ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸಳ್ಳಿ ದೇವರಾಜ್ ಕೃಷಿ ಸಾಧನೆಗೆ ಸಿಗಲಿ ಬೆಲೆ

By Mahesh
|
Google Oneindia Kannada News

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ರಸ್ತೆಯ ಗಾಜನೂರಿಗೆ ಹೋಗುವ ಮಾರ್ಗ ಮಧ್ಯೆಯಲ್ಲಿರುವ ನಗರದ ಹೊರವಲಯದ ಹೊಸಳ್ಳಿ ಇದೀಗ ಯುವ ಕೃಷಿ ಸಾಧಕನ ಹೆಸರಿನಲ್ಲಿ ಮೆರಗುಗೊಳ್ಳುತ್ತಿದೆ.

ಆಧುನಿಕ ಯುಗದಂತಹ ರಂಗು ರಂಗಿನ ಚಿತ್ತಾರಗಳ ನಡುವೆ ಸಮ್ಮಿಳಿತಗೊಳ್ಳುವ ಹಳ್ಳಿ ಪರಂಪರೆ, ಕೃಷಿ ಪರಂಪರೆಗಳಿಂದಲೇ ಗುಳೇ ಹೋಗುತ್ತಿರುವ ಯುವ ಸಮುದಾಯಕ್ಕೆ ಮಾದರಿಯಾಗಿರುವ ಹೊಸಳ್ಳಿ ಜಿ.ಎನ್.ದೇವರಾಜ್ ದೇಶಿ ಪದ್ಧತಿಯನ್ನು ಅನುಸರಿಸಿ ಕೃಷಿ ಸಾಧನೆಯಲ್ಲಿ ತೊಡಗಿರುವುದು ಕೂಡ ಶಿವಮೊಗ್ಗದ ಮಣ್ಣಿನ ಗುಣವನ್ನು ಸಾರುತ್ತದೆ, ಹೊಸಳ್ಳಿ ದೇವರಾಜ್ ಇಂಥದ್ದೊಂದು ಕೃಷಿ ಸಾಧನೆ ಕುರಿತ ವಿಸ್ತೃತ ವರದಿ ಇಂತಿದೆ,

ಮೂಲತಃ ಹೊಸಳ್ಳಿಯಲ್ಲಿ ವಾಸವಾಗಿರುವ ನರಸಿಂಹಯ್ಯ-ಜಯಮ್ಮ ಎಂಬುವ ದಂಪತಿಗಳ ಏಳು ಮಕ್ಕಳಲ್ಲಿ ಕೊನೆಯವರಾದ ಜಿ.ಎನ್. ದೇವರಾಜ್ ಓದಿದ್ದು ನಗರದ ಎಂಕೆಕೆ, ರಸ್ತೆಯಲ್ಲಿರುವ ಜಯಪ್ರಕಾಶ್ ನಾರಾಯಣ್ ಹೈಸ್ಕೂಲ್ ನಲ್ಲಿ ಎಸ್. ಎಸ್.ಎಲ್.ಸಿ, ವಿದ್ಯಾಭ್ಯಾಸದ ನಂತರ ಅಡಕೆ ಬೆಳೆಗಳ ಬಗ್ಗೆ ಆಸಕ್ತಿ ವಹಿಸುತ್ತಾರೆ. ಮೇಲಾಗಿ ವಿದ್ಯಾಭ್ಯಾಸ ಸಂದರ್ಭದಲ್ಲಿ ಜಿ.ಎನ್. ದೇವರಾಜ್ ಕಬಡ್ಡಿ, ಕುಸ್ತಿ, ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು,

ಹೀಗೆ ತಾನೊಂದು ಮಾದರಿ ತೋಟವನ್ನು ನಿರ್ಮಿಸಬೇಕು ಈ ಮೂಲಕ ಕೃಷಿ ಸಾಧಕನಾಗಿ ರಾಜ್ಯದಲ್ಲಿಯೇ ಮಾದರಿಯಾಗಬೇಕು ಜೊತೆಗೆ ದೇಶಿ ಕೃಷಿ ಸಂಪ್ರದಾಯವನ್ನು ಉಳಿಸಿ ಬೆಳೆಸಬೇಕು ಎಂಬುವ ಹಿನ್ನಲೆಯಲ್ಲಿ ಸಾಕಷ್ಟು ಶ್ರಮವಹಿಸಿದರು ತೋಟಗಾರಿಕಾ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಉತ್ತಮ ತಜ್ಞರುಗಳಿಂದ ಮಾಹಿತಿಗಳನ್ನು ಕಲೆ ಹಾಕಿದ್ದರಲ್ಲದೇ ಅನ್ಯ ತೋಟಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ತೋಟ ಮಾಡಲು ಮುಂದಾದರು.

Hosahalli Devaraj Agriculture Wonder

ಆದಾಗ ಆದ ಅನುಭವವೇ ಅಡಕೆ ಹಾಗೂ ತೆಂಗು ಸಸಿಗಳನ್ನು ಬೃಹತ್ ಮಟ್ಟದಲ್ಲಿ ರಾಜ್ಯದ ವಿವಿದೆಡೆ ವಿತರಿಸಿ ಉತ್ತಮ ಇಳುವರಿಗೆ ರೈತ ಮಾಹಿತಿಗಳನ್ನು ದೇಶಿ ಪದ್ದತಿಯಲ್ಲೇ ನೀಡಬೇಕೆಂದು ಅಂದು ನಿರ್ಧರಿಸಿ ಬಿಟ್ಟಿದ್ದರು. ಬಹುಶಃ ಆ ಘಟನೆ ನಡೆಯದೇ ಇದ್ದಿದ್ದರೇ ಇಂದು ಲಕ್ಷಾಂತರ ಸಸಿಗಳನ್ನು ರೈತರಿಗೆ ವಿತರಿಸುವ ಕೃಷಿಕನಾಗಿ ಹೊರ ಹೊಮ್ಮುತ್ತಿರಲಿಲ್ಲವೇನೋ..?

ಅಂದು ಖಾಸಗಿ ನರ್ಸರಿಗೆ ಅಡಕೆ ಸಸಿಗಳನ್ನು ಖರೀದಿಸಲು ಜಿ.ಎನ್. ದೇವರಾಜ್ ಮುಂದಾಗಿದ್ದರು. ಆ ಸಂದರ್ಭದಲ್ಲಿ ನರ್ಸರಿ ಮಾಲೀಕನ ಜಬರ್ ದಸ್ತ್ ಹಾಗೂ ಮಾತನಾಡಿ ಅವಮಾನಿಸಿದ ಕ್ಷಣಗಳು ಇಂದಿಗೂ ಮರೆತಿಲ್ಲ ವೆಂದು ಹೇಳುತ್ತಾರೆ. ಹೊಸಳ್ಳಿ ಜಿ.ಎನ್. ದೇವರಾಜ್ ರವರು.

ಆದಾಗಲೇ ಅವರಿಗೆ 25 ವರ್ಷದ ಪ್ರಾಯ ಅಂದು ನಿರ್ಧರಿಸಿ ಖಾಲಿ ಇದ್ದ ಭೂಮಿಯಲ್ಲಿ ಅಡಕೆ ಸಸಿಗಳನ್ನು ಕೂರಿಸಿ ತೋಟ ಮಾಡಿಯೇ ಬಿಟ್ಟರು. ರಾಸಾಯನಿಕ ಗೊಬ್ಬರಗಳನ್ನು ದೂರತಳ್ಳಿ ದೇಶಿ ಪದ್ದತಿಯ ಗೊಬ್ಬರಗಳನ್ನು ತಯಾರಿಸಿ ಕಾಲ ಕಾಲಕ್ಕೆ ನೀರುಣಿಸಿ ಉತ್ತಮ ಅಡಕೆ ತೋಟ ಮಾಡಿದ್ದಾರೆ.

ಈ ತೋಟದಲ್ಲಿಯೇ ಕಳೆದ ಹತ್ತು ವರುಷಗಳಿಂದಲೂ ಸಾವಯವ ಗೊಬ್ಬರಗಳನ್ನು ತಯಾರಿಸಿ ಉತ್ತಮ ಅಡಕೆ ಸಸಿಗಳನ್ನು ಬೆಳೆಸಿ ರೈತರಿಗೆ ಮನದಟ್ಟು ಮಾಡಿ ವಿತರಿಸುತ್ತಿದ್ದಾರೆ. ಆದಾಗ ಆರಂಭಿಸಿದ್ದ 5000 ಸಸಿಗಳಿಂದ ಇದೀಗ ಸುಮಾರು 2 ಲಕ್ಷ ಉತ್ತಮ ಅಡಕೆ ಸಸಿಗಳು ಬೆಳೆದು ಹಸಿರು ಸಿಂಚನದಲ್ಲಿ ಆರೋಗ್ಯಕರವಾಗಿ ನೋಡುಗರ ಕಣ್ಮನ ಸೆಳೆಯುತ್ತಿದೆ.

ಅಡಕೆ ಸಸಿ ಬೆಳೆಸುವಿಕೆಯಲ್ಲಿ.. ಅಡಕೆ ಗೋಟುಗಳನ್ನು ಯಾವ ವರುಷದ ಅಡಕೆ ಮರದಿಂದ ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ಯಾವ ರೀತಿ ಪೋಷಣೆ ಮಾಡಬೇಕು ಕಾಲ ಕಾಲಕ್ಕೆ ಅನುಸರಿಸುವ ಪದ್ದತಿಗಳು, ಜಾಗ ಬದಲಿಸುವಿಕೆ, ತೋಟದ ನೈಸರ್ಗಿಕವಾದ ವಾತಾವರಣ, ದೇಶಿ ಪದ್ದತಿಯಲ್ಲಿ ಸಾವಯುವ ಗೊಬ್ಬರಗಳನ್ನು ಬಳಸುವುದರಿಂದ ಅಡಕೆ ಮರಗಳು ನೂರು ವರುಷ ಯಾವುದೇ ರೋಗ ಬಾಧೆಯಿಲ್ಲದೆ ಉತ್ತಮ ಇಳುವರಿಯನ್ನು ನೀಡುತ್ತದೆ.

ಹೊಸಳ್ಳಿ ಜಿ.ಎನ್. ದೇವರಾಜ್ ಜಿಲ್ಲೆಯಲ್ಲಿಯೇ ಕೃಷಿರಂಗದಲ್ಲಿ ಸಾಕಷ್ಟು ಸಾಧಿಸಿರುವುದು ತೋಟಗಾರಿಕಾ ಇಲಾಖಾಧಿಕಾರಿಗಳಿಗೆ ಮಾಹಿತಿ ಇಲ್ಲವೆಂಬುದೇ ಸೋಜೀಗದ ಸಂಗತಿಯಾಗಿದೆ.

ಹೊಸಳ್ಳಿ ಜಿ.ಎನ್. ದೇವರಾಜ್ ರವರ ಅಡಕೆ ತೋಟವೀಗ ವೀಕ್ಷಣೆಯ ತಾಣವಾಗಿದೆ. ಚಿಕ್ಕ ವಯಸ್ಸಿನಿಂದಲೇ ಅಡಕೆ ಬೆಳೆಯಲ್ಲಿ ತೊಡಗಿಸಿಕೊಂಡು ಮಾಡಿರುವ ಕೃಷಿ ಸಾದನೆಗೆ ಸರಕಾರ..ಕೃಷಿ ಸಂಸ್ಥೆಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಾಗಿದೆ.ಹೊಸಳ್ಳಿ ಜಿ.ಎನ್. ದೇವರಾಜ್ ರವರ ಅಡಕೆ ತೋಟ ವೀಗ ವೀಕ್ಷಣೆಯತಾಣವಾಗಿರುವುದು ಶ್ಲಾಘನೀಯವಾಗಿದೆ. ಹೆಚ್ಚಿನ ಮಾಹಿತಿಗೆ ಹೊಸಳ್ಳಿ ದೇವರಾಜ್ ಮೊಬೈಲ್:94482 38299 ಸಂಪರ್ಕಿಸಿಬಹುದಾಗಿದೆ.

English summary
Shimoga District Thirthahalli taluk progressive farmer Hosahalli GN Devaraj has proved organic farming can solution for many problems faced by Areca nut growers. But, Unfortunately Devaraj's success in not noticed by government agriculture departments
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X