ಲಕ್ನೋ, ಆ. 12 : ಪವಿತ್ರ ತುಳಸಿ ಮತ್ತು ಚಿಕಿತ್ಸಕ ಗುಣಗಳ ಗಣಿ ತುಳಸಿ. ಹಲವುದಳ ಶ್ರೀತುಳಸಿ ಸೇವನೆ ಹಂದಿಜ್ವರ ನಿವಾರಣೆಗೆ ರಾಮಬಾಣ ಎನ್ನುತ್ತದೆ ಆಯುರ್ವೇದ. ಎಚ್1ಎನ್1 ರೋಗಾಣುಗಳು ತಾಗದಂತೆ ತುಳಸಿ ನಮ್ಮನ್ನು ರಕ್ಷಿಸುವುದಷ್ಟೆ ಅಲ್ಲ, ರೋಗವನ್ನು ಶೀಘ್ರವಾಗಿ ಹೋಗಲಾಡಿಸಿ ಗುಣ ಮುಖಮಾಡುತ್ತದೆ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ.
ಫ್ಲು ಬಾಧೆಯನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಇತ್ತೀಚೆಗೆ ಕಂಡುಕೊಂಡಿದ್ದಾರೆ. ಪ್ರಪಂಚದ ನಾನಾ ಕಡೆ ಆಯುರ್ವೇದ ಅಭ್ಯಾಸ ಮಾಡುವ ವೈದ್ಯರು ಇದೇ ಅಭಿಪ್ರಾಯ ತಳೆದಿದ್ದಾರೆ. ತುಳಸಿ ದೇಹದಲ್ಲಿನ ರೋಗನಿರೋಧಕ ಗುಣವನ್ನು ವೃದ್ಧಿಸುವುದಲ್ಲದೆ ಮೈಮೇಲೆ ಎರಗುವ ವೈರಾಣುಗಳ ವಿರುದ್ಧ ಯಶಸ್ವಿ ಸಮರ ಸಾರುವ ಶಕ್ತಿ ಹೊಂದಿರುತ್ತದೆ. ಜಪಾನಿನಲ್ಲಿ ಹಬ್ಬಿದ್ದ ಎನ್ ಸಿಫಾಲಿಟಿಸ್ ರೋಗವನ್ನು ತಡೆಯಲು ತುಳಸಿಯನ್ನು ಬಳಸಲಾಗಿತ್ತು. ತುಳಸಿಯ ಈ ಚಿಕಿತ್ಸಕ ಗುಣವನ್ನು ಹಂದಿಜ್ವರ ನಿವಾರಣೆಗೂ ಬಳಸಬಹುದು ಎಂದು ಗಿಡಮೂಲಿಕೆಗಳ ಖ್ಯಾತ ವೈದ್ಯ ಡಾ. ಯು.ಕೆ. ತಿವಾರಿ ಹೇಳುತ್ತಾರೆ.
ತುಳಸಿ ಎಲೆಗಳು ಹಂದಿಜ್ವರ ವೈರಾಣು ರೋಗ ಬಾರದಂತೆ ರಕ್ಷಿಸಬಲ್ಲದು ಮತ್ತು ರೋಗಪೀಡೀತರು ಶೀಘ್ರ ಗುಣಮುಖರಾಗುವಂತೆ ನೆರವಾಗಬಲ್ಲುದು ಎಂದು ತಿವಾರಿ ಹೇಳಿದ್ದಾರೆ. ಹಂದಿಜ್ವರ ತಡೆಯುವುದರಲ್ಲಿ ತುಳಸಿಯ ಪಾತ್ರ ಹಿರಿಯದಾದದ್ದು ಎಂದು ಹೇಳುತ್ತಾರೆ ಇನ್ನೊಬ್ಬ ವೈದ್ಯ ಡಾ. ಭೂಪೇಶ್ ಪಟೇಲ್. ಜಾಮ್ ನಗರದಲ್ಲಿರುವ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲದಲ್ಲಿ ಭೂಪೇಶ್ ಅವರು ಉಪನ್ಯಾಸಕಾರಿದ್ದಾರೆ.
ತುಳಸಿಯಲ್ಲಿ ಮೂರು ವಿಧ : ಕೃಷ್ಣ ತುಳಸಿ(Ocimum sanctum), ವನ ತುಳಸಿ(Ocimum gratissimum), ಕಟುಕಿ ತುಳಸಿ(Picrorriza kurroa). ಈ ಮೂರೂ ಬಗೆಯ ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಉಂಟು. ರೋಗವನ್ನು ಹಿಮ್ಮೆಟ್ಟಿಸುವ ಶಕ್ತಿಯೂ ಉಂಟು. ತುಳಸಿ ಸೇವನೆಯಿಂದ ಯಾವುದೇ ಬಗೆಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಇತರ ಔಷಧಗಳನ್ನು ಸೇವಿಸುವಂಥ ಸಮಯದಲ್ಲೂ ತುಳಸಿಯನ್ನು ಧಾರಾಳವಾಗಿ ತಿನ್ನಬಹುದು ಎಂದು ಮೇಲೆ ಪ್ರಸ್ತಾಪಿಸಿದ ಪ್ರತಿಯೊಬ್ಬ ವೈದ್ಯರೂ ಹೇಳಿದ್ದಾರೆ.
(ಒನ್ ಇಂಡಿಯಾ ವಾರ್ತೆ)
&13;
ಫ್ಲು ಬಾಧೆಯನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಇತ್ತೀಚೆಗೆ ಕಂಡುಕೊಂಡಿದ್ದಾರೆ. ಪ್ರಪಂಚದ ನಾನಾ ಕಡೆ ಆಯುರ್ವೇದ ಅಭ್ಯಾಸ ಮಾಡುವ ವೈದ್ಯರು ಇದೇ ಅಭಿಪ್ರಾಯ ತಳೆದಿದ್ದಾರೆ. ತುಳಸಿ ದೇಹದಲ್ಲಿನ ರೋಗನಿರೋಧಕ ಗುಣವನ್ನು ವೃದ್ಧಿಸುವುದಲ್ಲದೆ ಮೈಮೇಲೆ ಎರಗುವ ವೈರಾಣುಗಳ ವಿರುದ್ಧ ಯಶಸ್ವಿ ಸಮರ ಸಾರುವ ಶಕ್ತಿ ಹೊಂದಿರುತ್ತದೆ. ಜಪಾನಿನಲ್ಲಿ ಹಬ್ಬಿದ್ದ ಎನ್ ಸಿಫಾಲಿಟಿಸ್ ರೋಗವನ್ನು ತಡೆಯಲು ತುಳಸಿಯನ್ನು ಬಳಸಲಾಗಿತ್ತು. ತುಳಸಿಯ ಈ ಚಿಕಿತ್ಸಕ ಗುಣವನ್ನು ಹಂದಿಜ್ವರ ನಿವಾರಣೆಗೂ ಬಳಸಬಹುದು ಎಂದು ಗಿಡಮೂಲಿಕೆಗಳ ಖ್ಯಾತ ವೈದ್ಯ ಡಾ. ಯು.ಕೆ. ತಿವಾರಿ ಹೇಳುತ್ತಾರೆ.
ತುಳಸಿ ಎಲೆಗಳು ಹಂದಿಜ್ವರ ವೈರಾಣು ರೋಗ ಬಾರದಂತೆ ರಕ್ಷಿಸಬಲ್ಲದು ಮತ್ತು ರೋಗಪೀಡೀತರು ಶೀಘ್ರ ಗುಣಮುಖರಾಗುವಂತೆ ನೆರವಾಗಬಲ್ಲುದು ಎಂದು ತಿವಾರಿ ಹೇಳಿದ್ದಾರೆ. ಹಂದಿಜ್ವರ ತಡೆಯುವುದರಲ್ಲಿ ತುಳಸಿಯ ಪಾತ್ರ ಹಿರಿಯದಾದದ್ದು ಎಂದು ಹೇಳುತ್ತಾರೆ ಇನ್ನೊಬ್ಬ ವೈದ್ಯ ಡಾ. ಭೂಪೇಶ್ ಪಟೇಲ್. ಜಾಮ್ ನಗರದಲ್ಲಿರುವ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲದಲ್ಲಿ ಭೂಪೇಶ್ ಅವರು ಉಪನ್ಯಾಸಕಾರಿದ್ದಾರೆ.
Read: In English
ತುಳಸಿಗೆ ಸ್ವೈನ್ ಫ್ಲು ಹಿಮ್ಮೆಟ್ಟಿಸುವ ಶಕ್ತಿ ಇದೆ. ಆದ್ದರಿಂದ ನೀವು ಪ್ರತಿದಿನ 20ರಿಂದ 25ರಷ್ಟು ತಾಜಾ ತುಳಸಿ ಎಲೆಗಳನ್ನು ಖಾಲಿಹೊಟ್ಟೆ ಇದ್ದಾಗ ಸೇವಿಸಬೇಕು. ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿಸುತ್ತದೆ ಹಾಗೂ ಹಂದಿಜ್ವರ ಹತ್ತಿರ ಸುಳಿಯದಂತೆ ಕಾಪಾಡುತ್ತದೆ ಎಂದು ಭೂಪೇಶ್ ಅಭಿಪ್ರಾಯಪಟ್ಟಿದ್ದಾರೆ. ಲಕ್ನೋದಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನಲ್ಲಿ ವೃತ್ತಿಪರರಾಗಿ ಕೆಲಸಮಾಡಿದ್ದ ಡಾ. ನರೇಂದ್ರ ಸಿಂಗ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಂದಿಜ್ವರಕ್ಕೆ ತುತ್ತಾಗಿರುವ ರೋಗಿಗಳು ತುಳಸಿಯನ್ನು ಯಾವರೀತಿ ಬಳಸಬೇಕು? ರೋಗದ ತೀವ್ರತೆ ಮತ್ತು ರೋಗಿಯ ಸ್ಥಿತಿ ತುಳಸಿ ಸೇವನೆಯ ಪ್ರಮಾಣವನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ವೈದ್ಯರು.ತುಳಸಿಯಲ್ಲಿ ಮೂರು ವಿಧ : ಕೃಷ್ಣ ತುಳಸಿ(Ocimum sanctum), ವನ ತುಳಸಿ(Ocimum gratissimum), ಕಟುಕಿ ತುಳಸಿ(Picrorriza kurroa). ಈ ಮೂರೂ ಬಗೆಯ ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಉಂಟು. ರೋಗವನ್ನು ಹಿಮ್ಮೆಟ್ಟಿಸುವ ಶಕ್ತಿಯೂ ಉಂಟು. ತುಳಸಿ ಸೇವನೆಯಿಂದ ಯಾವುದೇ ಬಗೆಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಇತರ ಔಷಧಗಳನ್ನು ಸೇವಿಸುವಂಥ ಸಮಯದಲ್ಲೂ ತುಳಸಿಯನ್ನು ಧಾರಾಳವಾಗಿ ತಿನ್ನಬಹುದು ಎಂದು ಮೇಲೆ ಪ್ರಸ್ತಾಪಿಸಿದ ಪ್ರತಿಯೊಬ್ಬ ವೈದ್ಯರೂ ಹೇಳಿದ್ದಾರೆ.
(ಒನ್ ಇಂಡಿಯಾ ವಾರ್ತೆ)
&13;