ಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ!
* ದಟ್ಸ್ ಕನ್ನಡ ನ್ಯೂಸ್ ಡೆಸ್ಕ್
ಕ್ಯಾನ್ಸರ್, ಏಡ್ಸ್ ಮೊದಲಾದ ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ ಪ್ರಬಲವಾದ ಔಷಧಗಳಿಂದ ಚಿಕಿತ್ಸೆ ನೀಡಲಾಗುತ್ತದೆ. ದೇಹದಲ್ಲಿ ಔಷಧದ ಪ್ರಮಾಣ ಸಮತೋಲನದಲ್ಲಿರಬೇಕು.
ಇಲ್ಲವಾದಲ್ಲಿ ಈ ಔಷಧಗಳಿಂದ ಆಗುವ ಉಪಯೋಗಕ್ಕಿಂತ, ಹಾನಿಯೇ ಹೆಚ್ಚು. ಆದ್ದರಿಂದ ರೋಗಿಗಳು ಚಿಕಿತ್ಸೆಯ ಅವಧಿಯಲ್ಲಿ ಕಾಲಕಾಲಕ್ಕೆ ರಕ್ತ ಪರೀಕ್ಷೆ ಮಾಡಿಸಿಕೊಂಡು ರಕ್ತದಲ್ಲಿ ಔಷಧಿಯ ಪ್ರಮಾಣವನ್ನು ಕಂಡುಕೊಳ್ಳಬೇಕಾಗುತ್ತದೆ.
ಈ ರೀತಿಯ ರಕ್ತ ಪರೀಕ್ಷೆ, ದಿನಕ್ಕೊಮೆ ಮಾಡಿಸಿಕೊಳ್ಳಬೇಕಾಗುವ ಸಂದರ್ಭಗಳೇ ಹೆಚ್ಚು. ಮುಖ್ಯವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಅಗಾಗ ರಕ್ತ ತೆಗೆಯುವುದರಿಂದ ನೋವು, ರಕ್ತ ಹಾನಿ, ನಿಶ್ಯಕ್ತಿ ಮೊದಲಾದ ತೊಂದರೆಗಳೇ ಅಲ್ಲದೆ, ರೋಗವೂ ಉಲ್ಬಣಗೊಳ್ಳಬಹುದು. ರಕ್ತ ತೆಗೆಯದೆ, ದೇಹದಲ್ಲಿನ ಔಷಧಿಯ ಪ್ರಮಾಣವನ್ನು ಕಂಡುಹಿಡಿಯುವ ತಂತ್ರಜ್ನಾನದ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ.
ಬೆಂಗಳೂರಿನವರೇ ಆದ, ಈಗ ಅಮೆರಿಕಾದ ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದಲ್ಲಿ ಫಾರ್ಮಸಿ ಪ್ರಾಧ್ಯಾಪಕರಾಗಿರುವ, ಡಾ. ನರಸಿಂಹ ಮೂರ್ತಿಯವರು. ಇಲೆಕ್ಟ್ರೊಪೊರೇಶನ್ ಅಂಡ್ ಟ್ರಾನ್ಸ್ ಕ್ಯುಟೇನಿಯುಸ್ ಸ್ಯಾಂಪ್ಲಿಂಗ್ ಎನ್ನುವ ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ.
ಈ ವಿಧಾನದ ಅನುಕೂಲತೆ ಎಂದರೆ ಸೂಜಿಯಿಂದ ಚುಚ್ಚದೆ, ರಕ್ತ ತೆಗೆಯದೆ, ಚರ್ಮದಲ್ಲಿರುವ ಔಷಧಿಯ ಅಂಶವನ್ನು ಈ ವಿಧಾನದಿಂದ ತಿಳಿದುಕೊಳ್ಳಬಹುದು ಹಾಗೂ ದೇಹದ ವಿವಿಧ ಅಂಗಾಂಗಳಲ್ಲಿನ ಔಷಧಿಯ ಅಂಶವನ್ನೂ ಕಂಡುಹಿಡಿಯಬಹುದಾಗಿದೆ.
ಈ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಸಂಶೋಧನೆಗಾಗಿ ಡಾ. ಮೂರ್ತಿಯವರಿಗೆ, ಅಮೆರಿಕದ 'ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್"ನಿಂದ 145,000 ಯು.ಸ್.ಡಿ (ಸುಮಾರು 70 ಲಕ್ಷ ರೂಪಾಯಿ) ಸಂಶೋಧನಾ ಧನ ಪ್ರದಾನವಾಗಿದೆ.
ಡಾ. ಮೂರ್ತಿಯವರು, ಬೆಂಗಳೂರಿನ ಎಮ್.ಎಸ್.ರಾಮಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದು, 2002ರಲ್ಲಿ ನ್ಯೂಯಾರ್ಕಿನ ರಾಸ್ವೆಲ್ ಪಾರ್ಕ್ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಪೋಸ್ಟ್ ಡಾಕ್ಟೊರಲ್ ಫೆಲೋಶಿಪ್ ಮುಗಿಸಿ, ಈಗ ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದಲ್ಲಿ , ಎಸ್.ಎನ್.ಮೂರ್ತಿ ರಿಸರ್ಚ್ ಗ್ರೂಪ್ ಎಂಬ ಹೆಸರಿನಲ್ಲಿ ಸಂಶೋಧನಾಲಯ ನಡೆಸುತ್ತಿದ್ದಾರೆ.
ಇವರ ಪ್ರಯೋಗಾಲಯದಲ್ಲಿ, ಭಾರತದ ಹಲವಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಡಾ.ಮೂರ್ತಿಯವರ ಸಂಶೋಧನಾಲಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ವೆಬ್‌ಸೈಟ್ ನೋಡಿ- http://www.pharmacy.olemiss.edu/pharmaceutics/murthy/