•  

ಮಧುಬಿಂದಿಗೆಯ ನೀರೆ!

ಮಂಗಳವಾರ, ಮೇ 6, 2003, 5:30 [IST]
ರವಿ ಕೃಷ್ಣಾ ರೆಡ್ಡಿ, ಕುಪರ್ಟಿನೊ, ಕ್ಯಾಲಿಫೊರ್ನಿಯ.

Ravi Krishna Reddyನೀರಸದ ಜೀವನಕೆ ರಸ ಬೆರೆಸ ಬಾರೆ,
ನೀರೆ, ಮಧುಬಿಂದಿಗೆಯ ತೆಳುನಡುವಲಿಡಿದು।।

ಅದ ಕಂಡೆ ಇದ ಕಂಡೆ, ತೃಪ್ತಿಯೆಂಬುದು ಇಲ್ಲ,
ಖಂಡ ಖಂಡಗಳ ಜಿಗಿದೆ, ಭಾವ ತಣಿದಿಲ್ಲ,
ಬೇಸರವೊ ದುಃಖವೊ ಈ ಪರಿಯ ತಿಳಿಯೆ!
ಎದೆಕೊರತೆಯಾ ತಿಳಿವು ದಿನ ಮನದಲೆಲ್ಲಾ।।

ರಾಗವೈರಾಗ್ಯಗಳ ಆಚೀಚೆ ನಾ ಪಯಣಿ
ರಾಗಿಣಿ ರೂಪಿಣಿ ನೀ ಸುಧೆಯಧರ ರಾಣಿ.
ಜನ್ಮಜನ್ಮಾಂತರದ ಅಂಧ ಬಂಧಗಳೇಕೆ?
ಮೃತ್ಯುಂಜಯವು ಜೀವ ನಿನ್ನೊಲವ ಸವಿಯೆ।।
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Himachal Pradesh Cricket Association Stadium, Dharmasala
Kings XI Punjab: 71 / 3, 10.5 Overs
1st Test , Lord's Cricket Ground, St John's Wood
West Indies: 94 / 3, 34.5 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article