•  

ಡ್ರೈವ್ ಮಾಡೋವಾಗ ಫೋನ್ ಮಾಡ್ತೀರಾ?

ಬುಧವಾರ, ನವೆಂಬರ್ 11, 2009, 14:13 [IST]
Talking and driving to be made punishable
ವಾಹನ ಚಲಿಸುವಾಗ ಕಿವಿಯಲ್ಲಿ ಸೆಲ್ ಫೋನ್ ಸಿಕ್ಕಿಸಿಕೊಂಡು ಮಾತನಾಡುವವರಿಗೆ ಕಾದಿದೆ ಗ್ರಹಚಾರ. ಭಾರತದಲ್ಲಿ ಸೆಲ್ ಫೋನ್ ಕ್ರಾಂತಿಯಾದ ನಂತರದ ದಿನಗಳಲ್ಲಿ ಫೋನಿನಲ್ಲಿ ಮಾತನಾಡುತ್ತಾ ಸ್ಟೀಯರಿಂಗ್ ತಿರುಗಿಸುವವರ ಸಂಖ್ಯೆ ರಾಷ್ಟ್ರಮಟ್ಟದಲ್ಲಿ ಹೆಚ್ಚಾಗಿದೆ. ಈ ಪ್ರವೃತ್ತಿಗೆ ಕಾನೂನು ಕಡಿವಾಣ ಕಡ್ಡಾಯವಾಗಿ ಹಾಕದಿದ್ದರೆ ಮತ್ತು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸದಿದ್ದರೆ ಗತ್ಯಂತರವಿಲ್ಲ ಎಂಬುದು ಸರಕಾರಕ್ಕೆ [ಕರ್ನಾಟಕ ಸರಕಾರಕ್ಕಲ್ಲ] ಮನವರಿಕೆಯಾಗಿದೆ.

ಚಾಲಕರಲ್ಲಿ ಹೆಚ್ಚಾಗಿರುವ ಈ ಹವ್ಯಾಸದಿಂದ ಆಗುವ ಅನಾಹುತಗಳು ಒಂದೆರಡಲ್ಲ. ಎಲ್ಲೋ ಗಮನ, ಯಾರದೋ ಜತೆಗೆ ಮಾತು, ಮುಂದೆ ಢಂ ಎಂದು ಅಪಘಾತ. ಸಾವು ನೋವು. ಅಪರಾಧಿಗಳ ಜತೆಗೆ ನಿರಪರಾಧಿಗಳೂ ಬಲಿ. ಇದು ನಮ್ಮ ಪ್ರಜೆಗಳು ರಸ್ತೆಯಲ್ಲಿ ನಿತ್ಯ ಎಸಗುತ್ತಿರುವ ರಾಷ್ಟ್ರೀಯ ಅಪರಾಧವಲ್ಲದೆ ಮತ್ತೇನು?

ಒಂದು ಸರಕಾರಿ ಮೂಲದ ಪ್ರಕಾರ ಫೋನಿನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವವರನ್ನು ಹಿಡಿದು ದಂಡ ಹಾಕಿ, ಜೈಲು ಶಿಕ್ಷೆ ವಿಧಿಸಲು ಕಾನೂನು ರಕ್ಷಕರು, ಅಂದರೆ ಪೊಲೀಸರಿಗೆ ಜಾಸ್ತಿ ಅಧಿಕಾರ ಕೊಡುವತ್ತ ಚಿಂತನೆ ನಡೆದಿದೆ. ತಪ್ಪಿತಸ್ಥರು 2,000 ರೂಪಾಯಿ ದಂಡ ಕಟ್ಟಬೇಕು ಅಥವಾ ಆರು ತಿಂಗಳು ಜೈಲಿನಲ್ಲಿ ರಾಗಿ ಬೀಸಬೇಕು ಎಂಬ ಕಾನೂನು ತರಲು ಸಾರಿಗೆ ಮಂತ್ರಾಲಯ ಮುಂದಾಗಿದೆ. ಫೋನಿನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿ ಅಪಘಾತ ಸಂಭವಿಸಿದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಆರು ತಿಂಗಳ ಅವಧಿಗೆ ರದ್ದು ಮಾಡುವ ಆಲೋಚನೆಗಳೂ ಇಲಾಖೆಯ ಮುಂದಿದೆ.
  Read:  In English 
ಇನ್ನೊಂದು ಗಾಬರಿಯಾಗುವ ಅಂಶವೂ ಉಂಟು. ಫೋನಿಲ್ಲದಿದ್ದರೆ ಏನಂತೆ, ಹೆಡ್ ಸೆಟ್ ಅಥವಾ ಹ್ಯಾಂಡ್ಸ್ ಫ್ರೀ ಹಾಕಿಕೊಂಡು ಡ್ರೈವ್ ಮಾಡ್ತೀನಿ ಎಂದು ನುಣುಚಿಕೊಳ್ಳುವವರಿಗೂ ಲಗಾಮು ಹಾಕಲಾಗಿದೆ. ಅದೂ ತಪ್ಪೇ. ಇಷ್ಟೇ ಅಲ್ಲ, ನೀವು ಎಸ್ಎಂಎಸ್ ಕಳಿಸುವುದಕ್ಕೆ, ಓದುವುದಕ್ಕೆ ನಿಷೇಧ ಹಾಕಲಾಗುತ್ತದೆ. ಒಟ್ಟಿನಲ್ಲಿ ನೀವು ವಾಹನ ಚಲಿಸುವಾಗ ಫೋನ್ ಬಳಸಕೂಡದು, ಬಳಸಕೂಡದು, ಬಳಸಕೂಡದು. ಅಷ್ಟೆ. ದೂಸರಾ ಮಾತಿಲ್ಲ.

ಹಾಗಂತ ಇಂಥ ಕಾನೂನು ಈಗ ಇಲ್ಲ ಎಂದೇನಲ್ಲ. ಕೆಲವು ರಾಜ್ಯಗಳಲ್ಲಿ ಈ ಕಾನೂನು ಚಾಲ್ತಿಯಲ್ಲಿದೆ. ಆದರೆ ಎಲ್ಲ ರಾಜ್ಯಗಳಲ್ಲೂ, ಕೇಂದ್ರಾಡಳಿತ ಪ್ರದೇಶಗಳಲ್ಲೂ ಈ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕೆನ್ನುವುದು ಕೇಂದ್ರ ಸಾರಿಗೆ ಸಚಿವಾಲಯದ ಪಾಲಿಸಿ ಮ್ಯಾಟರ್.

ನಮ್ಮ ಕರ್ನಾಟಕದಲ್ಲೂ ಕೆಲವು ಕಾನೂನುಗಳಿವೆ. 200 ರೂಪಾಯಿ ದಂಡ ಕಟ್ಟಿ ರಶೀತಿ ಪಡೆಯಬೇಕು ಅಥವಾ ಕಾಪಣ್ಣನಿಗೆ ನೂರು ರೂಪಾಯಿ ಭಕ್ಷೀಸು ಕೊಟ್ಟು ಕೈಬಿಸಿ ಮಾಡಿ ಪುನಃ ಫೋನ್ ಎತ್ತಿಕೊಂಡು ಗರ್ಲ್ ಫ್ರೆಂಡ್ ಜತೆ ಲಲ್ಲೆ ಹೊಡೆಯುತ್ತಾ ಡ್ರೈವ್ ಮಾಡಿಕೊಂಡು ಹಾಯಾಗಿ ಹೋಗಬಹುದು!

User Comments
ಹೇಮಂತ್ ಕುಮಾರ್ ಜತ್ನೆ ಹಾಸನ 17 Nov 2009 02:37 pm
ಸರ್ ರಸೀಧಿ ಬೇಡ ೨೦೦ ತಗೊಳ್ಳಿ ಸಾಕು.
ಶಿವಶಂಕರ 12 Nov 2009 10:30 am
ವಾಹನ ಚಲಿಸುವಾಗ ಹಾಕುವ ಫ್ಹೈನಿನ ಹಣ ಜಾಸ್ತಿಯಾದರೆ ಪೊಲೀಸರಿಗೆ ಸಿಕ್ಕುವ ಹಣವು ಜಾಸ್ಥಿಯಾಗುತ್ತೆ
[ ಅಭಿಪ್ರಾಯ ಬರೆಯಿರಿ ]
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article