ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವನ : ನಾ ಕನ್ನಡಮ್ಮನ ಬಿಟ್ಟು ಹೋಗುವುದಿಲ್ಲ!

By ವಿದ್ಯಾಶಂಕರ ಹರಪನಹಳ್ಳಿ
|
Google Oneindia Kannada News

ಮೇ 7ರಂದು ಗುರುದೇವ ರವೀಂದ್ರನಾಥ ಟಾಗೋರರ ಜಯಂತಿ. ಅವರ ಕವಿತೆಗಳ ಇಂಗ್ಲಿಷ್ ಅನುವಾದ ಓದುತ್ತಿದ್ದೆ. ಅವರ ಕವಿತೆ 'Clouds and Waves' ಗಮನ ಸೆಳೆಯಿತು. ಕನ್ನಡದ ಶಿಕ್ಷಣದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಎಷ್ಟು ಚೆನ್ನಾಗಿದೆ ಎಂದೆನಿಸಿತು. ಭಾವ ಅನುವಾದ ಪ್ರಯತ್ನಿಸಿದ್ದೇನೆ. ಓದಿ ನೋಡಿ.

ಯಾವ ಇಂಗ್ಲಿಷ್-ನ ಆಕರ್ಷಕ ಮೋಡಗಳು ಬಂದು ಕರೆದರೂ, ಹಿಂದಿ, ತಮಿಳ್, ತೆಲುಗು ಅಲೆಗಳು ಪ್ರಲೋಭನೆ ಒಡ್ಡಿದರು ನಾ ಕನ್ನಡಮ್ಮನ ಬಿಟ್ಟು ಹೋಗುವುದಿಲ್ಲ ಎನ್ನುವ ಕನ್ನಡದ ಈ ಕಂದ. ಅಂದ ಹಾಗೆ, ಮೇ 11ರಂದು 'ಅಮ್ಮನ ದಿನಾಚರಣೆ'.

How can I leave my mother?

ಮೋಡಗಳು ಮತ್ತು ಅಲೆಗಳು (ಅಥವಾ ಕನ್ನಡಮ್ಮ ಮತ್ತು ಕಂದ)

ಅಮ್ಮ, ಆ ಮೊಡದಲ್ಲಿರುವ ಜನ ನನ್ನ ಕರೆದು ಹೇಳಿದರು
'ಪುಟ್ಟಾ, ನಾವು ಎದ್ದಾಗಿನಿಂದ ಮಲಗುವವರೆಗೆ ಆಡುತ್ತೇವೆ
ಸೂರ್ಯನ ಚಿನ್ನದ ರಥದೊಂದಿಗೆ, ಬೆಳ್ಳಿ ಚಂದಿರನೊಂದಿಗೆ'
ನಾನು ಕೇಳಿದೆ 'ಅದೆಲ್ಲಾ ಸರಿ, ನಿಮ್ಮಲ್ಲಿಗೆ ನಾ ಹೇಗೆ ಬರಲಿ?'
ಅವರೆಂದರು 'ಜಗತ್ತಿನ ತುಟ್ಟತುದಿಗೆ ಬಾ,
ಕೈ ಮೇಲೆ ಎತ್ತು, ಮೇಲೆಕ್ಕೆ ಎಳೆದ್ ಕೊಳ್ತಿವಿ ನಾವು!'
ನಾನೆಂದೆ 'ಅಯ್ಯೋ! ಅಮ್ಮ ಮನೆಯಲ್ಲಿ ಕಾಯ್ತಿರ್ತಾಳೆ
ಹೇಗಯ್ಯಾ ಬಿಟ್ಟು ಬರಲಿ ಅವಳ?'
ಅದಕ್ಕವರು ನಕ್ಕು ಹಾಗೆ ತೇಲಿ ಹೋದರು
'ಆದರೆ, ಅಮ್ಮ ಅವರಿಗಿಂತ ಒಳ್ಳೆ ಆಟ ಗೊತ್ತು ನಂಗೆ
ನಾನೊಂದು ಪುಟಾಣಿ ಮೋಡ, ನೀ ಎನ್ನ ಚಂದಿರ
ನಾ ನಿನ್ನ ತಬ್ಬಿ ಮರೆ ಮಾಡ್ತೀನಿ,
ಮತ್ತೆ, ನಮ್ಮ ಮನೆ ಸೂರೆ ನೀಲಿ ಆಕಾಶ'

ಅಲೆಗಳಲಿ ಜೀವಿಸೋ ಜನ ನನ್ನ ಕರೆದ್ಹೇಳಿದರು
'ಬೆಳಿಗ್ಗೆಯಿಂದ ರಾತ್ರಿಯವರೆಗೆ ಹಾಡ್ತಿವಿ ನಾವು
ಎಲ್ಲು ನಿಲ್ಲದೆ ಎಲ್ಲೆಲ್ಲಿಗೋ ಹೋಗ್ತಿರ್ತಿವಿ ನಾವು'
ನಾನೆಂದೆ 'ಅಯ್ಯೋ... ನಿಮ್ಮ ಜೊತೆ ಹೇಗ್ ಸೇರಲಿ ನಾನು?'
ಅವರಂದ್ರು 'ಸಮುದ್ರ ದಂಡೆಯ ಅಂಚಿಗೆ ಬಾ,
ಗಟ್ಟಿಯಾಗಿ ಕಣ್ಮುಚ್ಚಿ ನಿಂತುಕೋ
ನಿನ್ನ ಅಲೆಗಳ ಮೇಲೆ ಹೊತ್ತುಕೊಂಡು ಹೋಗ್ತಿವಿ'
ನಾನೆಂದೆ 'ಅಯ್ಯೋ! ಇಲ್ಲ ಮಾರ್ರಾಯ್ರ ಅಮ್ಮನ ಬಿಟ್ಟು ಎಲ್ಲೂ ಬರಲ್ಲ
ಅಮ್ಮಂಗೆ ನಾ ಯಾವಾಗ್ಲೂ ಮನೆಯಲ್ಲಿ ಇರೋದೆ ಇಷ್ಟ'
ಅವರು ನಕ್ಕು, ಕುಣಿಕುಣಿತಾ ಹೊರಟುಹೊದ್ರು...
ಆದರೆ ಅಮ್ಮ ಅವರಿಗಿಂತ ಒಳ್ಳೆ ಆಟ ಗೊತ್ತು ನಂಗೆ
ನಾನೊಂದು ಪುಟಾಣಿ ಅಲೆಯಾಗ್ತಿನಿ
ನೀನೊಂದು ಅಪರಿಚಿತ ಸುಮುದ್ರ ತೀರ
ನಾ ಉರುಳುರುಳಿ ಬಂದು ನಿನ್ನ ಮಡಿಲಿಗೆ ಬಿಳ್ತೀನಿ
ಹೊಟ್ಟೆ ಹುಣ್ಣಾಗುವ ಹಾಗೆ ಕಿಲಕಿಲ ನಗ್ತೀನಿ
ಜಗತ್ತಿಗೆ ನಾವಿಬ್ರೂ ಸಿಗದ ಹಾಗೆ ಮರೆಯಾಗೋಣ ಬಾಮ್ಮ

English summary
Clouds and Waves : Poem by Rabindranath Tagore. I shall be the cloud and you the moon. I shall cover you with both my hands, and our house-top will be the blue sky. How can I leave my mother? Translated by Vidyashankar Harapanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X