ಕನ್ನಡವನ್ನು ಇಲ್ಲಿ, ಅಲ್ಲಿ, ಅಂತರ್ಜಾಲದಲ್ಲಿ, ಕೊನೇಪಕ್ಷ ಕರ್ನಾಟಕದಲ್ಲಿ ಉಳಿಸಿ ಬೆಳೆಸುವಲ್ಲಿ ಕನ್ನಡಿಗರಿಗೆ ಇರುವ ಜವಾಬ್ದಾರಿ ಬಹು ದೊಡ್ಡದು. ಕನ್ನಡಿಗರಿಂದಲೇ ಕನ್ನಡದ ಬಗ್ಗೆ ಇರುವ ಅಸಡ್ಡೆಗಳಿಗೆ ಕಾರಣಗಳನ್ನು ಹುಡುಕಿ ಅವಕ್ಕೆ ಶೀಘ್ರಗತಿಯಲ್ಲಿ ಪರಿಹಾರೋಪಾಯಗಳನ್ನು ಹುಡುಕಿಕೊಳ್ಳುವುದು ಕೂಡ ಅಷ್ಟೇ ಮಹತ್ವದ್ದು. ಅನ್ಯ ಭಾಷೆಗಳಿಗೆ ಬೇರುಮಟ್ಟದಲ್ಲಿ ನೀರುಣಿಸಿ, ಗೊಬ್ಬರ ಹಾಕಿ ಬೆಳೆಸಿರುವ ನಾವು ಅದನ್ನು ಕಿತ್ತುಹಾಕಿ ಅದೇ ಸ್ಥಳದಲ್ಲಿ ಕನ್ನಡದ ಗಿಡ ನೆಟ್ಟು ನೀರು ಗೊಬ್ಬರ ಉಣಿಸದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ.
ಕೆಲ ಉದಾಹರಣೆಗಳನ್ನು ಗಮನಿಸೋಣ. ಕನ್ನಡದಲ್ಲಿ ಮಕ್ಕಳಿಗಾಗಿ ಇರುವ ಪತ್ರಿಕೆಗಳ ಬಗ್ಗೆ ಪ್ರಸ್ತಾಪಿಸಿದಾಗ, ಅಂಥ ಪತ್ರಿಕೆಗಳೆಲ್ಲಿವೆ? ಈಗ ಅವನ್ನು ಯಾರು ಓದ್ತಾರೆ? ಅಂತ ಅಸಡ್ಡೆಯಿಂದ ಕೇಳೋರೆ ಜಾಸ್ತಿ. ಅದನ್ನು ಹುಡುಕಿಕೊಂಡು ಹೋಗಿ ಕೊಳ್ಳುವವರು ಎಷ್ಟು ಜನ? ಇದೇ ಸ್ಥಿತಿ ಕನ್ನಡ ದಿನಪತ್ರಿಕೆಗಳಿಗೂ ಬಂದೊದಗಿದೆ. ಆಂಗ್ಲ ಪತ್ರಿಕೆಗಳಲ್ಲಿ ಕನ್ನಡಿಗರ ಅಸಡ್ಡೆಯಾಗುತ್ತಿದೆ ಎಂದು ತಿಳಿದೂ ಪ್ರಶ್ನಿಸಲು ಯಾರೂ ಮುಂದಾಗುವುದಿಲ್ಲ. ಅಸಲಿಗೆ ಕನ್ನಡಿಗರು ಕನ್ನಡ ಪತ್ರಿಕೆಗಳನ್ನು ಓದುವ, ಕನ್ನಡವನ್ನು ಪ್ರೀತಿಸುವ ಕ್ರಿಯೆಗೆ ಕುಂದುಂಟಾಗುತ್ತಿದೆ.
ಕರ್ನಾಟಕದಲ್ಲಿ ಕನ್ನಡ ಬೆಳೆದಿಲ್ಲ, ಅಸಡ್ಡೆಗೆ ಗುರಿಯಾಗುತ್ತಿದೆ, ತಕ್ಕ ಸ್ಥಾನಮಾನ ಸಿಗುತ್ತಿಲ್ಲ ಎನ್ನುವುದು ಎಷ್ಟು ಸತ್ಯವೋ ಇದಕ್ಕೆ ಕಾರಣರು ಕೂಡ ನಾವೇ ಅನ್ನುವುದು ಕೂಡ ಅಷ್ಟೇ ಸತ್ಯ. ಈ ಕಹಿ ಸತ್ಯವನ್ನು ಕನ್ನಡಿಗರು ಒಪ್ಪಿಕೊಳ್ಳಲೇಬೇಕು.
ಈಗ ಜನಪ್ರಿಯ ಹುಡುಕು ತಾಣ ಗೂಗಲ್ ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಜಗತ್ತಿನ ಎಲ್ಲ ಭಾಷೆಗಳಿಗೂ ಮನ್ನಣೆ ದೊರೆತಿದೆ, ಆದರೆ ಕನ್ನಡ ಸುದ್ದಿಗಳು ದುರ್ಬೀನು ಹಾಕಿ ಹುಡುಕಿದರೂ ಸಿಕ್ಕುವುದಿಲ್ಲ. ಇದಕ್ಕೆ ಗೂಗಲ್ ನವರನ್ನು ಬೈದು ಪ್ರಯೋಜನವಿಲ್ಲ. ಕನ್ನಡಕ್ಕೆ ಆ ತಾಣದಲ್ಲಿ ಸ್ಥಾನ ದೊರಕಿಸಿಕೊಡಲು ಬಡಿದಾಡಿಯೂ ಪ್ರಯೋಜನವಿಲ್ಲ. ಆದರೆ, ಆ ಸ್ಥಾನ ದಕ್ಕಿಸಿಕೊಳ್ಳಲು ಕನ್ನಡಿಗರಾದ ನಾವು ಏನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ. ಮತ್ತು ಗೂಗಲ್ ಅಗತ್ಯಗಳಿಗೆ ತಕ್ಕಹಾಗೆ ಕನ್ನಡಿಗರು ಪ್ರತಿಸ್ಪಂದಿಸಬೇಕಾದಿದೆ.
ಇನ್ನೊಂದು ಮಹತ್ವದ ವಿಷಯವೆಂದರೆ, ಕನ್ನಡ ಬ್ಲಾಗುಗಳೆಲ್ಲ ಕನ್ನಡದ ಎಲ್ಲ ಬ್ಲಾಗುಗಳೊಂದಿಗೆ, ಅಂತರ್ಜಾಲ ತಾಣಗಳೊಂದಿಗೆ, ನೆಟ್ವರ್ಕಿಂಗ್ ವೆಬ್ ಸೈಟ್ ಗಳೊಂದಿಗೆ ಸೇತುವೆ ಕಲ್ಪಿಸಬೇಕಾಗಿದೆ. ಈ ವಿಷಯದಲ್ಲಿ ಸಂಕುಚಿತ ಭಾವನೆ ಬದಿಗಿಟ್ಟು ಮುಕ್ತಮನಸ್ಸಿನಿಂದ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕು.
ಗೂಗಲ್ ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಕನ್ನಡಕ್ಕೆ ಸ್ಥಾನವೇಕಿಲ್ಲ ಎಂಬ ಪ್ರಶ್ನೆಗೆ ದಟ್ಸ್ ಕನ್ನಡದ ನಿತ್ಯ ಓದುಗ ಗೌತಮ್ ಎಂಬುವವರು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಅದನ್ನು ಇಲ್ಲಿ ಓದಿರಿ.
ಕನ್ನಡದ ಬಳಕೆಗೆ ಏನು ಮಾಡಬೇಕು?
* ಮೂಲಭೂತವಾಗಿ ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
* ಅಂತರ್ಜಾಲದಲ್ಲಿ ಕನ್ನಡದಲ್ಲಿ ಲಭ್ಯವಿರುವ ಮತ್ತು ಯುನಿಕೋಡ್ ಇರುವ ಎಲ್ಲ ತಾಣಗಳನ್ನು ಕಡ್ಡಾಯವಾಗಿ ಓದುತ್ತ ಪ್ರೋತ್ಸಾಹಿಸಬೇಕು.
* ಸರ್ಚ್ ಇಂಜಿನ್ ಗಳಲ್ಲಿ ಮಾಹಿತಿಯನ್ನು ಹೆಕ್ಕಿ ತೆಗೆಯಲು ಕನ್ನಡ ಪದಗಳನ್ನೇ ಯಥೇಚ್ಛವಾಗಿ ಬಳಸಬೇಕು.
* ಉಳಿದ ಎಲ್ಲ ಕನ್ನಡ ಅಂತರ್ಜಾಲ ತಾಣಗಳಲ್ಲಿ (ಮುದ್ರಣ ಮಾಧ್ಯಮವೂ ಸೇರಿದೆ) ಯುನಿಕೋಡ್ ಬಳಸಲು ಒತ್ತಾಯಿಸಬೇಕು.
ಇದನ್ನೂ ಓದಿ : ಗೂಗಲ್ ಯಂತ್ರವನ್ನು ಓಲೈಸುವುದು ಹೇಗೆ? »
ಗೂಗಲ್ ನಲ್ಲಿ ಕನ್ನಡ ಇಲ್ಲದಿರುವ ಬಗ್ಗೆ ದೂರನ್ನು ಇಲ್ಲಿ ದಾಖಲಿಸಿ

Oneindia Login