•  

ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ ಅಸ್ತಂಗತ

ಸೋಮವಾರ, ಜನವರಿ 24, 2011, 10:20 [IST]
Pt. Bhimsen Joshi demise
ಪುಣೆ, ಜ. 24: ಭಾರತರತ್ನ ಪಡೆದ ಮೊದಲ ಹಿಂದೂಸ್ತಾನಿ ಗಾಯಕ, ಗಾನ ಗಂಧರ್ವ ಪಂಡಿತ್ ಭೀಮಸೇನ ಜೋಶಿ(89) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 8.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಗದಗ ಜಿಲ್ಲೆ ರೋಣ ದಲ್ಲಿ ಹುಟ್ಟಿದ ಜೋಶಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂಸ್ತಾನಿ ಗಾಯನದ ಕೀರ್ತಿ ಪತಾಕೆ ಹಾರಿಸಿದರು. ಮೃತರಿಗೆ ಎರಡು ಕುಟುಂಬಗಳಿಂದ ಒಟ್ಟು 7 ಜನ ಮಕ್ಕಳಿದ್ದಾರೆ. ಜೋಶಿ ಅವರ ಅಂತ್ಯಕ್ರಿಯೆಯನ್ನು ಪುಣೆಯಲ್ಲಿ ನೆರವೇರಿಸಲಾಗುವುದು ಎಂದು ಅವರ ಪುತ್ರಿ ಉಷಾ ಹೇಳಿದರು.

1922 ಫೆ.4 ರಂದು ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಕಲಿಯಲೆಂದು ಮನೆಯನ್ನು ಬಿಟ್ಟ ಜೋಶಿಯವರು ನಂತರ ಧಾರವಾಡ ಜಿಲ್ಲೆಗೆ ಹಿಂದಿರುಗಿ ಕುಂದಗೋಳದ ಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರ ಶಿಷ್ಯರಾದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ ಕಿರಾಣಾ ಘರಾನಾದಲ್ಲಿ ಪರಿಣತರಾದ ಭೀಮಸೇನ ಜೋಷಿಯವರು ಕಳೆದ ಆರು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬಂದಿದದ್ದರು.

ವಿಡಿಯೋ:
ಗಾನ ಗಂಧರ್ವ ಭೀಮಸೇನ್ ಜೋಶಿ ಕಣ್ಮರೆ
  Read:  In English 
ನಂಬಿದೆ ನಿನ್ನ ನಾದದೇವತೆಯೇ ಎಂದು ಸಂಗೀತವನ್ನು ಆರಾಧಿಸುತ್ತಾ ಬಂದ ಜೋಶಿ ಅವರಿಗೆ ಹಿಂದೂಸ್ತಾನಿ ಸಂಗೀತದ ಖಯಾಲ್ ಕೃತಿಗಳ ಹಾಡುಗಾರಿಕೆಗೆ ಪ್ರಸಿದ್ಧರಾದವರು. ಹಾಗೆಯೇ ಹಿಂದಿ ಭಜನೆಗಳು, ಮರಾಠಿ ಅಭಂಗ ಮತ್ತು ನಾಟ್ಯಗೀತೆಗಳನ್ನು ಸಹ ಬಹಳಷ್ಟು ಹಾಡಿದ್ದಾರೆ. ಕನ್ನಡ ಭಾಷೆಯ ದಾಸಪದವಾದ ಭಾಗ್ಯದ ಲಕ್ಷ್ಮಿ ಬಾರಮ್ಮ ಭೀಮಸೇನ ಜೋಶಿಯವರ ಹೆಸರಿನೊಂದಿಗೆ ಐಕ್ಯವಾಗುವಷ್ಟು ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಭೀಮಸೇನ್ ಜೋಶಿಯವರ ಮುಖ್ಯ ಆಲ್ಬಮ್ ಗಳೆಂದರೆ ದಾಸವಾಣಿ ಮತ್ತು ಎನ್ನ ಪಾಲಿಸೊ.

ಪುಣೆ ನಿವಾಸಿಯಾಗಿದ್ದ ಭೀಮಸೇನ ಜೋಷಿ ಅವರು ತಮ್ಮ ಗುರುಗಳ ನೆನಪಿನಲ್ಲಿ 1952ರಿಂದ ಪ್ರತಿ ವರ್ಷವೂ ಅಲ್ಲಿ "ಸವಾಯಿ ಗಂಧರ್ವ ಸಂಗೀತ ಮಹೋತ್ಸವ"ವನ್ನು ನಡೆಸುತ್ತಾ ಬ೦ದಿದ್ದರು. ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಭೀಮಸೇನ ಜೋಷಿಯವರಿಗೆ ಲಭಿಸಿದೆ.

ಜೋಶಿ ಅವರನ್ನು ಹುಡುಕಿಕೊಂಡ ಪ್ರಶಸ್ತಿಗಳು ಹಲವಾರು: 1972ರಲ್ಲಿ ಪದ್ಮಶ್ರೀ, 1976ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, 1985ರಲ್ಲಿ ಪದ್ಮಭೂಷಣ, 1999ರಲ್ಲಿ ಪದ್ಮವಿಭೂಷಣ ಹಾಗೂ 2008ರಲ್ಲಿ ಭಾರತ ರತ್ನ ಪ್ರಶಸ್ತಿಗಳು ಲಭಿಸಿವೆ.

User Comments
xxx 24 Jan 2011 05:58 pm
ಏಜ್ ಇಸ್ ನಾಟ್ stoping
muktha 24 Jan 2011 04:56 pm
ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ ಅಸ್ತಂಗತ ರಾದ ಕಾರಣ ರಜೆ ಘೋಶಿಸುವುದು ಉತ್ತಮ.
[ ಅಭಿಪ್ರಾಯ ಬರೆಯಿರಿ ]
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article