ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಾಂತ್ಯಕ್ಕೊಂದು ಕಥೆ : ಕರ್ಮ ಭಾಗ -1

By ದಿನೇಶ್ ಉಡುಪಿ, ಮೆಂಫಿಸ್
|
Google Oneindia Kannada News

ಅಪ್ಪಯ್ಯ ಚಡ್ಡಿ ಕಾಣಿಸುವೆತ್ತರಕ್ಕೆ ಕಾಲು ಎತ್ತಿ ಕುಂಡೆ ಮೇಲೆ ಹಾಕಿದ ಲತ್ತೆಗೆ ಮಂಜಾತ ಹೊರ ಬಾಗಿಲಿಂದ ಆಚೆ ಹೋಗಿ ಬಿದ್ದಿದ್ದ ಮುಂಡೆ ಮಗ್ನೆ ಇಷ್ಟ್ ಸೊಕ್ಕ್ ಬಂತ ನಿಂಗೆ ಕಂಡ ಕಂಡ ಹೆಣ್ಣು ಮಕ್ಕಳ ಮೇಲೆ ಕೈ ಹಾಕ್ತೀಯ ಇನ್ನು ನಿನ್ನ ಇಲ್ಲೆ ಇಟ್ಕಂಡ್ರೆ ಬರ್ಕತ್ ಇಲ್ಲೆ ಅಂತ ದಬಾರನೆ ಬಾಗಿಲು ಹಾಕಿ ಬಿಟ್ಟಿದ್ದ ಜಾಂಕಿ ಗಂಜಿಗೆ ಗತಿ ಇಲ್ಲದಿದ್ದರೂ ಮಂಜಾತನ ಕಣ್ಣಿಗೆ ಹೂವಿನ ಮೊಗ್ಗಿನ ತರ ಕಾಣಿಸ್ತ ಇದ್ಲು

ಅವನ ಮೇಲೆ ಎಲ್ಲಿಲ್ಲದ ಅಕ್ಕರೆ ಅವಳಿಗೆ ದಾರಿ ಬದಿಯ ಒಂದು ದಾಸವಾಳದ ಹೂವು ಕಿತ್ತು ಕೊಟ್ರು ಸಾಕು ಖುಷಿಯಿಂದ ಕೈಯನ್ನು ಮೃಉದುವಾಗಿ ಒತ್ತಿ ಬಿಡುತ್ತಿದ್ದಳು ಒಮ್ಮೊಮ್ಮೆ ತಲೆ ನೇವರಿಸಿ ಬಿಡುತ್ತಿದ್ದಳು ಅಂತಹ ಜಾಂಕಿ ಮಂಜಾತನ ಮನೆಗೇ ಬಂದು ಅವನ ಎದುರೇ ಅಪ್ಪಯ್ಯನ ಬಳಿ ಅಂವ ಇಲ್ಲ್ ಮುಟ್ಟಿದ ಅಲ್ ಮುಟ್ಟಿದ ಅಂತ ಎದೆ ಅಂಡುಗಳನ್ನು ತೋರಿಸಿದಾಗ ಅಪ್ಪಯ್ಯನ ಒದೆಗಿಂತ ಜಾಸ್ತಿ ನೋವು ಆಗಿತ್ತು

ಆದರೂ ಇದರಲ್ಲಿ ಅವಳ ತಪ್ಪೇನು ಇಲ್ಲ ಅಂತ ಅವನಿಗೆ ಅನ್ಸಿತ್ತು ಇದು ಆ ನರ್ಸಿಮನ ಮಗನ ಕಿತಾಪತಿಯೇ ಇರಬೇಕು ಅಂತ ನಂಬಿದ್ದ ಜಾಂಕಿಯ ಹಿಂದೆ ಮುಂದೆ ಓಡಾಡಿಕೊಂಡೆ ಇರ್ತಿದ್ದ ಅವನು ಸುಮಾರು ಹೊತ್ತಿನ ವರೆಗೂ ಬಿದ್ದಲ್ಲಿಂದ ಮೇಲೆ ಏಳಬೇಕು ಅನಿಸಲೆ ಇಲ್ಲ.

ನಿಧಾನಕ್ಕೆ ಎದ್ದು ತೆಂಗಿನ ಕಟ್ಟೆಯ ಬಳಿ ಕುಕ್ಕರುಗಾಲಿನಲ್ಲಿ ಕುಳಿತಿದ್ದ ಸಂಜೆಯಾಗುವವರೆಗೂ ದೂರದ ಆಸೆ ಮನೆಯ ಒಳಗೆ ಕರೆಯಬಹುದೇನೊ ಅಂತ ಯೆಸ್ ಯೆಸ್ ಎಲ್ ಸಿ ಪೈಲ್ ಆದಾಗ ಹೀಗೇ ಆಗಿತ್ತು ಸಂಜೆಯಾದಾಗ ಒಳಗೆ ಸೇರಿಸಿಕೊಂಡಿದ್ದ ಇದ್ದಕ್ಕಿದ್ದಂತೆ ಅಷ್ಟು ದೂರದಲ್ಲಿ ಜಾಂಕಿ ಪ್ರತ್ಯಕ್ಷ ಆಗಿದ್ಲು ಸಂಜೆಯ ಓಕುಳಿ ರಂಗಿನಲ್ಲಿ ಶುಭ್ರವಾಗಿ ಕಾಣಿಸ್ತ ಇದ್ಲು ಬಟ್ಟಲು ಕಣ್ಣಲ್ಲಿ ನೀರು ತುಂಬಿಕೊಂಡು ಅವನನ್ನೆ ನೋಡುತಿದ್ಲು ಬದುಕನ್ನು ತೀವ್ರವಾಗಿ ತಬ್ಬಿಕೊಂಡವರು.

ಅಂತರಾತ್ಮನಿಗೆ ಕಣ್ಣೀರಲ್ಲಿ ಉತ್ತರಿಸುವವರ ಹಾಗೆ ಎರಡು ಕ್ಷಣ ಇದ್ದು ಹೊರಟೆ ಹೋಗಿದ್ದಳು ಏನೋ ಹೇಳಬಹುದು ಅಂದುಕೊಂಡ ಅವನ ಎದೆ ಬರಿದು ಮಾಡಿ ಬಿಟ್ಟಿದ್ದಳು ಹೊಟ್ಟೆ ಹಸೀತ ಇತ್ತು ಕತ್ತಲಾಗುತ್ತ ಇತ್ತು ದುಃಖ ರೋಷವಾಗಿ ತಿರುಗತ್ತ ಇತ್ತು ನಾನು ಕೂಡ ಒಂದು ದೊಡ್ಡ ಜನ ಆಗಿ ಇವರಿಗೆ ತೊರಿಸ್ಬೇಕು ಜಾಂಕಿನ ರಕ್ಷಿಸ ಬೇಕು ಅಂತೆಲ್ಲ ತನ್ನೊಳಗೆ ಶಪಥ ಮಾಡ್ಕೊಂಡ ದೂರದಲ್ಲಿ ನರ್ಸಿಮ ಹೋಗ್ತ ಇರೋದು ಕಾಣಿಸಿ ಅವನ ಬಳಿ ಕಾಡಿ ಬೇಡಿ ೧೫೦ ರೂಪಾಯಿ ತೆಗೊಂಡು ಉಡುಪಿ ಬಸ್ ಹತ್ತಿದ್ದ

Karma Kannada short story by Dinesh Udupi

ಉಡುಪಿ ಪೇಟೆಯಲ್ಲಿ ಬಸ್ ಇಳಿದಾಗ ಜಿರಿ ಜಿರಿ ಅಂತ ಸಣ್ಣಗೆ ಮಳೆ ಹನಿಯುತ್ತ ಇತ್ತು ಆಗಲೆ ಕತ್ತಲು ಆವರಿಸಿತ್ತು ಕೆಂಪು ಹಳದಿ ಬೇಗಡೆ ಸುತ್ತಿದ ಲೈಟ್ ಗಳಿಂದ ಜಿಗ ಜಿಗ ಅನ್ನುತ್ತಿದ್ದ ಅಂಗಡಿಯೊಂದು ಕಣ್ಣು ಸೆಳೆದಿತ್ತು ಸ್ವಲ್ಪ ದೂರದಲ್ಲಿ ಹೋಗಿ ನಿಂತ ಬಾರ್ ಆಂಡ್ ರೆಸ್ಟಾರಂಟ್ ಅಂತ ಬರೆದಿತ್ತು ಯಾರೊ ನಾಲ್ಕು ಜನ ಸೊಕ್ಕೇರಿದವರಂತೆ ಹಲ್ಲಿಗೆ ಕಡ್ಡಿ ಹಾಕುತ್ತ ನಿಂತಿದ್ದರು ಅದೆಲ್ಲಿಂದಲೊ ಮಗುವೆನ್ನೆತ್ತಿಕೊಂಡು ಭಿಕ್ಷುಕ ಹುಡುಗಿಯೊಬ್ಬಳು ಅವರೆದುರು ಕೈ ಚಾಚಿ ನಿಂತಳು

ಅವರಲ್ಲೊಬ್ಬ ವಾರೆಗಣ್ಣಿಂದ ನೋಡಿ ಒಂದು ನೋಟು ಕಿಸೆಯಿಂದ ಎಳೆದು ಕೊಟ್ಟ ಮಂಜಾತನಿಗೆ ದೂರದ ಆಸೆಯೊಂದು ಬಂತು ಮೈ ಮೇಲಿದ್ದ ಅಂಗಿ ತೆಗೆದು ಸೊಂಟಕ್ಕೆ ಚಡ್ಡಿಯ ಮೇಲೆ ಸುತ್ತಿಕೊಂಡು ಅವನೆದುರು ಹೋಗಿ ಕೈಯೊಡ್ಡಿ ನಿಂತ ದರಿದ್ರಗಳು ಒಂದಕ್ಕೆ ಕೊಟ್ರೆ ಸಾಕು ಸಾಲು ಹಿಡ್ಕೊಂಡ್ ಬರ್ತಾವೆ ಹೋಗ ಅಂತ ಕಾಲೆತ್ತಿ ಬೀಸಿದ ಏಟು ತಪ್ಪಿಸಿಕೊಂಡು ಮೊದಲಿದ್ದಲ್ಲಿಗೆ ಹೋಗಿ ನಿಂತ ಒಂದು ಅರ್ಧ ಗಂಟೆ ಬಿಟ್ಟು ಬೇರೆ ದಾರಿ ಕಾಣದೆ ಆ ಹೋಟೆಲ್ ಒಳಗೆ ಹೋಗಿ ಏನಾದ್ರು ತಿನ್ನೋಕೆ ಕೊಡಿ ಅಂತ ಬೇಡತೊಡಗಿದ ನಾಲ್ಕು ಹೊಡೆದು ತಳ್ಳಿದ್ರೂ ಅಲ್ಲಿಂದ ಅಲುಗಾಡಲಿಲ್ಲ ಅವನು ಕೊನೆಗೆ ಕೆಲ್ಸ ಮಾಡ್ತೀಯ ಅಂತ ಕೇಳಿದ ಸರಿ ಅಂದ ಮಂಜಾತ ಕೆಸರಿನ ಗುಂಡಿಯಂತಿದ್ದ ಹೋಟೆಲಿನ ಹಿಂಭಾಗದಲ್ಲಿ ಪಾತ್ರೆ ತೊಳೆಯುವದರಿಂದ ಶುರುವಾಯ್ತು ಮತ್ತೊಂದು ಬದುಕು

ಆರು ತಿಂಗಳಾಗುತ್ತಿದ್ದಂತೆ ನಂಬಿಕಸ್ತನಾಗಿ ಕ್ಲೀನರ್ ಆಗಿ ಹೋಟೆಲ್ ಒಳಗೆ ಓಡಾಡುವಂತಾಗಿದ್ದ ಪ್ರತಿ ದಿವಸವೂ ಗರಿ ಗರಿಯಾಗಿ ಹೋಟೆಲ್ ಗೆ ಬಂದು ಕೊಳೆ ಕೊಳೆಯಾಗಿ ಹೋಗುತ್ತಿದ್ದ ಸಂಕಣ್ಣನ ಕೈಲಿ ಏಟು ತಿಂದಷ್ಟು ಅವನಿಗೆ ಹತ್ತಿರವಾಗತೊಡಗಿದ ದಿನಾ ಇಷ್ಟು ಬಿಲ್ ಮಾಡಿ ಹೋಗ್ತಾನಲ್ಲ ಎಲ್ಲಿಂದ ತರ್ತಾನೆ ಇಷ್ಟು ದುಡ್ಡು ಅಂತ ಬೆರಗಾಗ್ತ ಇದ್ದ ಮಂಜಾತನ ತಲೆಗೆ ಎರಡು ಕುಟ್ಟಿ ಹಾಕಿ ಸೋಡ ತರಿಸಿಕೊಳ್ಳದೆ ಇದ್ರೆ ಅವನಿಗೆ ಕುಡಿದದ್ದು ಏರುತ್ತಾನೆ ಇರಲಿಲ್ಲ.

ಒಂದು ದಿನ ಯಾರೂ ಇಲ್ಲದಾಗ ಕೇಳಿದ್ದ ನನ್ನದು ದೊಡ್ಡ ಪ್ಲಾಸ್ಟಿಕ್ ಪ್ಯಾಕ್ಟರಿ ಇದೆ ಕೆಲ್ಸಕ್ಕೆ ಬರ್ತೀಯ ಇಲ್ಲಿಗಿಂತ ಜಾಸ್ತಿ ದುಡ್ಡು ಕೊಡ್ತೇನೆ ಅಂದ ಅದೃಷ್ಟ ಖುಲಾಯಿಸಿದವರಂತೆ ಇವನು ರಾತೋ ರಾತ್ರಿ ಹೋಟೆಲಿಂದ ಓಡಿ ಹೋಗಿ ಸಂಕಣ್ಣ ಹೇಳಿದ ಜಾಗಕ್ಕೆ ಹೊಗಿ ನಿಂತ ಅಲ್ಲಿಂದ ಅವನು ಸ್ಕೂಟರಿನಲ್ಲಿ ಕರೆದುಕೊಂಡು ಹೋಗಿದ್ದ ಅವನ ಪ್ಯಾಕ್ಟರಿ ನೋಡಿ ಉತ್ಸಾಹ ಇಳಿದು ಹೊಗಿತ್ತು.

ಅದು ದೊಡ್ಡ ಗುಜರಿ ಅಂಗಡಿಯಂತೆ ಇತ್ತು ದಿನ ಒಂದು 50-60 ಜನ ಹಳೆ ಪ್ಲಾಸ್ಟಿಕ್ ತಗೊಂಡು ಬರ್ತಾರೆ ಅದನ್ನು ಒಂದಷ್ಟು ಹೆಣ್ಣು ಮಕ್ಕಳು ಸರಿಯಾದ ರೀತಿಯಲ್ಲಿ ಜೋಡಿಸಿ ಒಂದೇ ಅಳತೆಯ ಕಟ್ಟು ಮಾಡ್ತಾರೆ ಇವನು ಅದನ್ನೆಲ್ಲ ತೂಕ ಹಾಕಿ ಲೆಕ್ಕ ಬರೆದು ಲಾರಿಗೆ ಲೋಡ್ ಮಾಡಲು ರೆಡಿ ಮಾಡಿ ಇಡಬೇಕು ಆದರೂ ಹೋಟೆಲ್ ಕೆಲಸಕ್ಕಿಂತ ಅಡ್ಡಿ ಇಲ್ಲ ಅನಿಸಿತ್ತು ಅಲ್ಲೆ ಒಂದು ಶೆಡ್ ಅವನ ಮನೆಯಾಯ್ತು

ಇನ್ನು ನಾಲ್ಕು ದಿವಸ ಆಗಿತ್ತಷ್ಟೆ ಇನ್ನೇನು ಕೆಲ್ಸ ಮುಗಿಯಲು ಒಂದು ಗಂಟೆ ಇತ್ತು ಸಂಡಾಸಿಗೆ ಹೋಗ್ಬೇಕು ಅನಿಸಿ ಚಿಲಕ ಇಲ್ಲದ ಅವನ ಶೆಡ್ ಗೆ ಹೋದ್ರೆ ಇದ್ದದ್ರಲ್ಲೆ ಚೆನ್ನಾಗಿ ಕಾಣಿಸುತ್ತಿದ್ದ ಲಚ್ಚಿಯೂ ಸಂಕಣ್ಣನೂ ಒಬ್ಬರ ಮೇಲೊಬ್ಬರು ಏದುಸಿರು ಬಿಡುತ್ತಿದ್ದರು ದಿಕ್ಕೆಟ್ಟವನಂತೆ ಅದೇ ವೇಗದಲ್ಲಿ ವಾಪಸ್ ಓಡಿ ಬಂದಿದ್ದ ಇದೆಲ್ಲ ಯಾರಿಗೂ ಹೇಳ್ಬೇಡನನಗೆ ನಂಬಿಗಸ್ತನಾದ್ರೆ ಉದ್ದಾರ ಆಗ್ತೆ ನೀನು ಅಂದಿದ್ದ ಇವನು ಸುಮ್ಮನಾದ ಲಚ್ಚಿಯನ್ನು ಕಂಡಾಗಲೆಲ್ಲ ಏನೋ ಒಂಥರ ಪೊರೆ ಕಳಚಿಕೊಂಡವನಂತೆ ಉಮೇದು ಬರುತಿತ್ತು. ಮುಂದೆ ಓದಿ...

English summary
Karma a Kannada short story by Dinesh Udupi, Memphis
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X