ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಟ

By Staff
|
Google Oneindia Kannada News
ಅಂದು ದಿನವೆಲ್ಲ ಕಾಲೇಜಿನಲಿ ಆಟಗಳ
ಸಂಜೆಯಾದೊಡೆ ಬೀದಿ ಬೀದಿ ತಿರುಗುವ
ರಾತ್ರಿಯೆಲ್ಲ ಎಡಬಿಡದೆ ಓದುವ
ಮತ್ತೆ ಬೆಳಗ್ಗೆ ಕೂತಲ್ಲೆಲ್ಲಾ ತೂಕಡಿಸುವ

ಮರುವರುಷ ಕೆಲಸಕ್ಕಾಗಿ ಅರ್ಜಿ ತಳ್ಳುವುದೇ
ದಿನಂಪ್ರತಿ ಸಂದರ್ಶನ ಕೊಡುವುದೇ
ಸಿಕ್ಕ ಸಿಕ್ಕ ಗೆಳೆಯರೆಲ್ಲರಿಂದ ಸಾಲ ಪಡೆಯುವ
ಅವರಿಂದ ತಪ್ಪಿಸಿಕೊಳ್ಳಲು ಕಲಿತೆ ಸುಳ್ಳು ಹೇಳುವ

ಕೆಲಸ ಸಿಕ್ಕೊಡನೆ ಮನೆ ಬಿಟ್ಟು ಹೋಟೆಲ್‌ ತಿಂಡಿಗಳ
ಹಾಳು ಮೂಳು ತಿಂದು ಅಪ್ಪ ಅಮ್ಮರ ಬೈಗುಳ ತಿನ್ನುವ
ಬೀದಿಗೆ ಬಿಟ್ಟ ಬಸವನಂತೆ ಹುಡುಗಿಯರ ಹಿಂದೆ ಹೋಗುವ
ಬೆಪ್ಪು ಮುಖಕ್ಕೆ ಯಾರೂ ಸಿಗದೆ ಸಿಗರೇಟು ಕುಡಿತಗಳ

ಸಂಸಾರ ಜವಾಬ್ದಾರಿ ಹೊತ್ತೊಡನೆ ಮನೆ ಸೇರದಿರುವುದೇ
ಅಕ್ಕ ಪಕ್ಕದ ಮನೆಗಳ ಕಡೆ ಇಣುಕಿ ನೋಡುವುದೇ
ಪತ್ನಿ ಮಕ್ಕಳ ಕೈಗೆ ಸಿಕ್ಕು ಬೈಸಿಕೊಳ್ಳುವುದೂ ಆಯ್ತು
ಇದೆಲ್ಲಕೆ ಮುಕ್ತಿ ಕೊಡುವುದು ಕವನ ಬರೆಯುವ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X