•  

ಕಥೆ : ಅವನು ನಂಗೆ ಇಷ್ಟವಿಲ್ಲ ಕಣೇ...!

ಗುರುವಾರ, ಫೆಬ್ರವರಿ 9, 2012, 14:22 [IST]
I don't love that guy at all
`ಹೇ ಅವನು ನನಗೆ ಇಷ್ಟವಿಲ್ಲ ಕಣೇ’ ಶ್ರಾವ್ಯಳ ಮಾತಿಗೆ ರಂಜಿತ ಬೆಚ್ಚಿಕೇಳಿದಳು.

`ಹೇ ಏನಾಗಿದೆ ನಿನಗೆ. ನಿನ್ನೆ ನಿನ್ನ ಎಂಗೇಜ್‌ಮೆಂಟ್‌ ಆಯ್ತು. ಅವತ್ತೇ ಹೇಳಬೇಕಿತ್ತು.. ನೀನು ಒಪ್ಪಿದ್ದರಿಂದ ತಾನೇ ಮದುವೆ ಫಿಕ್ಸ್‌ ಮಾಡಿದ್ದು. ಯಾಕೋ ಅಷ್ಟ ಚಂದದ ಹುಡುಗ ನಿನಗೆ ಬೇಡ್ವ?’

ಅದಕ್ಕೆ ಶ್ರಾವ್ಯ `ಸುಮ್ನಿರೇ, ನಂಗೆ ಬೆಂಗಳೂರು ಹುಡುಗ ಇಷ್ಟವಿಲ್ಲ. ಈ ಊರು ಬಿಟ್ಟು ಅಲ್ಲಿಗೆ ಹೋಗಬೇಕಾ? ಅಪ್ಪ ಅಮ್ಮನ ಒತ್ತಾಯಕ್ಕೆ ಹೂಂ ಅಂದದ್ದು’

`ನಂಗೊತ್ತಿಲ್ಲ ಏನಾದರೂ ಮಾಡ್ಕೊ’ ಅಂತ ರಂಜಿತ ಎದ್ದು ಹೋಗಲು ನೋಡಿದಾಗ ಅವಳ ಕೈ ಹಿಡಿದೆಳೆದ ಶ್ರಾವ್ಯ `ಹೇ, ರಂಜಿ ಏನಾದರೂ ಐಡಿಯಾ ಹೇಳೇ’ ಅಂದಳು. ಅವಳ ಮಾತಿಗೆ `ಇದಕ್ಕೆ ಏನು ಮಾಡೋದಪ್ಪ’ ಅಂತ ತಲೆಕೆಡಿಸಿಕೊಳ್ಳುತ್ತ ಅಲ್ಲೇ ಕುಳಿತುಕೊಳ್ಳುತ್ತ ಯೋಚಿಸಿದಳು. `ಹೇ ಹೀಗೆ ಮಾಡು. ನಿನ್ನ ಅಮ್ಮನಲ್ಲಿ ಹೇಳು’

`ಬೇಡ ಅದು ಬೇಡ. ಬೇರೆ ಉಪಾಯ ಹೇಳು’ ಅದಕ್ಕೆ ರಂಜಿತ ಮತ್ತೆ ಸ್ವಲ್ಪ ಹೊತ್ತು ಯೋಚಿಸಿದಳು. `ನೀನು ನಿನ್ನ ಭಾವಿ ಪತಿಗೆ ಫೋನ್‌ ಮಾಡಿ ಹೇಳು. ಹುಡುಗರಿಗೆ ಬೇಗ ಅರ್ಥವಾಗುತ್ತದೆ’ ಅದಕ್ಕೆ ಶ್ರಾವ್ಯ "ನಂಗೆ ಭಯ ಆಗುತ್ತೆ’ ಕೊನೆಗೆ ರಂಜಿತಳ ಒತ್ತಾಯಕ್ಕೆ ಶಶಾಂಕನಿಗೆ ಫೋನ್‌ ಮಾಡಲು ಒಪ್ಪಿದಳು.

ನಿನ್ನ ನಂಬರ್‌ ಅವನಲ್ಲಿ ಇರುತ್ತೆ. ನನ್ನ ಮೊಬೈಲ್‌ನಿಂದ ಮಾಡು ಅಂತ ರಂಜಿತ ತನ್ನ ಮೊಬೈಲ್‌ ಕೊಟ್ಟಳು. `ಅವನು ರಿಸೀವ್‌ ಮಾಡ್ತಾ ಇಲ್ಲ ಕಣೇ’ ಶ್ರಾವ್ಯ ನಿರಾಸೆಯ ಧ್ವನಿಯಲ್ಲಿ ಹೇಳಿದಳು. `ಹುಂ. ಈಗ 9 ಗಂಟೆ, ಬ್ಯುಸಿ ಇರಬೇಕು. ಆಮೇಲೆ ಟ್ರೈ ಮಾಡು.. ಮೊಬೈಲ್‌ ನಿನ್ನಲ್ಲಿ ಇರಲಿ. ಆಮೇಲೆ ಸಿಗ್ತಿನಿ’ ಅಂತ ಹೇಳಿ ರಂಜಿತ ಹೊರಹೋದಳು.

***
ಮುಂಜಾನೆ 9 ಗಂಟೆಗೆ(ಅವನು ನಿತ್ಯ ಎದ್ದೇಳುವ ಸಮಯ)ಎದ್ದಾಗ ಮೊಬೈಲ್‌ನಲ್ಲಿ ಮಿಸ್ಡ್ ಕಾಲ್‌ ಇತ್ತು. ತೆರೆದು ನೋಡಿದರೆ ಯಾವುದೋ ಅಪರಿಚಿತ ನಂಬರ್‌. ಶಶಾಂಕ್‌ ಆ ನಂಬರ್‌ಗೆ ಫೋನ್‌ ಮಾಡಿದ. ಹಲೋ ಯಾರು? ಅಂದ.

ಈ ಕಡೆಯಲ್ಲಿದ್ದ ಶ್ರಾವ್ಯಳಿಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ಮದುವೆ ಇಷ್ಟ ಇಲ್ಲ ಅಂತ ಹೇಳಲು ಧೈರ್ಯನೂ ಬರಲಿಲ್ಲ. ಯಾಕಪ್ಪ ಫೋನ್ ಮಾಡ್ಬಿಟ್ಟೆ ಅನಿಸ್ತು. ಸುಮ್ಮನೆ ರಾಂಗ್‌ ನಂಬರ್‌ ಅಂತ ಹೇಳಿದ್ರೆ ಆಯ್ತು ಅಂತ ಮನಸ್ಸಿನಲ್ಲಿಯೇ ಅಂದುಕೊಂಡಳು.

‘ನಾನು ಸ್ವಾತಿ` ಅಂದಳು. ಇವನು ತಲೆಕೆರೆದುಕೊಂಡ ‘ಯಾವ ಸ್ವಾತಿ ಮುತ್ತು’ ಅವಳು ಕಿಲಕಿಲನೆ ನಕ್ಕಳು. ಆಮೇಲೆ ಶ್ರಾವ್ಯ ಕೇಳಿದಳು. `ನೀವು ರಮೇಶ್‌ ಅಲ್ವ?’

ಯಾವ ರಮೇಶ್‌. ಅದಕ್ಕೆ ಅವಳು `ರಮೇಶಣ್ಣ? ಅಂದಳು.

ಅಲ್ಲ ನಾನು ಶಶಾಂಕ್‌.

ಓಹ್‌ ರಾಂಗ್‌ ನಂಬರ್‌. ಸಾರಿ. ಅದಕ್ಕೆ ಇವನು ತುಂಟಧ್ವನಿಯಲ್ಲಿ ಥ್ಯಾಂಕ್ಸ್‌ ಅಂದ.

ಯಾಕೆ ಥ್ಯಾಂಕ್ಸ್‌? ಅವಳದ್ದು ಮರುಪ್ರಶ್ನೆ. ಇವನು ಸುಮ್ಮಗೆ ಅಂತ ಹೇಳಿ ನಕ್ಕ. ಯಾಕೆ ಥ್ಯಾಂಕ್ಸ್‌ ಹೇಳಿದ್ದು ಹೇಳಿ? ಅವಳು ಕಾಡುವ ಧ್ವನಿಯಲ್ಲಿ ಕೇಳಿದಳು.

`ಬೆಳಗ್ಗೆ ನಿಮ್ಮ ಮುದ್ದಾದ ಧ್ವನಿಯ ಸುಪ್ರಭಾತದಿಂದ ನನ್ನ ಎಬ್ಬಿಸಿದಕ್ಕೆ` ಅಂದ.

`ಇಷ್ಟು ಹೊತ್ತಿನವರೆಗೆ ಮಲಗುತ್ತೀರಾ?’ ಆಶ್ಚರ್ಯದಿಂದ ಕೇಳಿದಳು. ‘ಹುಂ. ನನ್ನ ಟೈಮಿಂಗ್ಸ್‌ ಹಾಗೇ.’ಅವಳು `ಲೂಸ್‌’ ಅಂತ ಹೇಳಿ ಫೋನ್‌ ಇಟ್ಟಳು.

***

ಫೋನ್‌ ಇಟ್ಟಮೇಲೆ ಶ್ರಾವ್ಯಳಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ನಿನ್ನೆ ಎಂಗೇಜ್‌ಮೆಂಟ್‌ ಕಳೆದರೂ ಅವನಲ್ಲಿ ಮನಬಿಚ್ಚಿ ಮಾತನಾಡಿರಲಿಲ್ಲ. ಈಗ ಫೋನ್‌ನಲ್ಲಿ ಆತನ ತುಂಟ ಧ್ವನಿ ಕೇಳಿ ಇವಳು ಖುಷಿ ಪಟ್ಟದ್ದು ನಿಜ. ಆಗ ರಂಜಿತ ಬಂದಳು. `ಏನಾಯ್ತೆ?’ ಅಂತ ಅವಳು ಕೇಳಿದ್ದಕ್ಕೆ ಇವಳು ನಗುತ್ತ ಫೋನ್‌ನಲ್ಲಿ ಮಾತನಾಡಿದ್ದನ್ನು ಹೇಳಿದಳು.

ರಂಜಿತ ನಗಲಿಲ್ಲ. ಗಂಭೀರವಾದ ಧ್ವನಿಯಲ್ಲಿ `ಏ ನಿನ್ನ ಭಾವಿಪತಿ ಬಗ್ಗೆ ನಾನು ಹೀಗೆ ಹೇಳಿದ್ದಕ್ಕೆ ಬೇಜಾರು ಮಾಡ್ಕೊಬೇಡ. ನನಗೆನಿಸುತ್ತೆ. ಅವನ್ಯಾರೋ ದೊಡ್ಡ ಫ್ಲರ್ಟ್‌ ಅಂತ.’ ನಗುತ್ತಿದ್ದ ಶ್ರಾವ್ಯ ಒಮ್ಮೆಗೆ ಗಂಭೀರವಾದಳು. 'ಹಾಗೇ ಏನು ಮಾತನಾಡಲಿಲ್ಲ ಕಣೇ ಅವರು’ ಅಂತ ಅವನ ಪರವಾಗಿ ಮಾತನಾಡಿದಳು. ಯಾಕೋ ಅವನನ್ನು ಫ್ಲರ್ಟ್‌ ಅಂತ ಒಪ್ಪಿಕೊಳ್ಳೋಕೆ ಅವಳಿಗೆ ಮನಸ್ಸು ಬರಲಿಲ್ಲ.

ಸರಿ ನಾನು ಹೇಳಿದ ಹಾಗೇ ಕೇಳ್ತಿಯಾ? ರಂಜಿತಳದ್ದು ಮರುಪ್ರಶ್ನೆ. ಹುಂ ಹೇಳು. `ನೀನು ಅವನನ್ನು ಟೆಸ್ಟ್‌ ಮಾಡು.’ ಅದಕ್ಕೆ ಶ್ರಾವ್ಯ `ಟೆಸ್ಟಾ’ ಅಂತ ಅಚ್ಚರಿಯಿಂದ ಕೇಳಿದಳು.

‘ಹೌದು. ನೀನು ಸುಮ್ಮನೆ ಅವರಿಗೆ ಮೆಸೆಜ್‌ ಮಾಡು. ಹಾಯ್‌ ಅಂತ.’ ಶ್ರಾವ್ಯಗೆ ಇದ್ಯಾಕೋ ಇಂಟ್ರೆಸ್ಟಿಂಗ್‌ ಅನಿಸ್ತು. ಮೆಸೇಜ್‌ನಲ್ಲಿ ಹಾಯ್‌ ಅಂತ ಕಳಿಸಿದಳು. ಸ್ವಲ್ಪ ಹೊತ್ತು ಕಳೆದಾಗ ಶಶಾಂಕ್‌ನಿಂದಾಲೂ `ಹಾಯ್‌’ ಅಂತ ಬಂತು. `ಕಾಲ್‌ ಮಿ’ ಅಂತ ಕಳಿಸು ಅಂತ ರಂಜಿತಾ ಹೇಳಿದಾಗ ಹಾಗೇ ಬರೆದು ಕಳಿಸಿದಳು. ಆಮೇಲೆ ರಂಜಿತ ಶ್ರಾವ್ಯಗೆ ಪಾಠ ಶುರು ಮಾಡಿದಳು. `ನೋಡು ಅವನೀಗ ಲವ್‌ನಲ್ಲಿ ಬೀಳೋ ತರಹ ನೀನು ಮಾತನಾಡಬೇಕು. ನಿಮ್ಮ ಧ್ವನಿ ನಂಗೆ ಇಷ್ಟ, ಹೀಗೆ ಏನಾದ್ರು ಹೇಳು. ನಿಂಗೆ ಹೇಳಿಕೊಡುವ ಅಗತ್ಯವಿಲ್ಲ ಅಲ್ವ? (ಕಥೆಯ ಮುಂದಿನ ಭಾಗ)
User Comments
gayathri 10 Apr 2012 09:45 pm
ಕಥೆ ರೀಲ್ ಅಲ್ರಿ ರಿಯಲ್ ಅನಿಸುಥೆ ....ಕುಶಿ ಆಯಿತು ...ಅಮೆರಿಕದಲ್ಲಿ ಕೂತು ಕನ್ನಡ ಕಥೆ ನೋಡಿ ಕುಶಿ ಆಯಿತು ದನ್ಯವಾದ
[ ಅಭಿಪ್ರಾಯ ಬರೆಯಿರಿ ]
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article