ಭಾರತವನ್ನು ಸಕ್ಕರೆ ಕಾಯಿಲೆಯ ರಾಜಧಾನಿ ಎಂದು ಕರೆಯುವುದುಂಟು. ಅದು ಕೇವಲ ಕಾಯಿಲೆಯಲ್ಲ, ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವ ಒಂದು ಸಾಂಕ್ರಾಮಿಕ ರೋಗ ಎಂದು ವಿಶ್ವ ಮಧುಮೇಹ ಕಾಂಗ್ರೆಸ್ ಸೋಮವಾರ (19/10/2009) ಪ್ರತಿಪಾದಿಸಿದೆ. ಸಕ್ಕರೆ ಕಾಯಿಲೆ ಅಥವಾ ಮಧುಮೇಹದ ಬಗೆಗೆ ಮಾಂಟ್ರಿಯಲ್ ನಲ್ಲಿ ನಡೆಯುತ್ತಿರುವ 20ನೇ ವಿಶ್ವ ಮಧುಮೇಹ ಸಮ್ಮೇಳನದಿಂದ ಡಯಾಬಿಟಿಸ್ ಕುರಿತ ಅನೇಕ ಗಾಬರಿಗೀಡುಮಾಡುವ ಅಂಕಿಅಂಶಗಳು ಹೊರಬೀಳಲಾರಂಭಿಸಿದೆ.
ಅಂತಾರಾಷ್ಟ್ರೀಯ ಮಧುಮೇಹ ಸಂಸ್ಥೆ (International Diabetic Federation (IDF) ಪ್ರಕಟಿಸಿರುವ ಅಂಕಿಅಂಶದ ಪ್ರಕಾರ, ಈ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಭಾರತದಲ್ಲಿ ಅತ್ಯಧಿಕ. ನಮ್ಮ ದೇಶದಲ್ಲಿ ಐದು ಕೋಟಿ ಎಂಟು ಲಕ್ಷ ಮಧುಮೇಹ ರೋಗಿಗಳಿದ್ದಾರೆ. ಆನಂತರದ ಸ್ಥಾನದಲ್ಲಿ ಚೀನಾ ದೇಶ ಇದ್ದು ಅಲ್ಲಿನ ಅಂಕಿಅಂಶ 4 ಕೋಟಿ ಎರಡು ಲಕ್ಷ ದಾಟಿದೆ. ಅಮೆರಿಕಾದಲ್ಲಿ ಮಧುಮೇಹಿಗಳ ಸಂಖ್ಯೆ 26.8 ಮಿಲಿಯನ್.
ಮುಂದಿನ ವರ್ಷ ಅಂದರೆ 2010ರವೇಳೆಗೆ ಭಾರತದಲ್ಲಿ ರೋಗಿಗಳ ಸಂಖ್ಯೆ 58.7 ಮಿಲಿಯನ್ ಗೆ ನೆಗೆಯುತ್ತದೆ. ಭಾರತದಲ್ಲಿರುವ ಪ್ರೌಢರ ಪೈಕಿ ಶೇಕಡಾ 7ರಷ್ಟು ಮಂದಿ ಸಕ್ಕರೆ ಕಾಯಿಲೆಗೆ ಈಡಾಗಿದ್ದಾರೆ ಎಂದು ಈ ಅಂಕಿಅಂಶ ಸಾಬೀತುಪಡಿಸುತ್ತದೆ. 2030ರ ವೇಳೆಗೆ ರೋಗಿಗಳ ಒಟ್ಟಾರೆ ಸಂಖ್ಯೆ ಪ್ರತಿಶತ 8.4ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ.
ಸಮೀಕ್ಷೆ, ಅಧ್ಯಯನಗಳ ಮೂಲಕ ಕಂಡುಕೊಂಡ ಸಾಕ್ಷ್ಯಾಧಾರಗಳು ತಿಳಿಸುವುದೇನಂದರೆ, ನಗರ ಪ್ರದೇಶಗಳಲ್ಲಿ ಮಧುಮೇಹದ ಪ್ರಮಾಣ ಹೆಚ್ಚು. ಗ್ರಾಮೀಣ ಪ್ರದೇಶದಲ್ಲೂ ಮಧುಮೇಹ ಸಾಕಷ್ಟಿದೆ. ಆದರೆ, ಆರ್ಥಿಕ ಪ್ರಗತಿ ಹೆಚ್ಚಾದಂತೆ ಸಕ್ಕರೆ ಕಾಯಿಲೆಯ ಪ್ರಸಂಗಗಳು ಹೆಚ್ಚಾಗುವ ಅಂಶ ವ್ಯಕ್ತವಾಗಿದೆ. ಈ ಬಗ್ಗೆ ಇಂಟರ್ ನ್ಯಾಷನಲ್ ಡಯಾಬಿಟಿಕ್ ಫೆಡರೇಶನ್ ಭಾರತಕ್ಕೆ ತಿಳಿಯಹೇಳಿದ್ದು, ರೋಗ ನಿಯಂತ್ರಣ ಮಾರ್ಗಗಳನ್ನು, ಪರಿಹಾರೋಪಾಯಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಕಿವಿಮಾತು ಹೇಳಿದೆ.
ಮಧುಮೇಹದಿಂದ ದೇಶದ ಆರ್ಥಿಕ ಸ್ಥಿತಿಯ ಮೇಲೆ ಉಂಟಾಗುವ ಸೈಡ್ ಎಫೆಕ್ಟುಗಳು ಬೇಕಾದಷ್ಟಿವೆ. ಸಕ್ಕರೆ ರೋಗಿ ಕಡಿಮೆ ಶ್ರಮ ಪಡುತ್ತಾನೆ. ಆದ್ದರಿಂದಾಗಿ ಉತ್ಪಾದನೆ ಕುಂಠಿತವಾಗುತ್ತದೆ. ಅದರ ಜತೆಗೆ, ರೋಗ ನಿಯಂತ್ರಣಕ್ಕಾಗಿಯೇ ಭಾರತ ತನ್ನ ಬೊಕ್ಕಸದಿಂದ ಪ್ರತಿವರ್ಷ $2.8 ಬಿಲಿಯನ್ ಹಣ ಖರ್ಚು ಮಾಡಬೇಕಾಗುತ್ತದೆ. ಸೈಡ್ ಎಫೆಕ್ಟ್ ಕುಟುಂಬದ ಮೇಲೂ ಆಗುತ್ತದೆ. ಕುಟುಂಬದ ಆದಾಯದ ಒಂದು ಪಾಲು ರೋಗ ನಿರ್ವಹಣೆ ಮತ್ತು ರೋಗಿಯ ಆರೈಕೆಗೇ ಖರ್ಚಾಗುತ್ತದೆ.
ಜಗತ್ತಿನಲ್ಲಿ ಒಟ್ಟು 285 ಮಿಲಿಯನ್ ಮಧುಮೇಹ ರೋಗಿಗಳಿದ್ದಾರೆಂದು ಅಂದಾಜು ಮಾಡಲಾಗಿದೆ. ಅಂದರೆ, ಜಗತ್ತಿನ ಜನಸಂಖ್ಯೆಯಲ್ಲಿ ಪ್ರತಿ 100ರಲ್ಲಿ 7 ಮಂದಿಗೆ ರೋಗ ಅಂಟಿಕೊಂಡಿದೆ. ಮಧುಮೇಹ, ಹೃದಯದ ಕಾಯಿಲೆ, ಅರ್ಬುದ ಮತ್ತು ಕಿತ್ತುತಿನ್ನುವ ಉಸಿರಾಟದ ತೊಂದರೆಯಿಂದಾಗಿ ಶೇಕಡಾ 60 ಮಂದಿ ಸಾವನ್ನಪ್ಪುತ್ತಿದ್ದಾರೆ. ಇಡೀ ಪ್ರಪಂಚವನ್ನು ಲೆಕ್ಕಕ್ಕೆ ತೆಗೆದುಕೊಂಡಾಗ , ಮಧುಮೇಹ ನಿಯಂತ್ರಣ ಕ್ರಮಗಳು ಮತ್ತು ಮಧುಮೇಹದಿಂದ ಉಂಟಾಗುವ ಇತರೆ ಉಪಾಧಿಗಳಿಂದ ರಕ್ಷಿಸಿಕೊಳ್ಳುವುದಕ್ಕೆ ವೆಚ್ಚವಾಗುವ ಹಣದ ಪ್ರಮಾಣ 376 ಬಿಲಿಯನ್ ಡಾಲರುಗಳಾಗುತ್ತದೆ.
ಮಾಂಟ್ರಿಯಲ್ ನಲ್ಲಿ ಮಧುಮೇಹ ಕಾಂಗ್ರೆಸ್ಸ್ ಅಧಿವೇಶನ ಈಗ ಸಾಗುತ್ತಿದೆ. ಜಗತ್ತಿನ ಎಲ್ಲದೇಶಗಳಿಂದ 12,000 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 400 ಮಂದಿ ಮಧುಮೇಹ ತಜ್ಞರು ಕಾಯಿಲೆಯ ನಾನಾ ಮುಖಗಳ ಬಗೆಗೆ ಭಾಷಣ, ಚರ್ಚೆ ಮತ್ತು ಪ್ರಬಂಧಗಳನ್ನು ಮಂಡಿಸುತ್ತಿದ್ದಾರೆ.
ಕರ್ನಾಟಕದ ಮಧುಮೇಹ ಚಿಕಿತ್ಸೆ ಆಸ್ಪತ್ರೆಗಳ ಪಟ್ಟಿ
&13;
ಅಂತಾರಾಷ್ಟ್ರೀಯ ಮಧುಮೇಹ ಸಂಸ್ಥೆ (International Diabetic Federation (IDF) ಪ್ರಕಟಿಸಿರುವ ಅಂಕಿಅಂಶದ ಪ್ರಕಾರ, ಈ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಭಾರತದಲ್ಲಿ ಅತ್ಯಧಿಕ. ನಮ್ಮ ದೇಶದಲ್ಲಿ ಐದು ಕೋಟಿ ಎಂಟು ಲಕ್ಷ ಮಧುಮೇಹ ರೋಗಿಗಳಿದ್ದಾರೆ. ಆನಂತರದ ಸ್ಥಾನದಲ್ಲಿ ಚೀನಾ ದೇಶ ಇದ್ದು ಅಲ್ಲಿನ ಅಂಕಿಅಂಶ 4 ಕೋಟಿ ಎರಡು ಲಕ್ಷ ದಾಟಿದೆ. ಅಮೆರಿಕಾದಲ್ಲಿ ಮಧುಮೇಹಿಗಳ ಸಂಖ್ಯೆ 26.8 ಮಿಲಿಯನ್.
ಮುಂದಿನ ವರ್ಷ ಅಂದರೆ 2010ರವೇಳೆಗೆ ಭಾರತದಲ್ಲಿ ರೋಗಿಗಳ ಸಂಖ್ಯೆ 58.7 ಮಿಲಿಯನ್ ಗೆ ನೆಗೆಯುತ್ತದೆ. ಭಾರತದಲ್ಲಿರುವ ಪ್ರೌಢರ ಪೈಕಿ ಶೇಕಡಾ 7ರಷ್ಟು ಮಂದಿ ಸಕ್ಕರೆ ಕಾಯಿಲೆಗೆ ಈಡಾಗಿದ್ದಾರೆ ಎಂದು ಈ ಅಂಕಿಅಂಶ ಸಾಬೀತುಪಡಿಸುತ್ತದೆ. 2030ರ ವೇಳೆಗೆ ರೋಗಿಗಳ ಒಟ್ಟಾರೆ ಸಂಖ್ಯೆ ಪ್ರತಿಶತ 8.4ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ.
ಸಮೀಕ್ಷೆ, ಅಧ್ಯಯನಗಳ ಮೂಲಕ ಕಂಡುಕೊಂಡ ಸಾಕ್ಷ್ಯಾಧಾರಗಳು ತಿಳಿಸುವುದೇನಂದರೆ, ನಗರ ಪ್ರದೇಶಗಳಲ್ಲಿ ಮಧುಮೇಹದ ಪ್ರಮಾಣ ಹೆಚ್ಚು. ಗ್ರಾಮೀಣ ಪ್ರದೇಶದಲ್ಲೂ ಮಧುಮೇಹ ಸಾಕಷ್ಟಿದೆ. ಆದರೆ, ಆರ್ಥಿಕ ಪ್ರಗತಿ ಹೆಚ್ಚಾದಂತೆ ಸಕ್ಕರೆ ಕಾಯಿಲೆಯ ಪ್ರಸಂಗಗಳು ಹೆಚ್ಚಾಗುವ ಅಂಶ ವ್ಯಕ್ತವಾಗಿದೆ. ಈ ಬಗ್ಗೆ ಇಂಟರ್ ನ್ಯಾಷನಲ್ ಡಯಾಬಿಟಿಕ್ ಫೆಡರೇಶನ್ ಭಾರತಕ್ಕೆ ತಿಳಿಯಹೇಳಿದ್ದು, ರೋಗ ನಿಯಂತ್ರಣ ಮಾರ್ಗಗಳನ್ನು, ಪರಿಹಾರೋಪಾಯಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಕಿವಿಮಾತು ಹೇಳಿದೆ.
ಮಧುಮೇಹದಿಂದ ದೇಶದ ಆರ್ಥಿಕ ಸ್ಥಿತಿಯ ಮೇಲೆ ಉಂಟಾಗುವ ಸೈಡ್ ಎಫೆಕ್ಟುಗಳು ಬೇಕಾದಷ್ಟಿವೆ. ಸಕ್ಕರೆ ರೋಗಿ ಕಡಿಮೆ ಶ್ರಮ ಪಡುತ್ತಾನೆ. ಆದ್ದರಿಂದಾಗಿ ಉತ್ಪಾದನೆ ಕುಂಠಿತವಾಗುತ್ತದೆ. ಅದರ ಜತೆಗೆ, ರೋಗ ನಿಯಂತ್ರಣಕ್ಕಾಗಿಯೇ ಭಾರತ ತನ್ನ ಬೊಕ್ಕಸದಿಂದ ಪ್ರತಿವರ್ಷ $2.8 ಬಿಲಿಯನ್ ಹಣ ಖರ್ಚು ಮಾಡಬೇಕಾಗುತ್ತದೆ. ಸೈಡ್ ಎಫೆಕ್ಟ್ ಕುಟುಂಬದ ಮೇಲೂ ಆಗುತ್ತದೆ. ಕುಟುಂಬದ ಆದಾಯದ ಒಂದು ಪಾಲು ರೋಗ ನಿರ್ವಹಣೆ ಮತ್ತು ರೋಗಿಯ ಆರೈಕೆಗೇ ಖರ್ಚಾಗುತ್ತದೆ.
ಜಗತ್ತಿನಲ್ಲಿ ಒಟ್ಟು 285 ಮಿಲಿಯನ್ ಮಧುಮೇಹ ರೋಗಿಗಳಿದ್ದಾರೆಂದು ಅಂದಾಜು ಮಾಡಲಾಗಿದೆ. ಅಂದರೆ, ಜಗತ್ತಿನ ಜನಸಂಖ್ಯೆಯಲ್ಲಿ ಪ್ರತಿ 100ರಲ್ಲಿ 7 ಮಂದಿಗೆ ರೋಗ ಅಂಟಿಕೊಂಡಿದೆ. ಮಧುಮೇಹ, ಹೃದಯದ ಕಾಯಿಲೆ, ಅರ್ಬುದ ಮತ್ತು ಕಿತ್ತುತಿನ್ನುವ ಉಸಿರಾಟದ ತೊಂದರೆಯಿಂದಾಗಿ ಶೇಕಡಾ 60 ಮಂದಿ ಸಾವನ್ನಪ್ಪುತ್ತಿದ್ದಾರೆ. ಇಡೀ ಪ್ರಪಂಚವನ್ನು ಲೆಕ್ಕಕ್ಕೆ ತೆಗೆದುಕೊಂಡಾಗ , ಮಧುಮೇಹ ನಿಯಂತ್ರಣ ಕ್ರಮಗಳು ಮತ್ತು ಮಧುಮೇಹದಿಂದ ಉಂಟಾಗುವ ಇತರೆ ಉಪಾಧಿಗಳಿಂದ ರಕ್ಷಿಸಿಕೊಳ್ಳುವುದಕ್ಕೆ ವೆಚ್ಚವಾಗುವ ಹಣದ ಪ್ರಮಾಣ 376 ಬಿಲಿಯನ್ ಡಾಲರುಗಳಾಗುತ್ತದೆ.
Read: In English
ಮಾಂಟ್ರಿಯಲ್ ಮಧುಮೇಹ ಕಾಂಗ್ರೆಸ್ಸ್ ಉದ್ದೇಶಿಸಿ ಮಾತನಾಡಿದವರು ನಿರ್ಗಮಿಸುತ್ತಿರುವ ಐಡಿಎಫ್ ನ ಅಧ್ಯಕ್ಷ ಮಾರ್ಟಿನ್ ಸಿಲಿಂಕ್. ಅವರ ಪ್ರಕಾರ 2007ರಿಂದ 2010ರ ಅವಧಿಯಲ್ಲಿ ಪ್ರತಿವರ್ಷ 7 ಮಿಲಿಯನ್ ಹೊಸ ಸಕ್ಕರೆ ಕಾಯಿಲೆ ರೋಗಿಗಳು ಕಾಣಿಸಿಕೊಳ್ಳುತ್ತಾರೆ. ಫೆಡರೇಷನ್ನಿನ ನೂತನ ಅಧ್ಯಕ್ಷ ಜೀನ್ ಕ್ಲಾಡ್ ಮಬನ್ಯ ಹೇಳುವುದೇನೆಂದರೆ, ಮಧುಮೇಹ ಹತೋಟಿ ಹತ್ತಿಕ್ಕಲಾರದ ಸ್ಥಿತಿ ತಲುಪುತ್ತಿದೆ. ಇದೇ ಗತಿಯಲ್ಲಿ ಸಾಗುತ್ತಿದ್ದರೆ 2030ರ ವೇಳೆಗೆ ಪ್ರಪಂಚದಲ್ಲಿ ರೋಗಿಗಳ ಸಂಖ್ಯೆ 435 ದಶಲಕ್ಷ ದಾಟಿಹೋಗುತ್ತದೆ.ಮಾಂಟ್ರಿಯಲ್ ನಲ್ಲಿ ಮಧುಮೇಹ ಕಾಂಗ್ರೆಸ್ಸ್ ಅಧಿವೇಶನ ಈಗ ಸಾಗುತ್ತಿದೆ. ಜಗತ್ತಿನ ಎಲ್ಲದೇಶಗಳಿಂದ 12,000 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 400 ಮಂದಿ ಮಧುಮೇಹ ತಜ್ಞರು ಕಾಯಿಲೆಯ ನಾನಾ ಮುಖಗಳ ಬಗೆಗೆ ಭಾಷಣ, ಚರ್ಚೆ ಮತ್ತು ಪ್ರಬಂಧಗಳನ್ನು ಮಂಡಿಸುತ್ತಿದ್ದಾರೆ.