ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ ವಿದ್ಯಾರ್ಥಿ ಕಣ್ಣಿಗೆ ಬಿದ್ದ ದೈತ್ಯ ಅಳಿಲು

By ಮಲೆನಾಡಿಗ
|
Google Oneindia Kannada News

ಭಾರತದ ದೈತ್ಯ ಅಳಿಲು ಅಥವಾ ಮಲಬಾರ್ ದೈತ್ಯ ಅಳಿಲು ಕಾಣಿಸಿಕೊಳ್ಳುವುದೇ ಅಪರೂಪ. ಕಣ್ಣಲ್ಲಿ ಕಣ್ಣಿಟ್ಟು ಕಾದು ಕುಂತುರೂ ಇದ್ದ ಕಡೆ ಇರಲ್ಲ. ಅಪರೂಪದ ವಿಶಿಷ್ಟವಾದ ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಾಣ ಸಿಗುವ ಸಸ್ಯಾಹಾರಿ ಅಳಿಲು ಭದ್ರಾ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿತ್ತು ನನ್ನ ಅದೃಷ್ಟ ಎಂದು ಶಿವಮೊಗ್ಗದ ವಿದ್ಯಾರ್ಥಿ ದುಷ್ಯಂತ್ ಎಚ್ ಪಿ ಹೇಳುತ್ತಾನೆ.

ಕುವೆಂಪು ವಿಶ್ವ ವಿದ್ಯಾಲಯದ ಕ್ಯಾಂಪಸ್ ಬರೀ ಪದವೀಧರರನ್ನು ಮಾತ್ರ ಹೊರಹಾಕುತ್ತಿಲ್ಲ. ನೈಸರ್ಗಿಕ ವಿಸ್ಮಯಗಳನ್ನು, ಸುತ್ತಮುತ್ತಲಿನ ಅರಣ್ಯದ ಪ್ರಾಣಿ ಪಕ್ಷಗಳ ಬಗ್ಗೆ ಖರ್ಚಿಲ್ಲದೆ ಅಧ್ಯಯನ ನಡೆಸುವ ಆಸಕ್ತರನ್ನು ಬೆಳೆಸುತ್ತಿದೆ. ಬಿಎಸ್ಸಿಯಲ್ಲಿ ಸಿಬಿಜಡ್ಜ್ ವಿಷಯ ಓದುತ್ತಿರುವ ದುಷ್ಯಂತನಿಗೆ ಕೂಡಾ ಸಹಜವಾಗಿ ಮಲೆನಾಡಿನ ಕಾಡು ಮೇಡು ಅಲೆಯುವುದು ರೂಡಿಯಾಗಿದೆ.

ಇತ್ತೀಚೆಗೆ ಕೊಂಡ ನಿಕಾನ್ ಎಸ್ಎಲ್ಆರ್ ಕೆಮೆರಾ ಪ್ರಕೃತಿಯ ಸೌಂದರ್ಯವನ್ನು ಹಿಡಿಯಲು ಸಹಾಯಕವಾಗಿದೆ. ಹೀಗೆ ಇತ್ತೀಚೆಗೆ ಭದ್ರಾ ಅಭಯಾರಣ್ಯಕ್ಕೆ ಕಾಲಿಟ್ಟ ದುಷ್ಯಂತ್ ಕೆಮೆರಾ ಕಣ್ಣಿಗೆ ಮಲಬಾರ್ ದೈತ್ಯ ಅಳಿಲು ಸಿಕ್ಕಿದೆ. ಬೇರೆ ಅಳಿಲಿಗಿಂತ ಗಾತ್ರದಲ್ಲಿ ಆಕಾರದಲ್ಲಿ ಬಣ್ಣ ಚಲನೆಯಲ್ಲಿ ವಿಭಿನ್ನವಾಗಿದ್ದ ಈ ಅಳಿಲು ಕಂಡ ದುಷ್ಯಂತ್ ನಿಂತಲ್ಲೇ ನಿಂತು ಅಳಿಲಿನ ಚಲನವಲನಗಳನ್ನು ವಿಡಿಯೋ ಚಿತ್ರೀಕರಿಸಿದ್ದಾನೆ.

ಮನೆ ಸುತ್ತಾ ಮುತ್ತಾ, ಭದ್ರಾ ಡ್ಯಾಮ್ ನ ಹತ್ತಿರ ಪಕ್ಷಿಗಳ ಫೋಟೊ ಹಿಡಿಯುತ್ತಿದ್ದ ದುಷ್ಯಂತನಿಗೆ ಹೊಸ ಜೀವಿಯೊಂದನ್ನು ಮೊದಲ ಬಾರಿಗೆ ನೋಡಿದ ಅನುಭವದಿಂದ ಥ್ರಿಲ್ ಆಗಿದ್ದಾನೆ. ಕುವೆಂಪು ವಿವಿ ಪ್ರೊ. ಪೂರ್ಣಾನಂದ ಅವರ ಪುತ್ರ ದುಷ್ಯಂತ್ ತೆಗೆದಿರುವ ವಿಶಿಷ್ಟ ಚಿತ್ರಗಳ ಝಲಕ್ ಇಲ್ಲಿದೆ. ಅಳಿಲಿನ ಚಿತ್ರ ನೋಡಿ ಖುಷಿಯಾದರೆ ದುಷ್ಯಂತ್ ಗೆ ಹಾರೈಸಲು ಅವರಿಗೆ ಒಂದು ಇಮೇಲ್ ಮಾಡಿ..

ಅಳಿಲಿನ ಬಗ್ಗೆ ಒಂದಿಷ್ಟು

ಅಳಿಲಿನ ಬಗ್ಗೆ ಒಂದಿಷ್ಟು

ಎರಡು ಅಥವಾ ಮೂರು ವರ್ಣಗಳ ಮಿಶ್ರಣದಲ್ಲಿ ಇವು ಇರುತ್ತವೆ. ಸುಮಾರು 14 ಇಂಚು ಉದ್ದ ದೇಹದ ಅಳಿಲಿನ ಬಾಲ 2 ಅಡಿ ಉದ್ದ ದಾಡುತ್ತದೆ. ವಯಸ್ಕ ಅಳಿಲಿನ ತೂಕ 2 ಕೆಜಿ ಮೀರಲ್ಲ.

ದೊಡ್ಡ ದೊಡ್ಡ ಮರಗಳು, ಹಲವು ರೆಂಬೆ ಕೊಂಬೆಗಳುಳ್ಳ ಮರಗಳನ್ನು ಆಶ್ರಯಿಸುತ್ತದೆ. ಮರದಿಂದ ಮರಕ್ಕೆ ಸುಮಾರು 20 ಅಡಿ ದೂರಕ್ಕೂ ಹಾರಬಲ್ಲದು. ಬೆಳಗ್ಗೆ-ಸಂಜೆ ಕ್ರಿಯಾಶೀಲವಾಗಿರುವ ಈ ಅಳಿಲು ಮಧ್ಯ ರೆಸ್ಟ್ ಮಾಡುತ್ತದೆ. ತೀರಾ ನಾಚಿಕೆ ಸ್ವಭಾವ ಸುಲಭವಾಗಿ ಕಣ್ಣಿಗೆ ಕಾಣಿಸಲ್ಲ. ಕಂಡರೂ ಮಾಯವಾಗುತ್ತದೆ.

ವಿಶಿಷ್ಟವಾದ ಅಳಿಲು

ವಿಶಿಷ್ಟವಾದ ಅಳಿಲು

ಸಾಮಾನ್ಯವಾಗಿ ಒಂಟಿಯಾಗಿ ಜೀವಿಸುವ ಅಳಿಲುಗಳು ತೆಳ್ಳಗೆ ಟೊಂಗೆಗಳನ್ನು ಆಯ್ಕೆ ಮಾಡುತ್ತವೆ. ಅಲ್ಲಲ್ಲಿ ಗೂಡು ಕಟ್ಟಿಕೊಂಡು ನಿದ್ದೆ ಮಾಡುತ್ತವೆ. ಮಾರ್ಚ್, ಏಪ್ರಿಲ್, ಸೆಪ್ಟೆಂಬರ್ ಹಾಗೂ ಡಿಸೆಂಬರ್ ನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.

ಪುಣೆ ಭೀಮಶಂಕರ್ ವೈಲ್ಡ್ ಲೈಫ್ ಸೆಂಚುರಿ, ಸಹ್ಯಾದ್ರಿ ಶ್ರೇಣಿ, ಕೇರಳ, ಮಧ್ಯಪ್ರದೇಶ, ಗುಜರಾತ್ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಾಣಬಹುದು. ಕರ್ನಾಟದಲ್ಲಿ ನಾಗರಹೊಳೆ, ಕುದುರೆಮುಖ, ಭದ್ರಾ ಅಭಯಾರಣ್ಯಗಳಲ್ಲಿ ಕಾಣಿಸಿಕೊಂಡಿದೆ.

ವಿಶಿಷ್ಟವಾದ ಪ್ರಾಣಿ

ವಿಶಿಷ್ಟವಾದ ಪ್ರಾಣಿ

ಮೇ ತಿಂಗಳಿನಲ್ಲಿ ನಾನು ನೋಡಿದಾಗ ಒಂದೇ ಅಳಿಲಿತ್ತು. ಆಮೇಲೆ ಮರಿಗಳೊಂದಿಗೆ ಕಾಣಿಸಿಕೊಂಡಿತು ಅದರೆ, ಫೋಟೊ ತೆಗೆಯಲು ಆಗಲಿಲ್ಲ.

ಮೊದಲು ಕಂಡ ಅಳಿಲು ಮಾತ್ರ ಬಾಯಿ ಸುತ್ತಾ ಎಂಜಲು ಹಾಕುತ್ತಿತ್ತು. ಅದರ ರೋಮಗಳ ನಡುವೆ ಕಪ್ಪು ಇರುವೆ ಮುತ್ತುತ್ತಿತ್ತು. ಸಸ್ಯಾಹಾರಿಗಳಾದ ಈ ಅಳಿಲುಗಳು ಬಾದಾಮಿ ಮರದಲ್ಲೇ ಹೆಚ್ಚಾಗಿ ನೋಡಿದೆ ಎಂದು ದುಷ್ಯಂತ್ ತನ್ನ ಅನುಭವವನ್ನು ಹಂಚಿಕೊಂಡ.

ಅರಿವು ಮೂಡಿಸಬೇಕು

ಅರಿವು ಮೂಡಿಸಬೇಕು

ದೈತ್ಯ ಅಳಿಲಿನ ಚಿತ್ರವನ್ನು ಸ್ನೇಹಿತರಿಗೆ, ಪ್ರಾಧ್ಯಾಪಕರಿಗೆ ತೋರಿಸಿದೆ. ಎಲ್ಲರೂ ಆಶ್ಚರ್ಯಪಟ್ಟರು ಈ ರೀತಿ ಪ್ರಾಣಿ ನೋಡೇ ಇಲ್ಲ ಎಂದರು. ಇದರಿಂದ ನನಗೂ ಖುಷಿಯಾಯ್ತು ಮತ್ತೆ ಅದೇ ಮರದ ಅದೇ ಕೊಂಬೆಯ ಮೇಲೆ ಕಣ್ಣಿಟ್ಟೆ. ಮೊದಲೆರಡು ದಿನ ನಿರಾಶೆಯಾಯಿತು.

ಕಲಿಯುವುದು ಸಾಕಷ್ಟಿದೆ

ಕಲಿಯುವುದು ಸಾಕಷ್ಟಿದೆ

ಇಲ್ಲಿರುವ ಎಲ್ಲಾ ಚಿತ್ರಗಳನ್ನು ನಿಕಾನ್ ಡಿ5100 ಡಿಎಸ್ಎಲ್ಆರ್ ಕೆಮೆರಾ ಬಳಸಿ ತೆಗೆದಿದ್ದೇನೆ. 70-300 ಲೆನ್ಸ್ ಕೆಲವೆಡೆ ಉಪಯೋಗಕ್ಕೆ ಬಂದಿದೆ. ವಿಡಿಯೋ ಎಚ್ ಡಿ ಗುಣಮಟ್ಟದಾಗಿದ್ದು, ಅಳಿಲಿಗೆ ತಿಳಿಯದಂತೆ ಚಿತ್ರೀಕರಿಸಿದ್ದು ಒಂದು ಸಾಹಸ.

ಫೋಟೋಗ್ರಾಫಿಯಲ್ಲಿ ನಾನು ಕಲಿಯುವುದು ಸಾಕಷ್ಟಿದೆ. ಓದಿನ ನಡುವೆ ಬಿಡುವು ಮಾಡಿಕೊಂಡು ಈ ಹವ್ಯಾಸ ಬೆಳೆಸಿಕೊಂಡೆ ಎನ್ನುತ್ತಾರೆ ದುಷ್ಯಂತ್

ಫೋಟೋಗ್ರಾಫರ್ ದುಷ್ಯಂತ್

ಫೋಟೋಗ್ರಾಫರ್ ದುಷ್ಯಂತ್

ಪ್ರಾಣಿ ಪಕ್ಷಿ, ಕ್ರಿಮಿ ಕೀಟಗಳ ಚಿತ್ರ ತೆಗೆಯುವುದು ಸುಲಭದ ಕೆಲಸ ಆದರೆ ಅವುಗಳ ಬಗ್ಗೆ ಒಂದಿಷ್ಟು ಅಧ್ಯಯನ ನಡೆಸಿ ಅವುಗಳ ರಕ್ಷಣೆ ನಿಂತರೆ ಅದಕ್ಕಿಂತ ಉತ್ತಮ ಕೆಲಸ ಬೇರೆ ಇಲ್ಲ ಎನಿಸುತ್ತದೆ ಎಂದು ದುಷ್ಯಂತ್ ಹೇಳಿದ ಮಾತು ಉತ್ಸಾಹಿ ಬೆಂಗಳೂರಿನ ಛಾಯಾಗ್ರಾಹಕರಿಗೂ ತಲುಪುತ್ತದೆ ಎಂಬ ಆಶಯ ನಮಗಿದೆ

ದುಷ್ಯಂತ್ ಉದ್ದೇಶ

ದುಷ್ಯಂತ್ ಉದ್ದೇಶ

ಇದೇ ರೀತಿ ವಿಶಿಷ್ಟವಾದ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ತೆಗೆದು ಜನರಿಗೆ ಇವುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ದುಷ್ಯಂತ್ ಹೊಂದಿದ್ದಾನೆ. ಅಳಿಲಿನ ಚಲನವಲನಗಳನ್ನು ನೋಡಲು ಈ ವಿಡಿಯೋ ಕ್ಲಿಪ್ಪಿಂಗ್ ವೀಕ್ಷಿಸಿ

English summary
The Indian giant squirrel, or Malabar giant squirrel, (Ratufa indica) is a large tree squirrel species genus Ratufa native to India. The Giant Squirrel mostly active in the early hours of the morning, evening, resting in the midday. It is a shy, wary animal, not easy to discover says nature lover Dushyanath HP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X