To check Oneindia Kannada on your Mobile
go to:   http://m.oneindia.in/kannada/
  •  

ಗೂಗಲ್ ಯಂತ್ರವನ್ನು ಓಲೈಸುವುದು ಹೇಗೆ?

Why Kannada is missing on Google news?
ಗೂಗಲ್ ಅವರ ನ್ಯೂಸ್ ಪೋರ್ಟಲ್ ಒಳಗೆ ಸುದ್ದಿಗಳನ್ನು ಹಲವಾರು ಭಾಷೆಗಳಲ್ಲಿ ಓದಬಹುದು ಎಂದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ ಅಂದುಕೊಳ್ಳುತ್ತೇನೆ. ಆದರೆ ಇದರಲ್ಲಿ ವಿಚಿತ್ರವೋ ಏನೋ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೆಲ್ಲಾ ಈ ತಾಣದಲ್ಲಿ ಸುದ್ದಿಗಳನ್ನು ಓದಲು ಸಿಗುತ್ತೆ, ಆದರೆ ಕನ್ನಡದಲ್ಲಿ ಮಾತ್ರ ಸಿಗೊಲ್ಲ! ಅಂತೂ ಇದೊಂದು ಬೇಸರ ತಂದಿರುವ ವಿಷಯವಾಗಿದೆ.

ಇದರ ಬಗ್ಗೆ ಅಂತರ್ಜಾಲದಲ್ಲಿ ಜನ ಏನು ಹೇಳ್ತಿದಾರೆ ಅಂತ (ಗೂಗಲ್ ಮೂಲಕವೇ) ಹುಡುಕಿದಾಗ ಈ ಎರಡು ಬ್ಲಾಗುಗಳು (ಲಿಂಕುಗಳು) ಸಿಕ್ಕಿದವು! ಏನ್ ಗುರು, ಸಂಪದ ಬ್ಲಾಗ್

ಈ ಬರಹಗಳನ್ನು ಓದಿದ ಬಳಿಕ ಈ ರೀತಿ ಗೂಗಲ್ ಅವರ ಒಂದು ಪೋರ್ಟಲ್ ಒಳಗೆ ಕನ್ನಡ ಬಿಟ್ಟು ಬೇರೆಲ್ಲಾ ದಕ್ಷಿಣ ಭಾರತದ ಭಾಷೆಗಳಿಗೆ ಜಾಗ ಇದೆಯೆಂದರೆ ಇದರ ಮೂಲದಲ್ಲಿ ಕನ್ನಡದ ಜನರಿಗೇ ಸಂಬಂಧಿಸಿದಂತೆ ಒಂದು ಕಾರಣ ಇರಬೇಕೆಂದು ನನಗೆ ಅನಿಸಿದೆ. ಗೂಗಲ್ ನವರು ಯಾವುದೇ ಒಂದು ಭಾಷೆಯ ಜನರನ್ನು ನಿರ್ಲಕ್ಷಿಸುವ ಕೆಲಸ ಮಾಡುವುದಿಲ್ಲ. ಆದರೂ ಇವರ ತಾಣದಲ್ಲಿ ಕನ್ನಡದಲ್ಲಿ ಸೇವೆ ಸಿಗದಿರುವುದರಕ್ಕೆ ಎರಡು ಕಾರಣಗಳಿರಬಹುದು.

ಕನ್ನಡಿಗರು ಹೆಚ್ಚಾಗಿ ಅಂತರ್ ಜಾಲ ಬಳಸುವುದಿಲ್ಲ ಎನ್ನುವುದು ಒಂದು, ಇನ್ನೊಂದು ಕನ್ನಡ ಸುದ್ದಿ ಸಾಮಗ್ರಿ ಸಿಗುತ್ತಿಲ್ಲ ಎನ್ನುವುದಾಗಿರಬಹುದು. ಆದರೆ ಕನ್ನಡದಲ್ಲಿರುವ, ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದ ಸುದ್ದಿಯನ್ನು ವರದಿ ಮಾಡುತ್ತಿರುವ ಈ ತಾಣದಂತ ಹಲವಾರು ತಾಣಗಳು ಅಂತರ್ಜಾಲದಲ್ಲಿರುವುದು ನೋಡಿದರೆ ಗೂಗಲ್ ನವರಿಗೆ ಕನ್ನಡ ಬಿಡಲು ಕನ್ನಡ ಆನ್‍ಲೈನ್ ಅಕ್ಷರ ಸಂಪತ್ತು ಇಲ್ಲವೆಂಬುದ ಕಾರಣವಾಗಿರಲಾರದು.

ಕನ್ನಡಿಗರು ಅಂತರ್ಜಾಲದಲ್ಲಿ ಕುಳಿತು ಓದುತ್ತಿರುವುದು ಯಾವ ಭಾಷೆಯ ವಸ್ತುವನ್ನು? ಕನ್ನಡಿಗರೇ ಕನ್ನಡದ ಅಂತರ್ಜಾಲ ಸುದ್ದಿ ಓದುತ್ತಿಲ್ಲವೆಂದರೆ ಆಶ್ಚರ್ಯದ ವಿಷಯವೇ! ಸದ್ಯಕ್ಕೆ ಸಿಗುವಂತಹ ಅಂಕಿಅಂಶ ನೋಡಿದರೆ (ಬೆಂಗಳೂರಿನ ಉದಾಹರಣೆಯನ್ನೇ ನೋಡಿದರೆ) ಬೇರೆಲ್ಲಾ ಭಾಷಿಕರಿಗಿಂತ ಕನ್ನಡಿಗರೇ ಅತಿ ಹೆಚ್ಚು ಸಂಖ್ಯೆಯಲ್ಲಿ ವಾಸವಾಗಿರುವ ಇಲ್ಲಿ ಕನ್ನಡ ದಿನಪತ್ರಿಕೆಗಳ ಮಾರಾಟ ಇಂಗ್ಲಿಷ್ ಪತ್ರಿಕೆಯಷ್ಟು ಹೆಚ್ಚು ಇಲ್ಲ. ಇದು ಕನ್ನಡಿಗರಲ್ಲಿ ಹಲವರು ಕನ್ನಡ ದಿನಪತ್ರಿಕೆಗಳನ್ನೇ ತರಿಸುತ್ತಿಲ್ಲ ಮತ್ತು ಕನ್ನಡದಲ್ಲಿ ಪತ್ರಿಕೆ ಓದುವ ಅಭ್ಯಾಸವನ್ನೇ ಬೆಳೆಸಿಕೊಂಡಿಲ್ಲ ಎಂದು ತೋರಿಸುತ್ತಿದೆ.

ಹೀಗೆ ದಿನದ ಸುದ್ದಿಯನ್ನು ನಮ್ಮ ಮನೆಬಾಗಿಲಿಗೆ ಒಯ್ದು ತರುತ್ತಿರುವ ಆ ಕನ್ನಡದ ದಿನಪತ್ರಿಕೆಯನ್ನೇ ನಾವು ಓದಲು ಮುಂದಾಗದ ದಿನಗಳು ಇರುವವರೆಗೂ ಅಂತರ್ಜಾಲದಲ್ಲಿ ಇನ್ನು ಕನ್ನಡದಲ್ಲಿ ಸುದ್ದಿ ಓದುವ ಅಭ್ಯಾಸ ಹೇಗೆ ತಾನೆ ಬೆಳೆಯಬೇಕು? ಹೇಗೆ ತಾನೆ ಅಂತರ್ಜಾಲದಲ್ಲಿ ಮಾಹಿತಿ ಹುಡುಕಾಟವನ್ನೂ ಕನ್ನಡದಲ್ಲಿ ಮಾಡಿಯಾರು? ಈ ಪ್ರಶ್ನೆಗೆ ನಾವೆಲ್ಲಾ ಕನ್ನಡಿಗರಾಗಿ, ಗ್ರಾಹಕರಾಗಿ ಉತ್ತರ ಕೊಡಲು ಮುಂದಾಗಲೇಬೇಕು.

ಕನ್ನಡದಲ್ಲಿ ದಿನಪತ್ರಿಕೆಯೊಂದು ಮುದ್ರಣಗೊಳ್ಳುವುದು ಹಳ್ಳಿ ಗಾಡು ಪ್ರದೇಶಗಳಲ್ಲಿ ಮಾತ್ರ ಮಾರಾಟವಾಗಲೆಂದೇ? ಅದು ನಗರಗಳಲ್ಲಿ ಮಾರಾಟಕ್ಕೆ ಯೋಗ್ಯವಲ್ಲವೇ? ಅಥವಾ ಕೇವಲ ಬೋಂಡಾ ಬಜ್ಜಿ ಪೊಟ್ನಗಳಿಗೆ ಮಾತ್ರ ಯೋಗ್ಯವಾಗಿ ಉಳಿಯಬೇಕೋ ಈ ಪತ್ರಿಕೆಗಳ ಹಾಳೆಗಳು? ಇವತ್ತು ನೀವು ಓದುವ ಪತ್ರಿಕೆ ಅಷ್ಟು ಸರಿಯಿಲ್ಲ ಎಂದನಿಸಿದರೆ ಅದು ಸರಿಯಾಗಿಸಲೂ ನಾವೇ, ಕನ್ನಡಿಗ ಗ್ರಾಹಕರಾಗಿ ಕಾರಣರಾಗಬಹುದು, ಹೊರತು ಮುಂಬೈಯಲ್ಲಿ ಕೂತಿರುವ ಮರಾಠಿಗನೋ ಚೆನ್ನೈನಲ್ಲಿರುವ ತಮಿಳನೋ ಅಲ್ಲ.

ನಮ್ಮ ನಾಡಿನ ಈ ಪತ್ರಿಕೆಗಳಲ್ಲಿ ಏನಿರಬೇಕು ಅಂತ ನಾವೇ ಹೇಳಬೇಕು, ಅದು ಬಿಟ್ಟು ಯಾವ ಭಾಷೆಯ ಪತ್ರಿಕೆಯಲ್ಲಿ ಇದು ಸಿಗುತ್ತೋ ಅದನ್ನೇ ಓದುವುದು ಎಂತಹ ಬುದ್ದಿವಂತರ ಕೆಲಸ ಅನಿಸಿಕೊಳ್ಳುತ್ತೆ ಅಲ್ವ?

ಬನ್ನಿ ಗೆಳೆಯರೇ, ನಾವೆಲ್ಲರೂ ಈ ಕೆಳಗಿನ ಕೆಲವು ಕೆಲಸಗಳ ಮೂಲಕ ಕನ್ನಡ ದಿನಪತ್ರಿಕೆಗಳು ಹಾಗೂ ಅಂತರ್ಜಾಲದಲ್ಲಿನ ಕನ್ನಡ ನ್ಯೂಸ್ ತಾಣಗಳನ್ನು ಹೆಚ್ಚು ಉಪಯೋಗಿಸೋಣ.

1. ನಮ್ಮ ಮನೆಗಳಲ್ಲಿ ಕನಿಷ್ಠ ಒಂದು ಕನ್ನಡ ದಿನಪತ್ರಿಕೆ ತರಿಸೋಣ.
2. ಕನ್ನಡ ದಿನಪತ್ರಿಕೆ ಓದುವ ಅಭ್ಯಾಸವಿದ್ದು ಅದು ಸಿಗದಿದ್ದಾಗ ನಾವು ಅಂತರ್ಜಾಲದಲ್ಲೂ ಕೂಡ ಕನ್ನಡ ನ್ಯೂಸ್ ಗಳನ್ನು ಓದೋಣ.
3. ರೈಲ್ವೆ ನಿಲ್ದಾಣ ಹಾಗು ಬಸ್ ಸ್ಟಾಪ್ ಗಳಲ್ಲಿ ಪತ್ರಿಕೆ ಕೊಳ್ಳುವುದಾದ್ರೆ ಕನ್ನಡ ಪತ್ರಿಕೆಗಳನ್ನೇ ಮೊದಲು ಕೊಳ್ಳೋಣ.
4. ಮನೆಗಳಲ್ಲಿ ಮಕ್ಕಳಿಗೆ ಕನ್ನಡ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸೋಣ.
5. ಲೈಬ್ರರಿಗಳಲ್ಲಿ ಅಥವಾ ಇನ್ನ್ಯಾವುದೇ ಸ್ಥಳಗಳಲ್ಲಿ ಕನ್ನಡ ಪತ್ರಿಕೆ ಕೇಳಿ ಪಡೆಯೋಣ.

« ಓದಲು ಮರೆಯದಿರಿ : ಗೂಗಲ್ಲಿಗೆ ಕನ್ನಡ ಸುದ್ದಿ ಅಸ್ಪೃಶ್ಯವಾಯಿತೆ?
ಫೆಬ್ರವರಿ 3, 2010 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
Robin Sharma Live in Bangalore
2nd ODI , Sheikh Zayed Stadium, Abu Dhabi
England won by 20 runs

ಗೂಗಲ್ ಗುರು ರಾಜೀವ್ ಮೊಟ್ವಾನಿ ನಿಗೂಢ ಸಾವು

ವಾಷಿಂಗ್ಟನ್, ಜೂ. 8 : ಗೂಗಲ್ ಸಂಸ್ಥೆಯ ಸಹಸಂಸ್ಥಾಪಕ ರಾಜೀವ್ ಮೊಟ್ವಾನಿ (47) ಅವರು ತಮ್ಮ ಕ್ಯಾಲಿಪೋರ್ನಿಯಾ ನಿವಾಸದ ಈಜುಕೊಳದಲ್ಲಿ ಮುಳುಗಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ಖರೀದಿಸಿದ್ದ ಮನೆಯ ಹಿಂಭಾಗದ ಈಜುಕೊಳದಲ್ಲಿ ಶುಕ್ರವಾರ ಬೆಳಗ್ಗೆ ಜಲಸಮಾಧಿಯಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಅವರ ಸಾವಿನ ಕಾರಣದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ......
User Comments
ರಾಮೇಶ್ವರ ಭಟ್ S 21 May 2010 09:09 pm
your information regarding kannada w riting in compluter is good
Ramdas Pai 01 Mar 2010 01:37 pm
Sir nammalli anEka janaa patrakartarige ms wordnllli english nalliyu saha type madalu baruvudilla nAvu modlu knnadadalli type maduvudannu kalisabEu. nidhanavaagi janaru kannadadlli suddi samaachaaravannu odalu bahalashatu janaru iddaare avarige barahagArara mattu veb taanagala korate ide
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article