಂಸ್ಥೆಗಳಲ್ಲಿ ಒಂದಾದ ಕ್ಯಾನ್ಸರ್ ರೋಗಿಗಳ ಸಹಾಯ ಸಂಸ್ಥೆ ಸಹ ಒಂದು.
ವಿಶ್ವ ಸುಂದರಿ ಕಿರೀಟ ಧರಿಸಿದಂದಿನಿಂದ ಐಶ್ವರ್ಯ ರೈ ಈ ಸಂಸ್ಥೆಯೊಂದಿಗೆ ಕೈಜೋಡಿಸಿಕೊಂಡೇ ಬಂದಿದ್ದಾರೆ. ಇತ್ತೀಚೆಗೆ ಈ ಸಂಸ್ಥೆಗೆ ನಟ ಅಕ್ಷಯ್ ಕುಮಾರ್ ಜೊತೆ ಐಶ್ವರ್ಯ ರೈ ಭೇಟಿ ನೀಡಿದ್ದರು. ಇಬ್ಬರು ಕ್ಯಾನ್ಸರ್ ಪೀಡಿತ ಮಕ್ಕಳನ್ನು ಖರ್ಚು ವೆಚ್ಚವನ್ನು ಭರಿಸುವುದಾಗಿ ಐಶು ಈ ಸಂದರ್ಭದಲ್ಲಿ ಪ್ರಕಟಿಸಿದರು.
ನಟ ಅಕ್ಷಯ್ ಕುಮಾರ್ ತಾನೇನು ಕಮ್ಮಿ ಎಂದು ಕ್ಯಾನ್ಸರ್ ಪೀಡಿತ ಮಕ್ಕಳ ಜೊತೆ ಕುಣಿದು ಕುಪ್ಪಳಿಸಿದರು. ಮಕ್ಕಳ ಮುಖದಲ್ಲಿ ಅಕ್ಷಯ್ ಹೊಸ ಉತ್ಸಾಹವನ್ನು ಮೂಡಿಸಿ ಸಂತಸಪಟ್ಟರು. "ನಮ್ಮ ತಂದೆಯವರು ಸಹ ಈ ರೋಗದಿಂದ ಬಳಲುತ್ತಿದ್ದರು. ಈ ಮಕ್ಕಳ ನೋವು ಏನು ಎಂದು ನನಗೆ ಚೆನ್ನಾಗಿ ಗೊತ್ತು" ಎಂದರು.
ಅಕ್ಷಯ್ ತಂದೆ ಕೊನೆಯ ತನಕ ಕ್ಯಾನ್ಸರ್ ನೊಂದಿಗೆ ಹೋರಾಡಿದ ಘಟನೆಗಳನ್ನು ನೆನಪಿಸಿಕೊಂಡರು. ಮಕ್ಕಳ ಚಿಕಿತ್ಸೆಗೆ ದೈಹಿಕ ಹಾಗೂ ಆರ್ಥಿಕವಾಗಿ ನೆರವಾಗಲು ಇಬ್ಬರು ತಾರೆಗಳು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು. ಸಿನಿಮಾ ತಾರೆಗಳು ಎಂದರೆ ಕೇವಲ ರಂಜಿಸುವುದಷ್ಟೆ ಅಲ್ಲ ಅವರಲ್ಲೂ ಮಾನವೀಯ ಮುಖವಿರುತ್ತದೆ ಎಂಬುದನ್ನು ತೋರಿಸಿಕೊಟ್ಟರು.