Englishবাংলাગુજરાતીहिन्दीമലയാളംதமிழ்తెలుగు
 
Share This Story

ರಾಮು ವಿರುದ್ಧ ಕೇಸು ಗುಜರಾಯಿಸಿದ ಇಶಾ ಡಿಯೋಲ್

Posted by:
Published: Monday, August 30, 2010, 16:14 [IST]

ಹೆಸರಾಂತ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಬಾಲಿವುಡ್ ತಾರೆ ಇಶಾ ಡಿಯೋಲ್ ಕೇಸು ಗುಜರಾಯಿಸಿದ್ದಾರೆ. 'ಡಾರ್ಲಿಂಗ್' ಚಿತ್ರದ ಬಾಕಿ ಹಣವನ್ನು ರಾಮು ತಮಗೆ ಇನ್ನೂ ಕೊಟ್ಟಿಲ್ಲ ಎಂಬ ಆರೋಪದ ಮೇರೆಗೆ ಇಶಾ ಕೋರ್ಟ್ ಮೆಟ್ಟಿಲೇರಿದ್ದಾರೆ.

ಈಗಾಗಲೆ ಸಾಕಷ್ಟು ಬಾರಿ ರಾಮು ಅವರಿಗೆ ಬಾಕಿ ಹಣದ ಬಗ್ಗೆ ನೆನಪಿಸಿದ್ದೇನೆ. ಕಡೆಗೂ ಪ್ರಯೋಜನವಾಗದ ಕಾರಣ ಕೊನೆ ಪ್ರಯತ್ನವಾಗಿ ಕೋರ್ಟ್ ನ ಬಾಗಿಲನ್ನು ತಟ್ಟಿದ್ದೇನೆ ಎಂದು ಇಶಾ ಪ್ರತಿಕ್ರಿಯಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರು ಇಶಾ ಅವರಿಗೆ ಒಟ್ಟು ರು.13 ಲಕ್ಷ ಕೊಡಬೇಕಾಗಿದೆಯಂತೆ.

ಒಂದು ವರ್ಷದ ಹಿಂದೆ ಸಿನಿಮಾ ಮತ್ತು ಟಿವಿ ಕಲಾವಿದರ ಸಂಘಕ್ಕೆ ರಾಮು ವಿರುದ್ಧ ಇಶಾ ದೂರು ಕೊಟ್ಟಿದ್ದರು. ಆದರೆ ರಾಮು ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಆಕೆ ಪಾಶ್ಚಿಮಾತ್ಯ ಭಾರತೀಯ ಸಿನಿಮಾ ಕಲಾವಿದರ ಒಕ್ಕೂಟದ ಮೊರೆಹೋಗಿದ್ದರು. ಅಲ್ಲೂ ಬೇಳೆ ಬೇಯದ ಕಾರಣ ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನುತ್ತವೆ ಮೂಲಗಳು.

ಈ ತಕರಾರಿಗೆ ಸಂಬಂಧಿಸಿದಂತೆ ರಾಮು ಹೇಳುವುದೇನೆಂದರೆ, ಅದು ಎಂದೋ ಮುಗಿದ ಅಧ್ಯಾಯ. ಈ ಕೇಸು ಬಗೆಹರಿದಿದೆ ಎಂದಿದ್ದಾರೆ. ಆದರೆ ಇಶಾ ಮಾತ್ರ ತಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಹೋರಾಡುತ್ತಲೇ ಇದ್ದಾರೆ ಎಂದು ಇಶಾ ಗೆಳತಿ ಹೇಳುತ್ತಾರೆ. ಚಿತ್ರದನಿರ್ಮಾಪಕ ಭೂಷಣ್ ಕುಮಾರ್ ಹೇಳುವುದೇನೆಂದರೆ, ರಾಮುಗೆ ಸಾಕಷ್ಟು ಹಣ ಕೊಟ್ಟಿದ್ದೇನೆ. ಈ ಎಲ್ಲಾ ಸಮಸ್ಯೆಗೆ ಅವರೆ ಅಂತ್ಯ ಹಾಡಬೇಕಾಗಿದೆ. ಇದರಲ್ಲಿ ನನ್ನದೇನು ಕೈವಾಡ ಇಲ್ಲ ಎಂದಿದ್ದಾರೆ.

ಎಲ್ಲ ಪ್ರಮುಖ ಸುದ್ದಿಗಳ ಮೇಲೆ ಒನ್ಇಂಡಿಯಾ ನೋಟ. ನಿರಂತರ ಸುದ್ದಿ ಪಡೆಯಲು Facebook ಮತ್ತು Twitter ಮೇಲೆ ಇರಲಿ ಕಣ್ಣು.
Topics: ರಾಮ್ ಗೋಪಾಲ್ ವರ್ಮಾ, ಬಾಲಿವುಡ್, ಅಪರಾಧ, ಇಶಾ ಡಿಯೋಲ್, ಕೇಸು, ಡಾರ್ಲಿಂಗ್, esha deol, ram gopal varma, darling
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada