ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗು ಸಮ್ಮೇಳನಕ್ಕೆ ತೆರೆ, ನಿರ್ಣಯಗಳ ಹೊರೆ

By Mahesh
|
Google Oneindia Kannada News

ಮಡಿಕೇರಿ, ಜ.9: ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಡುವೆ ಸಮ್ಮೇಳನಾಧ್ಯಕ್ಷರ ವಿರುದ್ಧವೇ ತಿರುಗುಬಾಣವಾದ ಡಾ.ಕಸ್ತೂರಿ ರಂಗನ್ ವರದಿ ತಿರಸ್ಕಾರ ಸೇರಿದಂತೆ ಹಲವು ಮಹತ್ವದ ನಿರ್ಣಯ ಗಳನ್ನು ಸಮ್ಮೇಳನದ ಕಡೆಯ ದಿನವಾದ ಇಂದು ತೆಗೆದುಕೊಳ್ಳಲಾಗಿದೆ.

80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೆ ದಿನ ಹಾಗೂ ಅಂತಿಮ ದಿನವಾದ ಇಂದು ಅಧ್ಯಕ್ಷ ಪುಂಡಲೀಕ ಹಾಲಂಬಿ ನೇತೃತ್ವದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ.

* ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸುತ್ತಿರುವ ಶಾಸಕ ಸಂಭಾಜಿ ಪಾಟೀಲ್‌, ಉಮೇಶ್‌ ಕತ್ತಿ ವರ್ತನೆಗೆ ಖಂಡನೆ
* ನಾಡಗೀತೆಯನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಹಾಡಬೇಕು.
* ಗಡಿನಾಡ ಶಾಲೆಗಳನ್ನು ಮುಚ್ಚಬಾರದು.
* ಶಾಲೆಗಳಿಗೆ ಪುಸ್ತಕಗಳನ್ನು ಕೊಡಬೇಕು.
* ಪಶ್ಚಿಮ ಘಟ್ಟ ಅಭಿವೃದ್ಧಿ ಕುರಿತಾದ ಡಾ.ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಬೇಕು.
* ಹೈಕೋಟ್‌೯ನಲ್ಲಿ ನಡಾವಳಿಗಳು ಕನ್ನಡದಲ್ಲಿರಬೇಕು.

ಮೊದಲನೆಯದಾಗಿ, ಆರು ರಾಜ್ಯಗಳು ಹಾಗೂ ರಾಜ್ಯದ ಐದು ಜಿಲ್ಲೆಗಳ ಪರಿಸರಕ್ಕೆ ಸಂಬಂಧಪಟ್ಟಂತೆ ಡಾ.ಕಸ್ತೂರಿ ರಂಗನ್ ವರದಿಯನ್ನು ಸಾರಾ ಸಗಟಾಗಿ ತಿರಸ್ಕರಿಸುವುದು.

ಎರಡನೆಯದಾಗಿ, ಕೊಡಗು ಪ್ರತ್ಯೇಕ ರಾಜ್ಯದ ಕೂಗನ್ನು ಪರಿಣಾಮಕಾರಿಯಾಗಿ ಖಂಡಿಸುವುದು. ಮೂರನೆಯದಾಗಿ, ಕರ್ನಾಟಕ ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಎಂಇಎಸ್ ಶಾಸಕರಾದ ಸಾಂಬಾಜಿ ಪಾಟೀಲ್ ಹಾಗೂ ಅರವಿಂದ್ ಪಾಟೀಲ್ ಗೆ ಛೀಮಾರಿ ಹಾಕಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಾಯ ತರುವುದು ಹಾಗೂ ಉತ್ತರ ಕರ್ನಾಟಕ ವಿಭಜನೆ ಸೊಲ್ಲೆತ್ತಿರುವ ಸಚಿವ ಉಮೇಶ್‌ಕತ್ತಿ ಅವರ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸುವುದು.

ನಾಲ್ಕನೆಯದಾಗಿ, ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕು. ಗಡಿನಾಡ ಶಾಲೆಗಳಲ್ಲಿ ಎಲ್ಲ ಆಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು. ಕನ್ನಡ ಶಾಲೆಗಳನ್ನು ಮುಚ್ಚದಂತೆ ಕ್ರಮ ವಹಿಸಬೇಕು ಎನ್ನುವುದು. ಐದನೆಯದಾಗಿ, ರಾಜ್ಯದ ಎಲ್ಲ ಕ್ರೈಸ್ತ ಮಿಷನರಿಗಳು ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸುವುದು. ಇನ್ನು ಕಡೆಯದಾಗಿ, ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡಿರುವ ಎಲ್ಲ ನಿರ್ಣಯಗಳ ಅನುಷ್ಠಾನಕ್ಕೆ ಉಪಸಮಿತಿ ರಚಿಸಬೇಕೆಂದು ನಿರ್ಣಯಿಸಲಾಯಿತು.

ಮಂಡಳಿ ಸಭೆಯಲ್ಲಿ 2014ರಿಂದ 15ರ ವರೆಗೆ ವರ್ಷಾದ್ಯಂತ ಕನ್ನಡ ಸಾಹಿತ್ಯ ಪರಿಷತ್ ನ ಶತಮಾನೋತ್ಸವ ಆಚರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಕಾರ್ಯಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು. ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ನಿರ್ಣಯ ಮಂಡಿಸಿದರು. ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ.ರಮೇಶ್, ಎಲ್ಲ ಜಿಲ್ಲೆಗಳ ಕಸಾಪ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.

80th Kannada Sahitya Sammelana Madikeri Resolutions, Valedictory function

ಸಂಭ್ರಮದ ತೆರೆ : ಕಳೆದ ಮೂರು ದಿನಗಳಿಂದ ಕಾಫಿ ನಾಡು, ಕಿತ್ತಲೆ ಬೀಡು, ಯೋಧರ ಭೂಮಿ, ಕಾವೇರಿ ಮಡಿಲಲ್ಲಿ ಸಾವಿರಾರು ಸಾಹಿತ್ಯಾಸಕ್ತರಿಗೆ ಕನ್ನಡದ ದರ್ಶನ ಮಾಡಿಸಿ ರಸದೌತಣ ನೀಡಿದ ೮80ನೇ ಕನ್ನಡ ಜಾತ್ರೆಗೆ ವೈಭವದ ತೆರೆ ಬಿದ್ದಿದೆ.

ಕವಿಗೋಷ್ಠಿಗಳು, ವಿಚಾರ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಅಕ್ಷರ ಅಭಿಮಾನಿಗಳನ್ನು ಸಾಹಿತ್ಯ ರಸಗಂಗೆಯಲ್ಲಿ ಮಿಂದೇಳಿಸಿದವು.

ಒಂದು ಕಡೆ ಇಂಪಾದ ಕವಿಗೋಷ್ಠಿಗಳು ಗಮನ ಸೆಳೆದರೆ, ಮತ್ತೊಂದೆಡೆ ವೈಚಾರಿಕ ವಿಶ್ಲೇಷಣೆಗಳು ಕಚಗುಳಿಯಿಟ್ಟವು. ಸಾಹಿತ್ಯ ಸ್ಮಮೇಳನಗಳನ್ನು ಏಕೆ ನಡೆಸಬೇಕು, ಹೇಗೆ ನಡೆಸಬೇಕು, ಸಾಹಿತ್ಯ ಪರಿಷತ್ತಿನ ಹೊಣೆಗಾರಿಕೆಯೇನು, ಸಮ್ಮೇಳನಾಧ್ಯಕ್ಷರ ಕರ್ತವ್ಯವೇನು, ಕನ್ನಡಿಗರ ಅಗತ್ಯತೆಗಳೇನು ಎಂಬಂತಹ ಹಲವು ಮೂಲಭೂತ ಪ್ರಶ್ನೆಗಳಿಗೆ ಕೊಡಗಿನ 80ನೇ ಸಾಹಿತ್ಯ ಸಮ್ಮೇಳನ ದಿಟ್ಟ ಉತ್ತರವಾಗಿತ್ತು. ಕನ್ನಡದ ನೆಲ, ಜಲ, ಪರಿಸರ, ನೈಸರ್ಗಿಕ ಸಂಪತ್ತು, ಗಡಿ, ಶಿಕ್ಷಣ, ಉದ್ಯೋಗ ಸೇರಿದಂತೆ ಕನ್ನಡಿಗರ ನಿತ್ಯ ಬದುಕಿನ ಮೂಲ ಆಶಯಗಳಿಗೆ ಮಾರ್ಗಸೂಚಿಯಾಗಿತ್ತು.

ಮೊದಲನೆಯದಾಗಿ ಸಂಘಟಕರೇ ಮಾಡಿದ ತಪ್ಪು. ಸಮಯ ಮೀರುತ್ತಿದೆ ಎಂಬ ಕಾರಣಕ್ಕೆ ಸಮ್ಮೇಳನದ ಜೀವನಾಡಿಯಾದ ಸಮ್ಮೇಳನಾಧ್ಯಕ್ಷರ ಭಾಷಣವನ್ನು ಮೊಟಕುಗೊಳಿಸಿದ್ದು, ಆ ಮೇಲೆ ಸಂಘಟಕರ ಕ್ಷಮೆಯಾಚನೆಯೊಂದಿಗೆ ಗೊಂದಲ ನಿವಾರಣೆಯಾಯಿತಾದರೂ ಅಧ್ಯಕ್ಷರ ಭಾಷಣಕ್ಕೆ ಕತ್ತರಿ ಬಿದ್ದದ್ದು ಕನ್ನಡಿಗರಿಗೆ ಬೇಸರ ತರಿಸಿತು.

ಎರಡನೆಯದಾಗಿ ಕಸ್ತೂರಿ ರಂಗನ್ ವರದಿ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕೆಲ ರಾಜಕಾರಣಿಗಳು (ಬಿಜೆಪಿ ಶಾಸಕರು) ವೇದಿಕೆಗೆ ನುಗ್ಗಿ ಸಮ್ಮೇಳನಾಧ್ಯಕ್ಷರ ಕ್ಷಮೆಗೆ ಪಟ್ಟು ಹಿಡಿದದ್ದು, ಮಾಗಿದ ಹಣ್ಣಿನ ಮೇಲೆ ಹಕ್ಕಿ ಅಚ್ಚಿಕ್ಕಿದಂತಾಯ್ತು. ಮೊದಲ ದಿನದ ಸಮ್ಮೇಳನ ಅಪ್ಪಟ ಸಾಹಿತ್ಯೀಕರಣವಾಗಿ ಕಂಗೊಳಿಸಿದರೆ ಎರಡನೆ ದಿನದ ಸಮ್ಮೇಳನ ರಾಜಕೀಯಕರಣಗೊಂಡು ಮೊದಲ ದಿನದ ಸಾಹಿತ್ಯದ ಗುಂಗಿನಲ್ಲಿದ್ದ ಸಾಹಿತ್ಯ ಪ್ರೇಮಿಗಳ ಮನಸ್ಸುಗಳು ಪಿಚ್ಚೆನಿಸಿದವು. ಮೂರನೆಯದಾಗಿ ಒಒಡಿಗಾಗಿ ಹೊಡೆದಾಡಿದ ಬಹುತೇಕ ಶಿಕ್ಷಕರನ್ನೇ ಒಳಗೊಂಡ ಸರ್ಕಾರಿ ಉದ್ಯೋಗಿಗಳ ನಡೆ ತೀರಾ ಅಸಹ್ಯ ಹುಟ್ಟಿಸುವಂತಿತ್ತು. ಎಲ್ಲೆಲ್ಲಿಂದಲೋ ಸಮ್ಮೇಳನಾರ್ಥಿಗಳಾಗಿ ಬಂದಿದ್ದ ಸಾವಿರಾರು ಮಂದಿಗೆ ಇದು ಸಣ್ಣತನ ಎನ್ನಿಸಿತ್ತು

English summary
The three day Kannada Sahitya Sammelana at Madikeri, Kodagu concludes today with Six major resolutions. Eminent Kannada writer and novelist Norbert D'Souza was the President for 80th Kannada Sahitya Sammelana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X